ಯುವಜನ/ಮಕ್ಕಳು

ರ್ಯಾಗ್ ಭೂತ

ಆ ವಯಸ್ಸೇ ಒಂಥರಾ... ನಾನು ಮಾಡಿದ್ದೆಲ್ಲವೂ ಸರಿ ಎಂದು ಸಾಧಿಸಿಕೊಳ್ಳುವ ಹುಮ್ಮಸ್ಸು...

ಆ ವಯಸ್ಸೇ ಒಂಥರಾ... ನಾನು ಮಾಡಿದ್ದೆಲ್ಲವೂ ಸರಿ ಎಂದು ಸಾಧಿಸಿಕೊಳ್ಳುವ ಹುಮ್ಮಸ್ಸು. ಬಾಲ್ಯದ ಕಹಿ ಗಳಿಗೆಗಳಿರಲಿ, ಭವಿಷ್ಯತ್ತಿನ ಆಪತ್ತಿನ ಕುರಿತ ಯೋಚನೆಗಳಿಗೆ ಸ್ಥಾನವೇ ಇಲ್ಲ. ಅಲ್ಲೇನಿದ್ದರೂ, ವರ್ತಮಾನದ ಪ್ರದರ್ಶನ... ಗೆಳೆಯರ ಬಳಗದ ನಡುವೆ ಹೀರೋ ಆಗುವ ಧಾವಂತ...
ಇಂಥ ಸನ್ನಿವೇಷ ಸೃಷ್ಟಿಯಾಗಿರುವುದು ಕಾಲೇಜೆಂಬ ಟೀನೇಜಿಗರ ಮನೆಯಲ್ಲಿ. ಇದೀಗ ತಿಂಗಳ ಕಾಲ ಮುಚ್ಚಿದ್ದ ಕಾಲೇಜು ಬಾಗಿಲು ತೆರೆದಿದೆ. ಹೈಸ್ಕೂಲು ಮುಗಿಸಿದ ಹೈಕಳಿಗೆ ಕಾಲೇಜು ಮೆಟ್ಟಿಲೇರುವ ತವಕ. ಹಿಂದಿನ ವರ್ಷ ಜೂನಿಯರ್ ಆದವರಿಗೆ ಅದೇ ಕಾಲೇಜಿನಲ್ಲಿ ಸೀನಿಯರ್ ಎಂಬ ಪುಕ್ಕಟೆ ಪ್ರಮೋಷನ್ ಬೇರೆ ಸಿಕ್ಕಿದೆ. ಈ ಸಂದರ್ಭದಲ್ಲೇ ಯೌವ್ವನ ಮದವೇರಿದವರು 'ರ್ಯಾಗಿಂಗ್‌' ಎಂಬ ಎಡವಟ್ಟಿನ ಹಾದಿ ಹಿಡಿದುಬಿಡುತ್ತಾರೆ.
ಹಿಂದೆ ಶಾಲಾ, ಕಾಲೇಜುಗಳಲ್ಲಿ ಒಂದಿಷ್ಟು ಭಯ, ಭಕ್ತಿ ಇರುತ್ತಿತ್ತು. ಆದರೆ ಇಂದು ಕಾಲೇಜು ಮೆಟ್ಟಿಲೇರುವುದೇ ತಡ ಬುದ್ಧಿ ಕೆಡಿಸಿಕೊಳ್ಳುವ ಹಲವರು ಇನ್ನೊಬ್ಬರನ್ನು ಕೀಟಲೆ ಮಾಡುವುದೇ ಪ್ರವೃತ್ತಿ ಮಾಡಿಕೊಂಡಿರುತ್ತಾರೆ. ಇದೆಲ್ಲವೂ ಒಂದು ಮಿತಿಯಲ್ಲಿದ್ದರೆ ಸರಿ. ಆದರೆ, ಕೆಲವೊಮ್ಮೆ ಇದು ವಿಪರೀತಕ್ಕೆ ಹೋಗಿ ಇನ್ನೊಬ್ಬರಿಗೆ ಹಿಂಸೆಯಾಗಿ ಪರಿಣಮಿಸುತ್ತದೆ. ಇದರಿಂದ ಏನೇನೋ ಕನಸು ಹೊತ್ತು ಕಾಲೇಜು ಮೆಟ್ಟಿಲೇರುವ ಹೊಸ ಹುಡುಗರಿಗೆ ಹಿರಿ ಹುಡುಗರ ರ್ಯಾಗಿಂಗ್‌ನಿಂದ ಮಾನಸಿಕ ಆಘಾತವಾಗುತ್ತದೆ. ಇಂಥ ವಾತಾವರಣದಲ್ಲಿ ಪಾಠ, ಪ್ರವಚನದ ಕಡೆಗೆ ಗಮನ ನೀಡುವುದನ್ನೇ ಅವರು ಮರೆತು ಬಿಡುತ್ತಾರೆ. ಮಾನಸಿಕ ಖಿನ್ನರಾಗುತ್ತಾರೆ.
ತಮಾಷೆಯ ವಿಚಾರವೆಂದರೆ, ಈ ವರ್ಷ ರ್ಯಾಗಿಂಗ್‌ಗೊಳಗಾದ ಕಿರಿಯರೇ ಮುಂದಿನ ವರ್ಷ ಸೀನಿಯರ್‌ಗಳಾಗಿ ತಮ್ಮ ಜ್ಯೂನಿಯರ್‌ಗಳನ್ನು ರ್ಯಾಗ್ ಮಾಡಲು ಶುರುಮಾಡುವುದು. ಇದರಿಂದ ರ್ಯಾಗಿಂಗ್ ಅನ್ನುವುದು ಒಂದು ರೀತಿಯ ಸಂಕೋಲೆಯ ರೀತಿ ಅನೂಚಾನಾಗಿ ಮುಂದುವರಿಯುತ್ತಲೇ ಹೋಗುತ್ತದೆ.

ದೂರು ನೀಡಿ
ಕಾಲೇಜುಗಳಲ್ಲಾಗಲಿ, ಹಾಸ್ಟೆಲ್‌ನಲ್ಲಾಗಲಿ ರ್ಯಾಂಗಿಂಗ್‌ಗೆ ತುತ್ತಾದರೆ ಯಾವುದೇ ಕಾರಣಕ್ಕೂ ಹೆದರದೆ ಸಂಬಂಧಪಟ್ಟವರಿಗೆ ದೂರು ನೀಡಲು ಹಿಂಜರಿಕೆ ತೋರಬೇಡಿ. ರ್ಯಾಗಿಂಗ್ ಕಾನೂನು ರೀತಿಯಲ್ಲಿ ಶಿಕ್ಷಾರ್ಹ ಅಪರಾಧ. ಆದ್ದರಿಂದ ದೂರು ನೀಡಲು ಯಾವುದೇ ಭಯ ಬೇಕಿಲ್ಲ.

ಇದೂ ತಪ್ಪೇ...
ರ್ಯಾಗಿಂಗ್ ಮಾಡುವುದಷ್ಟೇ ಅಲ್ಲ, ಅದಕ್ಕೆ ಪ್ರಚೋದನೆ ನೀಡುವುದು ಹಾಗೂ ರ್ಯಾಗಿಂಗ್ ಮಾಡುವವರಿಗೆ ಪರೋಕ್ಷ ಸಹಾಯ ಮಾಡುವುದೂ ತಪ್ಪೇ. ಹಾಗಾಗಿ ರ್ಯಾಗಿಂಗ್ ಮಾಡುವವರನ್ನು ಯಾವುದೇ ಕಾರಣಕ್ಕೂ ಬೆಂಬಲಿಸುವ ಪ್ರಯತ್ನ ಮಾಡಬೇಡಿ. ಅಷ್ಟಕ್ಕೂ ಕಾಲೇಜೆಂಬ ವಿದ್ಯಾ ದೇಗುಲದಲ್ಲಿ ನೆಮ್ಮದಿಯ, ಸಂತೋಷದ ವಾತಾವರಣ ಸೃಷ್ಟಿಸುವುದು ಎಲ್ಲಾ ವಿದ್ಯಾರ್ಥಿಗಳ ಕರ್ತವ್ಯ. ಪಠ್ಯೇತರ ಚಟುವಟಿಕೆಯಲ್ಲಿ ತೊಡಗಿಸಿಕೊಂಡು ವಿದ್ಯಾರ್ಥಿಗಳು ಹೀರೋಗಳಾಗಬೇಕೇ ಹೊರತು ಇನ್ನೊಬ್ಬರನ್ನು ಹಿಂಸಿಸಿ ಅಲ್ಲ.

- ಸುಧೀದ್ರ ಜಮ್ಮಟಿಗೆ

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

Super Emergency: ತಾರಕಕ್ಕೇರಿದ ದೆಹಲಿ ಪ್ರತಿಭಟನೆ, ಬರೊಬ್ಬರಿ 3 ಸಾವಿರ ಮಂದಿ ವಶಕ್ಕೆ, ವಿಪಕ್ಷಗಳ ಆಕ್ರೋಶ!

ಅಭಿಜೀತ್ ದೀಪ್ಕೆ ಸಂಪರ್ಕಿಸಲು ಸಾಧ್ಯವಾಗುತ್ತಿಲ್ಲ; ಅಜ್ಜಿ ಸಾವಿನ ಸುದ್ದಿ ತಿಳಿಸುವುದು ಹೇಗೆ? ಪೊಲೀಸ್ ಕ್ರಮಕ್ಕೆ ಪೋಷಕರ ಆಕ್ರೋಶ

ದೇಶವಿರೋಧಿ ಶಕ್ತಿಗಳಿಂದ ಅಶಾಂತಿ ಸೃಷ್ಟಿಗೆ ಯತ್ನ; CJP ಪ್ರತಿಭಟನೆಯಿಂದ ದೂರವಿರಿ: ಮುಸ್ಲಿಮರಿಗೆ ಇಮಾಮ್‌ ಮುಖ್ಯಸ್ಥ ಕರೆ

'ಇಂದಿರಾ ಗಾಂಧಿ ಕೂಡ ಹೀಗೆ ಮಾಡಿರಲಿಲ್ಲ': ದೆಹಲಿ ವಿಮಾನ ನಿಲ್ದಾಣದಲ್ಲಿ ವಶಕ್ಕೆ ಪಡೆಯುವ ಮುನ್ನ ಅಭಿಜಿತ್ ದೀಪ್ಕೆ; ವಿಡಿಯೋ ಹಂಚಿಕೊಂಡ CJP

CJP protest: ಮಮತಾ ಬ್ಯಾನರ್ಜಿ, ನೇಹಾ ಬೋರಾ, ಯೋಗೇಂದ್ರ ಯಾದವ್ ವಶಕ್ಕೆ ಪಡೆದ ಪೊಲೀಸರು