ಶಾಲೆಗೆ ಹೋಗ್ತೀನಿ
ಅಮ್ಮ ನಾನೂ
ಶಾಲೆಗೆ ಹೋಗ್ತೀನಿ
ಜಳಕ ಮಾಡಿ
ತಲೆ ಬಾಚ್ಕೊಂಡು
ಸಮವಸ್ತ್ರ ಧರಿಸ್ಕೊಂಡು
ಕಾಲ್ಚೀಲ ಬೂಟು ಹಾಕ್ಕೊಂಡು
ಪಾಟಿಚೀಲ ಬಗಲಿಗೆ ಏರಿಸ್ಕೊಂಡು
ನಾನೂ ಶಾಲೆಗೆ ಹೋಗ್ತೀನಿ
ಕಥೆ-ಹಾಡು-ಡ್ಯಾನ್ಸು
ಎಲ್ಲಾ ಹೇಳಿ ಕೊಡ್ತಾರೆ ನಮ್ಮಿಸ್ಸು
ಗೆಳೆಯರೊಂದಿಗೆ ಆಡಲೂ ಬಿಡ್ತಾರೆ
ಬೆಳಗ್ಗೆ ಪೌಷ್ಟಿಕ ಹಾಲು ಕೊಡ್ತಾರೆ
ಮಧ್ಯಾಹ್ನ ಬಿಸಿ ಊಟ ಹಾಕ್ತಾರೆ
ಬುಕ್ಕು ಎಲ್ಲಾ ಉಚಿತವು
ಚಂದದಿ ಪಾಠವನು ಕಲಿಸ್ತಾರೆ
ಪ್ರೀತಿಸುವ ಗುರುಗಳಿದ್ದಾರಲ್ಲಿ
ಇನ್ನೇನು ಬೇಕು ಹೇಳಮ್ಮ
ಅಮ್ಮ ನಾನು
ಶಾಲೆಗೆ ಹೋಗ್ತೀನಮ್ಮ..
ಓದಿ ದೊಡ್ಡವನಾಗಿ
ಲೋಕಕ್ಕೆಲ್ಲ ಗುರುವಾಗ್ತೀನಿ!
- ಪ್ರಕಾಶ್ ಆರ್. ಕಮ್ಮಾರ್