ನಿಶಾದ್ ಕುಮಾರ್ 
ಕ್ರೀಡೆ

India Open Jump Competition 2026: 2.10 ಮೀಟರ್ ಎತ್ತರಕ್ಕೆ ಜಿಗಿದು ನಿಶಾದ್ ಕುಮಾರ್ ಅದ್ಭುತ ಪ್ರದರ್ಶನ

ವಿಶೇಷವೆಂದರೆ, ನಿಶಾದ್ ಅವರು ಈ ಸ್ಪರ್ಧೆಯಲ್ಲಿ ಅಂಗವೈಕಲ್ಯವಿಲ್ಲದ (Able-bodied) ಸಾಮಾನ್ಯ ಕ್ರೀಡಾಪಟುಗಳ ಜೊತೆ ಸ್ಪರ್ಧಿಸಿದ್ದರು.

ಬೆಂಗಳೂರು: ಇತ್ತೀಚೆಗೆ ಬೆಂಗಳೂರಿನ ಕೆಂಗೇರಿಯಲ್ಲಿರುವ ಅಂಜು ಬಾಬಿ ಸ್ಪೋರ್ಟ್ಸ್ ಫೌಂಡೇಶನ್‌ನಲ್ಲಿ ನಡೆದ ಎರಡು ದಿನಗಳ ಇಂಡಿಯಾ ಓಪನ್ ಜಂಪ್ ಸ್ಪರ್ಧೆಯಲ್ಲಿ ಭಾರತದ ಹೈ ಜಂಪರ್ ನಿಶಾದ್ ಕುಮಾರ್ ಅವರು 2.10 ಮೀಟರ್ ಎತ್ತರಕ್ಕೆ ಜಿಗಿದು ಅದ್ಭುತ ಪ್ರದರ್ಶನ ನೀಡಿದ್ದಾರೆ.

ವಿಶೇಷವೆಂದರೆ, ನಿಶಾದ್ ಅವರು ಈ ಸ್ಪರ್ಧೆಯಲ್ಲಿ ಅಂಗವೈಕಲ್ಯವಿಲ್ಲದ (Able-bodied) ಸಾಮಾನ್ಯ ಕ್ರೀಡಾಪಟುಗಳ ಜೊತೆ ಸ್ಪರ್ಧಿಸಿದ್ದರು.

ಈ ಸ್ಪರ್ಧೆಯಲ್ಲಿ ಅವರು 5ನೇ ಸ್ಥಾನ ಪಡೆದಿದ್ದರೂ, ಅವರ ಜಿಗಿತದ ಎತ್ತರವು ಕ್ರೀಡಾ ವಲಯದಲ್ಲಿ ಭಾರಿ ಮೆಚ್ಚುಗೆಗೆ ಪಾತ್ರವಾಗಿದೆ.

ಈ ಬಾರಿ ನಿಶಾದ್ ಅವರು ಕೇವಲ ನಾಲ್ಕು ಹೆಜ್ಜೆಗಳ 'ಶಾರ್ಟ್ ಸ್ಟೆಪ್ಸ್' (Short steps) ತಂತ್ರವನ್ನು ಬಳಸಿ ಜಿಗಿದಿದ್ದಾರೆ. ಪ್ರಸ್ತುತ 2.14 ಮೀಟರ್‌ಗಳ ವೈಯಕ್ತಿಕ ದಾಖಲೆ ಹೊಂದಿರುವ ಅವರು, ಮುಂಬರುವ ಅಂತರಾಷ್ಟ್ರೀಯ ಸ್ಪರ್ಧೆಗಳಿಗಾಗಿ ಹೊಸ ತಂತ್ರಗಳನ್ನು ಅಳವಡಿಸಿಕೊಳ್ಳುತ್ತಿದ್ದಾರೆ.

ಕಳೆದ ಒಂದು ತಿಂಗಳಿನಿಂದ ಅಮೆರಿಕಾದಲ್ಲಿ ತರಬೇತಿ ಪಡೆದು ಬಂದಿರುವ ಅವರು, ಏಪ್ರಿಲ್ ಮೊದಲ ವಾರದಲ್ಲಿ ಮತ್ತೆ ನಾಲ್ಕು ತಿಂಗಳ ಅವಧಿಗೆ ಅಮೆರಿಕಾಕ್ಕೆ ತೆರಳಲಿದ್ದಾರೆ. ಖ್ಯಾತ ತರಬೇತುದಾರ ಜೆರೆಮಿ ಫಿಶರ್ ಅವರ ಮಾರ್ಗದರ್ಶನದಲ್ಲಿ ನಿಶಾದ್ ತಮ್ಮ ಮುಂದಿನ ಗುರಿಗಳಿಗಾಗಿ ಸಜ್ಜಾಗುತ್ತಿದ್ದಾರೆ.

ಹಿಮಾಚಲ ಪ್ರದೇಶದವರಾದ ನಿಶಾದ್ ಕುಮಾರ್ ಅವರು, ಈಗಾಗಲೇ ಟೋಕಿಯೊ ಮತ್ತು ಪ್ಯಾರಿಸ್ ಪ್ಯಾರಾಲಿಂಪಿಕ್ಸ್‌ನಲ್ಲಿ ಬೆಳ್ಳಿ ಪದಕ ಗೆದ್ದು ದೇಶಕ್ಕೆ ಕೀರ್ತಿ ತಂದಿದ್ದಾರೆ.

ಸಾಮಾನ್ಯ ಕ್ರೀಡಾಪಟುಗಳ ಜೊತೆಗಿನ ಸ್ಪರ್ಧೆಯು ನನ್ನ ಸಾಮರ್ಥ್ಯವನ್ನು ಹೆಚ್ಚಿಸಿಕೊಳ್ಳಲು ಮತ್ತು ಉತ್ತಮ ಲಯ ಕಂಡುಕೊಳ್ಳಲು ಸಹಕಾರಿಯಾಗಿದೆ. 2022 ರಲ್ಲಿಯೂ ಗುಜರಾತ್‌ನಲ್ಲಿ ನಡೆದ ಸ್ಪರ್ಧೆಯಲ್ಲಿ ಸಾಮಾನ್ಯ ಕ್ರೀಡಾಪಟುಗಳೊಂದಿಗೆ ಸ್ಪರ್ಧಿಸಿದ್ದೆ ಎಂದು ನಿಶಾದ್ ಅವರು ಹೇಳಿದ್ದಾರೆ.

ನಿಶಾದ್ ಕುಮಾರ್

ಈ ಸ್ಪರ್ಧೆಯ ಫಲಿತಾಂಶ ನನಗೆ ಮತ್ತಷ್ಟು ಪ್ರೇರಣೆ ನೀಡಿದೆ. ನಾಲ್ಕು ಹೆಜ್ಜೆಗಳ 'ಶಾರ್ಟ್ ಸ್ಟೆಪ್ಸ್ ತಂತ್ರ ಬಳಸಿ ಜಂಪ್ ಮಾಡಿದ್ದೆ. ಅದಕ್ಕೆ ಅನುಗುಣವಾಗಿಯೇ ತರಬೇತಿ ಪಡೆದಿದ್ದೆ. ನನ್ನ ಗುರಿಯ ಬಗ್ಗೆ ಏನನ್ನೂ ಹೇಳುವುದಿಲ್ಲ. ಕೆಲವೊಮ್ಮೆ ಅದು ತಪ್ಪಾಗಿಯೂ ಅರ್ಥೈಸಬಹುದು. ಈ ಬದಲಾವಣೆ ನನಗೆ ಫಲತಾಂಶ ನೀಡುತ್ತಿದೆ. ಏಪ್ರಿಲ್ ಮೊದಲ ವಾರದಲ್ಲಿ ಮತ್ತೆ ಅಮೆರಿಕಾಕ್ಕೆ ತೆರಳಿದ್ದು, ಅಲ್ಲಿ ನಾಲ್ಕು ತಿಂಗಳು ತರಬೇತಿ ಪಡೆಯಲಿದ್ದೇನೆಂದು ತಿಳಿಸಿದ್ದಾರೆ.

ನಿಶಾದ್ ಅವರು ಕೇವಲ 8 ವರ್ಷದವರಿದ್ದಾಗ ಹೊಲದಲ್ಲಿ ಹುಲ್ಲು ಕತ್ತರಿಸುವ ಯಂತ್ರಕ್ಕೆ ಸಿಲುಕಿ ತಮ್ಮ ಬಲಗೈ ಕಳೆದುಕೊಂಡಿದ್ದರು. ಈ ದುರಂತವು ಅವರ ಜೀವನವನ್ನೇ ಬದಲಿಸಿತು.

ನಿಶಾದ್ ಅವರ ತಂದೆ ರಶ್ಪಾಲ್ ಸಿಂಗ್ ಒಬ್ಬ ರೈತರಾಗಿದ್ದರೆ, ತಾಯಿ ಪುಷ್ಪಾ ದೇವಿ (ವಾಲಿಬಾಲ್ ಮತ್ತು ಡಿಸ್ಕಸ್ ಥ್ರೋ) ಕ್ರೀಡಾಪಟುವಾಗಿದ್ದಾರೆ. ತಾಯಿಯ ಪ್ರೋತ್ಸಾಹದಿಂದಾಗಿ ನಿಶಾದ್ ಚಿಕ್ಕ ವಯಸ್ಸಿನಿಂದಲೇ ಕ್ರೀಡೆಯಲ್ಲಿ ಆಸಕ್ತಿ ಬೆಳೆಸಿಕೊಂಡಿದ್ದರು. ಆರಂಭದಲ್ಲಿ ಅವರು ಸಾಮಾನ್ಯ ಕ್ರೀಡಾಪಟುಗಳ ಜೊತೆಯೇ ಸ್ಪರ್ಧಿಸುತ್ತಿದ್ದರು. 2017ರಲ್ಲಿ ಪ್ಯಾರಾ ಅಥ್ಲೆಟಿಕ್ಸ್ ಬಗ್ಗೆ ತಿಳಿದ ನಂತರ ಆ ವಿಭಾಗದಲ್ಲಿ ವೃತ್ತಿಜೀವನ ಮುಂದುವರಿಸಲು ನಿರ್ಧರಿಸಿದರು.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

Operation Sindoor; Kirana Hills ಪರಮಾಣು ನೆಲೆಗೆ ಅಪ್ಪಳಿಸಿದ ಭಾರತದ ಡ್ರೋನ್? ಬೆಚ್ಚಿಬಿದ್ದ ಪಾಕಿಸ್ತಾನ..! Indian Army ಹೇಳಿದ್ದೇನು?

ನಿರ್ಬಂಧದ ಹೊರತಾಗಿಯೂ ರಷ್ಯಾದಲ್ಲಿ ಇಳಿದ ಅಮೆರಿಕದ C-17 ಮಿಲಿಟರಿ ವಿಮಾನ: ಮಿಷನ್ ಮಾತ್ರ ನಿಗೂಢ!

ನೀಟ್ ಪ್ರತಿಭಟನಾಕಾರರ ಮೇಲೆ ಪೊಲೀಸ್ ದೌರ್ಜನ್ಯ ಆರೋಪ: ಚರ್ಚೆಗೆ ವಿಪಕ್ಷಗಳ ಪಟ್ಟು, ಸಂಸದೀಯ ಸಮಿತಿ ಸಭೆಯಲ್ಲಿ ತೀವ್ರ ವಾಗ್ವಾದ!

2nd Test: ‘ಶ್ರೀಲಂಕಾ ಆಟಗಾರರ ವರ್ತನೆ ವೃತ್ತಿಪರವಾಗಿರಲಿಲ್ಲ’: ಬ್ಯಾಡ್ ಲೈಟ್ ವಿವಾದಕ್ಕೆ Sanjay Manjrekar ಕಿಡಿ

‘ಪ್ರಸಿದ್ಧ್ ಕೃಷ್ಣ ವಿಶ್ವದರ್ಜೆಯ ಬೌಲರ್ ಆಗಿ ಮಾರ್ಪಟ್ಟಿದ್ದಾರೆ’: ಕನ್ನಡಿಗನ ಶ್ಲಾಘಿಸಿದ ದಕ್ಷಿಣ ಆಫ್ರಿಕಾ ಮಾಜಿ ವೇಗಿ Morne Morkel