ಕೈಲಿಯನ್ ಎಂಬಪ್ಪೆ ಮತ್ತು ಲಿಯೋನೆಲ್ ಮೆಸ್ಸಿ 
ಕ್ರೀಡೆ

FIFA World Cup 2026: ಗೋಲ್ಡನ್ ಬೂಟ್ ರೇಸ್ ನಲ್ಲಿ ಬಿಗ್ ಟ್ವಿಸ್ಟ್!

ವಿಶ್ವಕಪ್ ಇತಿಹಾಸದಲ್ಲಿ ಅತಿ ಹೆಚ್ಚು ಗೋಲು ಗಳಿಸಿದವರ ಪಟ್ಟಿಯಲ್ಲಿ ಫ್ರಾನ್ಸ್ ತಂಡದ ನಾಯಕ ಕೈಲಿಯನ್ ಎಂಬಪ್ಪೆ ಅಗ್ರಸ್ಥಾನಕ್ಕೇರಿದರು.

ನ್ಯೂಜೆರ್ಸಿ: ಫಿಫಾ ವಿಶ್ವಕಪ್‌ನ ಮೂರನೇ ಸ್ಥಾನಕ್ಕಾಗಿನ ಶನಿವಾರ ನಡೆದ ಫ್ರಾನ್ಸ್ ಮತ್ತು ಇಂಗ್ಲೆಂಡ್ ನಡುವಿನ ಪಂದ್ಯದಲ್ಲಿ ಭರ್ಜರಿ ಗೋಲುಗಳ ಸುರಿಮಳೆಯಾಯಿತು. ಇದರಲ್ಲಿ ಥಾಮಸ್ ಟುಚೆಲ್ ನೇತೃತ್ವದ ಇಂಗ್ಲೆಂಡ್ ತಂಡ 2018ರ ವಿಶ್ವಕಪ್ ವಿಜೇತರನ್ನು 6-4 ಅಂತರದಿಂದ ಸೋಲಿಸಿ ಜಯಭೇರಿ ಬಾರಿಸಿತು.

ಬುಕಾಯೊ ಸಾಕಾ ಅವರ ಹ್ಯಾಟ್ರಿಕ್ ಗೋಲುಗಳ ನೆರವಿನಿಂದ ಇಂಗ್ಲೆಂಡ್ ತಂಡ ಗೆಲುವಿನೊಂದಿಗೆ ಟೂರ್ನಿಯಿಂದ ಹೊರ ಬಿದ್ದಿತು. ಆದರೆ, ವಿಶ್ವಕಪ್ ನಲ್ಲಿ ಅತಿ ಹೆಚ್ಚು ಗೋಲು ಗಳಿಸಿದವರ ಪಟ್ಟಿಯಲ್ಲಿ ಫ್ರಾನ್ಸ್ ತಂಡದ ನಾಯಕ ಕೈಲಿಯನ್ ಎಂಬಪ್ಪೆ ಅಗ್ರಸ್ಥಾನಕ್ಕೇರಿದರು.

ಇಂಗ್ಲೆಂಡ್ ವಿರುದ್ಧದ ಪಂದ್ಯದಲ್ಲಿ ಎರಡು ಗೋಲುಗಳನ್ನು (ಬ್ರೇಸ್) ಗಳಿಸುವ ಮೂಲಕ, ಎಂಬಪ್ಪೆ ವಿಶ್ವಕಪ್‌ಗಳಲ್ಲಿ ಅತಿ ಹೆಚ್ಚು ಗೋಲು ಗಳಿಸಿದ ಆಟಗಾರನಾಗಿ ಲಿಯೋನೆಲ್ ಮೆಸ್ಸಿಯನ್ನು ಹಿಂದಿಕ್ಕಿದರು ಹಾಗೂ ಟೂರ್ನಿಯ ಇತಿಹಾಸದಲ್ಲಿ ತಮ್ಮ 21 ಮತ್ತು 22ನೇ ಗೋಲುಗಳನ್ನು ದಾಖಲಿಸಿದರು.

ಗೋಲ್ಡನ್ ಬೂಟ್ ರೇಸ್ ನಲ್ಲಿ ಇರುವವರ ಪಟ್ಟಿ ಇಂತಿದೆ:

1. Kylian Mbappe: Goals: 10, Assists: 4

2. Lionel Messi: Goals: 8, Assists: 4

3. Erling Haaland: Goals: 7, Assists: 0

4. Jude Bellingham: Goals: 7, Assists: 1

5. Harry Kane: Goals: 6, Assists: 1

6. Ousmane Dembele: Goals: 6, Assists: 2

ಮೆಸ್ಸಿಯಿಂದಾಗಿ ಗೋಲ್ಡನ್ ಬೂಟ್ ರೇಸ್ ನಲ್ಲಿ ಬಿಗ್ ಟ್ವಿಸ್ಟ್ ಉಂಟಾಗಿದೆ. ಅರ್ಜೆಂಟೀನಾ ಪರವಾಗಿ ಅಂತಾರಾಷ್ಟ್ರೀಯ ಮಟ್ಟದಲ್ಲಿ ಶಾಶ್ವತ ಹೆಸರು ಗಳಿಸಲು 39 ವರ್ಷದ ಮೆಸ್ಸಿ ಹೋರಾಡುತ್ತಿದ್ದಾರೆ. ಇದನ್ನು ಸಾಬೀತುಪಡಿಸಲು ಫೈನಲ್ ಪಂದ್ಯದಲ್ಲಿ ಹೆಚ್ಚಿನ ಗೋಲುಗಳನ್ನು ಗಳಿಸುವ ಗುರಿ ಹೊಂದಿದ್ದಾರೆ.

Follow KannadaPrabha channel on WhatsApp

  

Download the KannadaPrabha News app to follow the latest news updates

  

Subscribe and Receive exclusive content and updates on your favorite topics

  

Subscribe to KannadaPrabha YouTube Channel and watch Videos

'ಸಂಸತ್ ಚಲೋ'ಗೆ ಮಣಿದ ಮೋದಿ? ಧರ್ಮೇಂದ್ರ ಪ್ರಧಾನ್ ರಾಜೀನಾಮೆ ಸಾಧ್ಯತೆ; CJP ಜತೆ ಜೆಪಿ ನಡ್ಡಾ ಮಾತುಕತೆ!

Jantar Mantar protest: 'ಸಂಸತ್ ಚಲೋ' ಸಿಜೆಪಿ ಪ್ರತಿಭಟನಾಕಾರರ ಮೇಲೆ ಪೊಲೀಸರ ಲಾಠಿಚಾರ್ಜ್! Video

'ಸಂಸತ್ ಚಲೋ' ನಂತರವೂ ಉಪವಾಸ ಅಂತ್ಯಗೊಳಿಸಲ್ಲ; ಸತ್ಯಾಗ್ರಹ ಹಿಂಪಡೆಯಲು 3 ಷರತ್ತು ವಿಧಿಸಿದ ವಾಂಗ್‌ಚುಕ್!

'ಆ ಪಾತ್ರ ನಿರ್ವಹಿಸಿದ ರೀತಿ...': ನಟಿ ರಕುಲ್ ಪ್ರೀತ್ ಸಿಂಗ್ ಅಭಿನಯಕ್ಕೆ ರಾಕಿಂಗ್‌ ಸ್ಟಾರ್‌ ಯಶ್ ಫಿದಾ!

'ಸದನದಲ್ಲೇ ಮೂಳೆ ಮುರಿಯುತ್ತೇವೆ': ತಮಿಳುನಾಡು ಸಿಎಂ ವಿಜಯ್‌ಗೆ ಬೆದರಿಕೆ ಹಾಕಿದ ಡಿಎಂಕೆ ಶಾಸಕನ ಬಂಧನ