ಕಾಲೇಜು ಶುರುವಾಗಿದೆ. ಕೈಗೆ ಸ್ಮಾರ್ಟ್‌ಫೋನ್ ಕೂಡ ಬಂದಿದೆ. ಹಾಗಿದ್ದ ಮೇಲೆ ಅದರ ಸದುಪಯೋಗ ಪಡೆಯೋದು ಬೇಡವೇ? ನಿಮಗಾಗಿಯೇ ಇದೆಯಲ್ಲ ಆ್ಯಪ್‌ಗಳು. ಇವುಗಳನ್ನೊಮ್ಮೆ ಡೌನ್‌ಲೋಡ್ ಮಾಡಿ ನೋಡಿ. ಇವುಗಳ ದಿಗ್ದರ್ಶನ ಗೊತ್ತಾಗುತ್ತದೆ.
ಮೈ ಕ್ಲಾಸ್ ಶೆಡ್ಯೂಲ್- ಉಚಿತ
ತರಗತಿಗಳು, ಅಸೈನ್‌ಮೆಂಟ್, ನೋಟ್ಸ್‌ಗಳಿಗೆ ಸಮಯ ಹೊಂದಾಣಿಕೆ ಮಾಡಲು, ನೆನಪಿಸಲು ಈ ಆ್ಯಪ್ ನೆರವಾಗುತ್ತದೆ. ಒಮ್ಮೆ ನೀವು ಈ ಆ್ಯಪ್‌ಗೆ ನಿಮ್ಮ ಕಾಲೇಜು ವೇಳಾಪಟ್ಟಿ ತುಂಬಿಸಿಬಿಟ್ಟರೆ ಅದು ಹೋಂವರ್ಕ್, ಸೆಮಿನಾರ್‌ಗಳು ಹೀಗೆ ಪಠ್ಯಕ್ಕೆ ಸಂಬಂಧಿಸಿದ ವಿಚಾರಗಳನ್ನು ಆಯಾ ವೇಳೆಗೆ ಜ್ಞಾಪಿಸುತ್ತದೆ. ಪಠ್ಯದ ವಿಚಾರದಲ್ಲಿ ನೀವು ಅಪ್‌ಟು ಡೇಟ್ ಆಗಿರುವಂತೆ ನೋಡಿಕೊಳ್ಳುತ್ತದೆ.
ಸ್ಟಡಿಯಸ್
ಇದು ಪರೀಕ್ಷೆ, ತರಗತಿಗಳು, ಹೋಂವರ್ಕ್‌ಗಳ ಕುರಿತು ನೆನಪಿಸುವ ಮತ್ತೊಂದು ಅತ್ಯುತ್ತಮ ಆ್ಯಪ್.
ಹ್ಯಾಂಡಿ ಕ್ಯಾಲ್ಕ್
ಈ ಆ್ಯಪ್ ವೈಜ್ಞಾನಿಕ ಕ್ಯಾಲ್ಕುಲೇಟರ್‌ಗೆ ಸೂಕ್ತ ಪರ್ಯಾಯವಾಗಿದೆ. ಇದನ್ನು ಬಳಸಿಕೊಂಡು ವೈಜ್ಞಾನಿಕ ಲೆಕ್ಕಾಚಾರಗಳನ್ನು ಮಾಡಬಹುದು.
ವಾಟ್ಸ್‌ಆ್ಯಪ್
ನಿಮ್ಮ ಕಾಲೇಜು ಗೆಳೆಯರ ಗುಂಪಿನ ಜತೆಗೆ ಸದಾ ಸಂಪರ್ಕದಲ್ಲಿರಲು ಇದು ನೆರವು ನೀಡುತ್ತದೆ.
ಬಂಪ್
ಕಾಲೇಜಿನಲ್ಲಿ ಪರಿಚಯವಾಗುವ ಹೊಸಗೆಳೆಯರ ಜತೆಗೆ ನಿಮ್ಮ ಸಂಪರ್ಕ ಮಾಹಿತಿ, ಫೋನ್ ನಂಬರ್ ಅನ್ನು ಸುಲಭವಾಗಿ ಹಂಚಿಕೊಳ್ಳಲು ನೆರವು ನೀಡುತ್ತದೆ.
ಪಾಕೆಟ್
ಈ ಆ್ಯಪ್ ಬಳಸಿಕೊಂಡು ನೀವು ಯಾವುದೇ ವೆಬ್‌ಪುಟ, ಅದರಲ್ಲಿರುವ ಮಾಹಿತಿಯನ್ನು ಸೇವ್ ಮಾಡಿಟ್ಟುಕೊಳ್ಳಬಹುದು. ನಂತರ ಆಫ್‌ಲೈನ್‌ನಲ್ಲೇ ಅದನ್ನು ಓದಬಹುದು.