ಯುವಜನ/ಮಕ್ಕಳು

ನಾನು ಡಿಫರೆಂಟ್

ಮನೆ- ಆಫೀಸು ಬಹುಪಾಲು ಯುವಜನರ ಬದುಕು ಇಷ್ಟರಲ್ಲೇ ಮುಗಿದು ಹೋಗುತ್ತದೆ. ಇವಿಷ್ಟರ ನಡುವೆ ಪುರುಸೊತ್ತು ಸಿಕ್ಕರೆ ಟಿ.ವಿಯೇ ದುನಿಯಾ. ವಾರದ ರಜೆ ಸಿಕ್ಕಿತೆಂದರೆ ಮಾಲುಗಳಲ್ಲೇ ಮಾಮೂಲು ಅಲೆದಾಟ. ಇದೇ ಬದುಕು ಎಂದು ಅಂದುಕೊಂಡವರ ಮಧ್ಯೆ ಕೊಂಚ ಡಿಫರೆಂಟ್ ಆಗಿ ಇರಬೇಕೆಂದು ಅಂದುಕೊಂಡರೆ, ನೀವು ಕ್ರೀಯಾಶೀಲರಾಗಿದ್ದೀರಿ ಎಂದೇ ಅರ್ಥ.

ಆಸಕ್ತಿಗಳ ಮಹಾಪೂರ
ಸುಮ್ಮನೇ ಆಲೋಚಿಸಿ ನೋಡಿ. ಶಾಲೆ, ಕಾಲೇಜು ದಿನಗಳಲ್ಲಿ ಓದಿನೊಂದಿಗೆ ಹತ್ತು ಹಲವು ಆಸಕ್ತಿಗಳನ್ನು ಹಚ್ಚಿಕೊಂಡಾಗಲೂ ಸಾಕಷ್ಟು ಸಮಯವಿರುತ್ತಿತ್ತು. ಎನ್.ಸಿ.ಸಿ, ಎನ್ನೆಸ್ಸೆಸ್, ಕ್ರೀಡೆ, ಯಕ್ಷಗಾನ, ನಾಟಕ, ಟ್ರೆಕ್ಕಿಂಗ್, ಫೋಟೋಗ್ರಫಿ, ಅಂಚೆಚೀಟಿ ಸಂಗ್ರಹ, ಚಿತ್ರಕಲೆ ಹೀಗೆ ನಮ್ಮ ಆಸಕ್ತಿಯ ವಿಷಯಗಳಲ್ಲಿ ಸಂಪೂರ್ಣವಾಗಿ ತೊಡಗಿಸಿಕೊಳ್ಳುತ್ತಿದ್ದೆವು. ಆಗ ಮನಸು ಚುರುಕಾಗಿರುತ್ತಿತ್ತು. ದೇಹವೂ ಲವಲವಿಕೆಯಿಂದಿರುತ್ತಿತ್ತು. ಅದೇ ರೀತಿ ಈಗಲೂ ಯಾಕೆ ಇರಬಾರದು ಎಂದು ಯೋಚಿಸಿ.

ಒಂದು ತಂಡ ರೂಪಿಸಿ
ಸಮಾನಮನಸ್ಕರ ತಂಡವೊಂದು ರೂಪುತಳೆಯುವುದು ಬಹಳ ಮುಖ್ಯ. ನಮ್ಮ ಅಭಿರುಚಿಗಳಿಗೆ ತಕ್ಕಂತಹ, ಆಲೋಚನೆಗಳಿಗೆ ಹೊಂದಿಕೊಳ್ಳುವಂತಹ ತಂಡವನ್ನೇ ಪ್ರತಿಯೊಬ್ಬರೂ ಬಯಸುತ್ತಾರೆ. ಅದರಂತೆಯೇ ತಂಡವಿದ್ದರೆ ಉತ್ತಮ. ಗುಂಪೆಂದರೆ ಒಂದು ಸಣ್ಣ ಗಣವೇ ಹೊರತು ದೊಡ್ಡ ಗಡಣವಲ್ಲ. ಸಂಖ್ಯಾಬಲ ವೃದ್ಧಿಸುವುದರ ಕುರಿತು ಗಮನ ಬೇಡ. ಹಾಗೆ ಮಾಡ ಹೊರಟಲ್ಲಿ ಗುಂಪಿನ ಮೂಲ ಉದ್ದೇಶವೇ ಮೂಲೆಗುಂಪಾಗುವ ಸಾಧ್ಯತೆಗಳಿರುತ್ತದೆ. ಇರುವವರೂ ಬೆರಳೆಣಿಕೆಯಷ್ಟಾದರೆ ಉತ್ತಮ.

ಗುಂಪುಗಾರಿಕೆ ಬೇಡ
ಗುಂಪೆಂದ ಕೂಡಲೇ ಮೊದಲಿಗೆ ನೆನಪಿಗೆ ಬರುವುದು ಗುಂಪುಗಾರಿಕೆಯೇ. ಯಾರನ್ನೋ ಮೆಚ್ಚಿಸಲು, ಯಾರನ್ನೋ ಇನ್ಯಾರದೋ ವಿರುದ್ಧ ಎತ್ತಿ ಕಟ್ಟಲು ರಚಿಸುವ ತಂಡಗಳು ಅಷ್ಟೇ ವೇಗವಾಗಿ ಒಡೆದು ಹೋಗುವ ಸಾಧ್ಯತೆಗಳೇ ಹೆಚ್ಚು. ತಂಡದ ಯಾವುದೇ ಒಬ್ಬ ಸದಸ್ಯನಲ್ಲಾದರೂ ಸ್ವಾರ್ಥ, ಅಹಂ ಹೆಡೆಯಾಡಿತೆಂದರೆ ಆ ಗುಂಪಿನ ಕಥೆ ಮುಗಿದಂತೆಯೇ. ಹೀಗಾಗಿ ಅಂತಹ ಉದ್ದೇಶದಿಂದ ದೂರವುಳಿದು ಸದಭಿರುಚಿಯ ತಂಡವನ್ನಷ್ಟೇ ಕಟ್ಟುವುದು ಒಳಿತು. ಒಂದು ತಂಡದಿಂದ ಒಳಗಿದ್ದವರ ವ್ಯಕ್ತಿತ್ವ ವಿಕಸನವಾಗಬೇಕು. ಹೊರಗಿಂದ ಗಮನಿಸುವವರಿಗೂ ನಾನೂ ಈ ತಂಡದ ಸದಸ್ಯನಾಗಬೇಕೆಂಬ ಹಂಬಲ ಹುಟ್ಟಬೇಕು. ಇವರಿಂದ ದೂರ ಉಳಿದರೆ ಕ್ಷೇಮ ಅಂತ ಅನ್ನಿಸಬಾರದು.

ಕಾರ್ಯಕ್ರಮ ಹಮ್ಮಿಕೊಳ್ಳಿ
ಪ್ರತಿನಿತ್ಯದ ಮಾತು, ವಿಚಾರ ವಿನಿಮಯಗಳು ಇದ್ದದ್ದೇ. ಆದರೆ ವಾರಕ್ಕೊಮ್ಮೆಯೋ, ತಿಂಗಳಿಗೊಮ್ಮೆಯೋ ಏನಾದರೂ ಕಾರ್ಯಕ್ರಮಗಳು ಹಮ್ಮಿಕೊಂಡಾಗ ಅದರಿಂದಾಗುವ ಲಾಭಗಳು ಹತ್ತು ಹಲವು. ಅಭಿಪ್ರಾಯಗಳ ವಿನಿಮಯವಾದಾಗ ಬುದ್ಧಿಗೂ ಕಸರತ್ತು ದೊರೆಯುತ್ತದೆ. ಊರಲ್ಲೇ ಕೂತು ಮಾತಾಡಲು ಬೋರ್ ಅನ್ನಿಸಿದರೆ, ಪಿಕ್‌ನಿಕನ್ನೋ , ಚಿಕ್ಕ ಪ್ರವಾಸವನ್ನೋ, ಇಲ್ಲಾ ಚಾರಣವನ್ನೋ ಹಮ್ಮಿಕೊಳ್ಳಬಹುದು. ಇವೇ, ಅವೇ ಆಗಬೇಕೆಂದೇನಿಲ್ಲ. ಒಂದು ಉತ್ತಮ ತಂಡವಿದ್ದಾಗ ಹೊಸ ಹೊಸ ಯೋಜನೆಗಳು, ಆಲೋಚನೆಗಳು ತಾನಾಗಿಯೇ ಹೊಳೆಯುತ್ತವೆ. ಇದು ಒಂದು ಉದಾಹರಣೆಯಷ್ಟೇ.

- ಗಣಪ

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

ಇಂಧನ ಸ್ಥಾವರಗಳ ಮೇಲಿನ ದಾಳಿಯನ್ನು ನಿಲ್ಲಿಸಲು ರಷ್ಯಾ-ಉಕ್ರೇನ್ ಒಪ್ಪಿಕೊಂಡಿವೆ: ಟ್ರಂಪ್ ಘೋಷಣೆ

ಕೊನೆಯ ಓವರ್‌ನಲ್ಲಿ ಭಾರತಕ್ಕೆ ವಿಂಡೀಸ್ ವಿರುದ್ಧ ರೋಚಕ ಜಯ: T20 ಸರಣಿಯಲ್ಲಿ 2-1 ಮುನ್ನಡೆ!

'We're Sorry': ಅಭಿಜಿತ್ ದೀಪ್ಕೆಗೆ ಅಜ್ಜಿಯ ಸಾವಿನ ಬಗ್ಗೆ ತಿಳಿಸಿದ್ದ ಮಹಿಳಾ ಪೊಲೀಸ್; ಹೇಗಿತ್ತು CJP ನಾಯಕನ ಪ್ರತಿಕ್ರಿಯೆ...: ವಿಡಿಯೋ ವೈರಲ್!

'ಮತದಾನದ ಹಕ್ಕನ್ನೇ ಕಸಿದರೆ ಯಾವ ಪಕ್ಷವೂ ಸುರಕ್ಷಿತವಾಗಿರಲ್ಲ': SIR ವಿರುದ್ಧ ದೇಶಾದ್ಯಂತ ಹೋರಾಟಕ್ಕೆ CJP ಕರೆ

ಸ್ಟಿಂಗ್‌ ಆಪರೇಷನ್ ಆರೋಪ: ಶಾಂಗ್ರೀಲಾ ಹೋಟೆಲ್‌ನಲ್ಲಿ ಯಾರ ಜೊತೆ ಕುಳಿತಿದ್ರಿ; ಸಿಎಂ ಶಿವಕುಮಾರ್ ವಿರುದ್ಧ HDK ಹೊಸ ಬಾಂಬ್