ಯುವಜನ/ಮಕ್ಕಳು

ಓಡಿ ಹೋಗುವ ಮುನ್ನ

ಆ ಮನೆಯ ಮುಂದೆ ಹತ್ತಾರು ಜನ, ಗೊಳೋ ಎಂದು ಅಳುತ್ತಿರುವ ತಾಯಿ, ಬೆಟ್ಟವೇ ತಲೆಯ ಮೇಲೆ ಬಿತ್ತೇನೋ ಎಂದು ಯೋಚಿಸುತ್ತಾ ಕೂತಿರುವ ಅಪ್ಪ...

ಆ ಮನೆಯ ಮುಂದೆ ಹತ್ತಾರು ಜನ, ಗೊಳೋ ಎಂದು ಅಳುತ್ತಿರುವ ತಾಯಿ, ಬೆಟ್ಟವೇ ತಲೆಯ ಮೇಲೆ ಬಿತ್ತೇನೋ ಎಂದು ಯೋಚಿಸುತ್ತಾ ಕೂತಿರುವ ಅಪ್ಪ... ಹುಡುಗಿಯ ಹುಡುಕಾಟದಲ್ಲಿ ಬ್ಯುಸಿಯಾಗಿರುವ ಸಂಬಂಧಿಕರು, ಆ ಹುಡುಗ ಸಿಕ್ಕರೆ ಚಿಂದಿ ಮಾಡುವ ಹಂಬಲದಲ್ಲಿರುವ ಅಣ್ಣ, ಇದು ಹುಡುಗಿಯ ಮನೆಯ ವಾತಾವರಣ...
ಹುಡುಗನ ಮನೆಯಲ್ಲೂ ಇದೇ ಸ್ಥಿತಿ. ಮುಂದೆ ದೊಡ್ಡ ಡಾಕ್ಟರೋ, ಎಂಜಿನಿಯರೋ ಆಗಿ ಅಪ್ಪ ಅಮ್ಮನಿಗೆ ಕೀರ್ತಿ ತರುವ... ಇಳಿವಯಸ್ಸಲ್ಲಿ ಜೊತೆಯಾಗುವ ಎಂದೆಲ್ಲಾ ನೂರಾರು ಕನಸುಗಳನ್ನು ಕಟ್ಟಿಕೊಂಡು ಅವುಗಳನ್ನು ನನಸಾಗಿಸಲು ಹಗಲು ರಾತ್ರಿ ಎನ್ನದೆ ದುಡಿಯುವ ಅಪ್ಪ ಅಮ್ಮನಿಗೆ ಆಕಾಶವೇ ಮೇಲೆ ಬಿದ್ದಂತಾಗಿರುತ್ತದೆ. ಇಷ್ಟಕ್ಕೆಲ್ಲಾ ಕಾರಣ ಯಾರು? ಆ ಹುಚ್ಚು ಪ್ರೀತಿ. ನಿಜಕ್ಕೂ ಪ್ರೀತಿ ಅನ್ನೋ ಮಾಯೆ ಹೀಗೆಲ್ಲಾ ಹೆತ್ತವರ ನೋಯಿಸುವುದೇಕೆ ಎನ್ನುವ ಕಾರಣ ಹುಡುಕುತ್ತಾ ಹೋದರೆ ದೊರೆಯುವ ಉತ್ತರ ಮಾತ್ರ ಘೋರ...
ವಯಸ್ಸಿನ ಆಕರ್ಷಣೆಗೆ ಬಿದ್ದು ಅದನ್ನೇ ಪ್ರೀತಿ ಎಂದು ನಂಬಿ ನಾಲ್ಕಾರು ದಿನ ಸುತ್ತಾಡಿ ಕೈಯಲ್ಲಿದ್ದ ಕಾಸೆಲ್ಲಾ ಖಾಲಿಯಾದ ಮೇಲೆ ವಾಪಸಾಗುವ ಯುವಪ್ರೇಮಿಗಳು ನಂತರ ನಾನೊಂದು ತೀರ ನೀನೊಂದು ತೀರ... ಆದರೆ, ಇವರು ಓಡಿಹೋದಾಗ ಅಂಟಿದ ಕೆಟ್ಟ ಹೆಸರು ಮಾತ್ರ ಕೊನೆವರೆಗೂ ಬೆನ್ನುಬಿಡದು. ಆ ಕುರಿತು ಯೋಚನೆಯನ್ನೇ ಮಾಡದೆ ಬಣ್ಣದ ಕನಸುಗಳ ಹಿಂದೆ ಓಡಿ ಮೈಮನಸ್ಸುಗಳನ್ನು ರಾಡಿ ಮಾಡಿಕೊಂಡು ಅಪ್ರಾಪ್ತ ವಯಸ್ಸಿನಲ್ಲಿ ಮದುವೆಯಾಗಲೂ ಸಾಧ್ಯವಾಗದೆ, ವಿದ್ಯಾಭ್ಯಾಸ ಮುಂದುವರಿಸಲೂ ಆಗದೆ ಕೊನೆಗೆ ಸಮಾಜದ ಕೀಳು ದೃಷ್ಟಿಗೆ ಬಲಿಯಾಗುತ್ತಾರೆ ಅನೇಕ ಯುವಜೋಡಿಗಳು. ಭವಿಷ್ಯದ ಕುರಿತು ಯೋಚಿಸದೇ ಮಾಡುವ ಈ ರೀತಿಯ ಹುಚ್ಚುತನ ಅಪ್ಪ ಅಮ್ಮನ ಸುಂದರ ಕನಸುಗಳನ್ನು ಕ್ಷಣಾರ್ಧದಲ್ಲಿ ನಾಶಮಾಡಿಬಿಡುತ್ತದೆ.

ರೋಮ್ಯಾನ್ಸ್ ಅಡ್ಡ...
ನಗರದ ಯಾವುದೇ ಹೋಟೆಲ್, ರಸ್ತೆಗಳನ್ನು ನೋಡಿದರೂ ಅಲ್ಲಿ ಯಾರ ಭಯವೂ ಇಲ್ಲದೆ ಕೈ ಕೈ ಹಿಡಿದುಕೊಂಡು ತಿರುಗುವ ಹುಡುಗ- ಹುಡುಗಿಯರ ಸಂಖ್ಯೆಗೇನೂ ಕಡಿಮೆ ಇಲ್ಲ. ಪಾರ್ಕ್‌ಗಳ ಕಥೆಯಂತೂ ಕೇಳುವುದೇ ಬೇಡ. ಅದೊಂದು ರೊಮ್ಯಾನ್ಸ್ ಅಡ್ಡ... ಮಕ್ಕಳು, ಹಿರಿಯರು ಓಡಾಡುವರೆಂಬ ಭಯಬಿಡಿ ನಾಚಿಕೆಯೂ ಯುವಜೋಡಿಗಳಿಗಿರುವುದಿಲ್ಲ.
ಬಣ್ಣದ ಬದುಕಲಿ ಬಿದ್ದಿರುವ ಯುವಜನರೇ ಒಮ್ಮೆ ಯೋಚಿಸಿ ನೋಡಿ... ನಿಮ್ಮ ಈ ಪ್ರಮಾದದಿಂದ ಹೆತ್ತಹೊಟ್ಟೆ, ನಿಮ್ಮದೇ ಏಳ್ಗೆಗೆ ದುಡಿಯುವ ಜೀವದ ನೋವನ್ನೊಮ್ಮೆ ಅರಿತುಕೊಳ್ಳಿ. ಟೀನ್ ಎನ್ನುವ ಹುಚ್ಚುಕೋಡಿ ಮನಸ್ಸಿನ ವಯಸನು ಮೊದಲು ದಾಟಿ. ನಿಮ್ಮೆಲ್ಲಾ ಬುದ್ಧಿವಂತಿಕೆಯನ್ನು ಓದಿನತ್ತ ತಿರುಗಿಸಿ. ಜೀವನ ಎನ್ನುವುದು ಸಿನಿಮಾದಲ್ಲಿ ತೋರಿಸಿದ ಹಾಗೆ ಮೂರು ಗಂಟೆಯದಲ್ಲ, ಮೂರು ಗಂಟೆಯದೂ ಅಲ್ಲ, ಮೂವತ್ತು ವರ್ಷಗಳದೂ ಅಲ್ಲ. ಅದಕ್ಕಿಂತಲೂ ದೊಡ್ಡದು. ಹುಚ್ಚುಕೋಡಿ ವಯಸಿನ ಭಾವನೆಗಳನ್ನು, ಉದ್ವೇಗಗಳನ್ನು ನಿಯಂತ್ರಣದಲ್ಲಿಟ್ಟುಕೊಳ್ಳಿ. ನಿಮ್ಮ ತಪ್ಪಿನಿಂದ ಹೆತ್ತವರು ಖಿನ್ನರಾಗುವ, ಅವಮಾನಕ್ಕೀಡಾಗುವ, ಮುಜುಗರಕ್ಕೆ ಒಳಗಾಗುವ ಸಂದರ್ಭ ಬರದಂತೆ ನೋಡಿಕೊಳ್ಳಿ.
ಹುಚ್ಚು ಪ್ರೀತಿಗೆ ಬಿದ್ದು ಓಡಿ ಹೋಗುವ ಮುನ್ನ ನಿಮ್ಮನ್ನೊಮ್ಮೆ ನೀವೇ ಕೇಳಿಕೊಳ್ಳಿ....'ನಾನು ಮಾಡುತ್ತಿರುವುದು ಸರಿಯಾ? ನನ್ನ ನಾಳೆಗಳು ನಿಜಕ್ಕೂ ಬಂಗಾರವಾಗ್ತದಾ...? ನಿಜ ಹೇಳಬೇಕೆಂದರೆ ನಿಮ್ಮ ಬುದ್ಧಿ ಈ ಎಲ್ಲಾ ಪ್ರಶ್ನೆಗಳಿಗೂ ಋಣಾತ್ಮಕವಾಗಿಯೇ ಉತ್ತರಿಸುತ್ತದೆ. ಆದರೆ, ಮನಸ್ಸು ಮಾತ್ರ ಬೇರೆಯದೇ ದಾರಿ ಆಯ್ಕೆ ಮಾಡಿಕೊಳ್ಳುತ್ತದೆ. ಹುಚ್ಚುಕೋಡಿ ವಯಸ್ಸೇ ಹಾಗೆ. ಆದರೆ, ಇಂಥ ಸ್ಥಿತಿಯಲ್ಲಿ ಮನಸ್ಸಿನ ಜತೆಗೆ
ಬುದ್ಧಿಯ ಮಾತನ್ನೂ ಕೇಳುವ ವ್ಯಕ್ತಿ ಬದುಕು ಯಾವತ್ತೂ ಬಂಗಾರವಾಗುತ್ತದೆ. ಆ ವ್ಯಕ್ತಿ ನೀವೂ ಯಾಕೆ ಆಗಬಾರದು..? ಆಲ್ ದಿ ಬೆಸ್ಟ್..!

- ಜಮುನಾ ರಾಣಿ .ಎಚ್. ಎಸ್.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

ವಿಮಾನ ಹೈಜಾಕ್ ಬೆದರಿಕೆ ಎಚ್ಚರಿಕೆ: ಫ್ರಾಂಕ್‌ಫರ್ಟ್‌- ದೆಹಲಿ Air India ಜೈಪುರದಲ್ಲಿ ಎಮೆರ್ಜೆನ್ಸಿ ಲ್ಯಾಂಡಿಂಗ್

ಬಿಹಾರದ ವೈಶಾಲಿಯಲ್ಲಿ ದೋಣಿ ಮುಳುಗಿ ಕನಿಷ್ಠ 13 ಮಂದಿ ಸಾವು; ಪ್ರಧಾನಿ ಮೋದಿ ಸಂತಾಪ, ಪರಿಹಾರ ಘೋಷಣೆ; Video

ಬಿಹಾರದ ಯುವಕನ ಜೊತೆ ಪ್ರೀತಿ, ಮದುವೆಗೆ ಸಿದ್ಧತೆ; ತಾಯಿ ಸಲಹೆ ಬೆನ್ನಲ್ಲೇ ನಿರ್ಧಾರ ಬದಲಿಸಿದ ಬೆಂಗಳೂರು ಟೆಕ್ಕಿ.. ಆಗಿದ್ದೇನು?

'ಜಂತರ್ ಮಂತರ್‌'ಗೆ ಅಕ್ರಮ ಪ್ರವೇಶ ಆರೋಪ: ಮುನ್ನೆಚ್ಚರಿಕೆ ಕ್ರಮವಾಗಿ CJPಯ ರಂಕಾ, ದಾಸ್, ಶಿಂಧೆ ಬಂಧನ

‘ರಾಹುಲ್ ಗಾಂಧಿ ನನ್ನನ್ನು ಪಕ್ಕಕ್ಕೆ ತಳ್ಳಿಲ್ಲ,ಕಾಳಜಿ ವಹಿಸಿದರು, ಬಿಜೆಪಿಯವರಿಗೆ ನನ್ಮೇಲೆ ತುಂಬಾ ಪ್ರೀತಿ’: CM ಡಿ.ಕೆ. ಶಿವಕುಮಾರ್; Video