ಯುವಜನ/ಮಕ್ಕಳು

ಏಕಾಂಗಿ ನಾನಲ್ಲ!

ಅಂದು ಕ್ಲಾಸ್ ಮುಗಿಸಿ ಸೀದಾ ಲೈಬ್ರರಿಗೆ ಹೋಗಿದ್ದೆ. ಪತ್ರಿಕೆ, ಮ್ಯಾಗಜಿನ್‌ಗಳನ್ನೆಲ್ಲ ತಿರುವಿ ಹಾಕಿದೆ. ಆದರೆ, ಯಾಕೋ ಬೇಜಾರು. ಕೈಯಲ್ಲೊಂದು ಪುಸ್ತಕ ಹಿಡಿದು ಕೂತೆ. ಮನಸ್ಸು ಕೇಳಬೇಕಲ್ವಾ... ಅದ್ಯಾಕೋ ಇವತ್ತು ಮಾಮೂಲಿನಂತಿರಲಿಲ್ಲ. ಒಂದರ್ಧ ಗಂಟೆಯಲ್ಲೇ ಹಾಸ್ಟೆಲ್‌ಗೆ ಹೋಗಿ ಬಿದ್ಕೊಳೊಣ ಅಂತನ್ನಿಸಿಬಿಡ್ತು.
ಒಂದೈದು ನಿಮಿಷ ನಡೆದಿರಬಹುದು, ಅಷ್ಟರಲ್ಲೇ ಮಳೆ ಧೋ ಎಂದು ಸುರಿಯಲಾರಂಭಿಸಿತು. ದಾರಿ ಮಧ್ಯ ಮರದ ಪಕ್ಕ ಸಣ್ಣದೊಂದು ಚಾವಣಿ ಕೆಳಗೆ ಜಾಗ ಇತ್ತು. ಓಡಿ ಹೋಗಿ ಅದರಡಿ ನಿಂತೆ. ಹಿತವೆನಿಸಿದರೂ ಭಯ. ಒಂದು ಕಡೆ ಧೋ ಎಂದು ಸುರಿಯುತ್ತಿರುವ ಮಳೆ, ಇನ್ನೊಂದು ಕಡೆ ಒಬ್ಬಂಟಿ ಎನ್ನುವ ಭಯ. ಅಷ್ಟರಲ್ಲೇ ಆ ಕಡೆಯಿಂದ ಒಬ್ಬ ಯುವಕ ಓಡೋಡಿ ಬಂದ. ಪಾಪ ಮಳೆಗೆ ನೆನೆದಿದ್ದರಿಂದಲೋ ಏನೋ, ಚಳಿಯಿಂದ ನಡುಗುತ್ತಿದ್ದ. ಅಯ್ಯೋ ಅನಿಸಿತು. ಅಬ್ಬಾ, ನಾನು ಒಬ್ಬಂಟಿ ಅಲ್ವಲ್ಲ ಎನ್ನುವ ಖುಷಿಯಲ್ಲಿ ಆತನ ಜತೆ ಏನಾದರೂ ಮಾತನಾಡೋಣ ಅನ್ನಿಸ್ತು. ಇನ್ನೇನು ಬಾಯಿ ತೆರೆಯಬೇಕೆನ್ನುವಷ್ಟರಲ್ಲೇ ಅವನ ಫೋನು ರಿಂಗಣಿಸಿತು.
'ಹಲೋ' ಎಂದವನೇ ಇಹವನ್ನೇ ಮರೆತುಬಿಟ್ಟ. ಮೊಬೈಲ್ ಸಂಭಾಷಣೆಯಿಂದ ಆತ ಯಾವುದೋ ಸಮಸ್ಯೆಯಲ್ಲಿರುವುದು ಗೊತ್ತಾಯ್ತು. ಆತ ಮಾತನಾಡುತ್ತಲೇ ಇದ್ದ... ಎಷ್ಟು ಹೊತ್ತು ಹೀಗೆ ಫೋನ್‌ನಲ್ಲಿ ಕಳೆದನೋ ಗೊತ್ತಿಲ್ಲ. ಆದ್ರೆ, ನನ್ನ ಮನಸ್ಸು ಮಾತ್ರ ಆತ ಆದಷ್ಟು ಬೇಗ ಫೋನ್ ಇಟ್ಟು ಬಿಡ್ಲಿ ಅಂತಿತ್ತು. ಮಳೆಯೂ ಜೋರಾಯ್ತು. ನಾವಿಬ್ಬರೂ ಹತ್ತಿರ ನಿಂತೆವು. ನನಗೇನೋ ಭಯ... ಆದ್ರೂ ಅವನನ್ನು ಮಾತನಾಡಿಸಬೇಕು... ಪರಿಚಯ ಮಾಡಿಕೊಳ್ಳಬೇಕು, ಸಮಸ್ಯೆ ಏನೆಂದು ಕೇಳಬೇಕು ಎನ್ನುವ ತವಕ. ಆದ್ರೆ ಮಳೆಗೆ ಇದು ಬೇಕಿರಲಿಲ್ಲ. ಅಷ್ಟು ಹೊತ್ತು ಧೋ ಎಂದು ಸುರಿಯುತ್ತಿದ್ದ ಮಳೆ ದಿಢೀರ್ ಸುಮ್ಮನಾಯ್ತು. ಆತನಿಗೂ ಎಲ್ಲೋ ಹೋಗಬೇಕಿತ್ತೇನೋ? ಬಿರುಸಾಗಿ ಹೆಜ್ಜೆ ಹಾಕಿದ... ಹಾಗೆ ಹೋಗುವಾಗ ಒಮ್ಮೆ ತಿರುಗಿ ನೋಡಿ ನನ್ನತ್ತ ಮುಗುಳ್ನಕ್ಕ. ಅಷ್ಟೂ ಹೊತ್ತು ಪಕ್ಕದಲ್ಲೇ ನಿಂತರೂ ಒಂದೇ ಒಂದು ಅಕ್ಷರ ಮಾತನಾಡಿಸದ್ದಕ್ಕೋ...
ಕೆಲವೇ ಸಮಯದಲ್ಲಿ ಮನಸ್ಸಿಗೆ ತೀರಾ ಹತ್ತಿರದವ ಅನಿಸಿದ್ದಕ್ಕೋ... ಹಾಸ್ಟೆಲ್‌ಗೆ ಹೋದ ಬಳಿಕವೂ ಆ ಘಟನೆ ಪದೇ ಪದೇ ಕಾಡುತ್ತಲೇ ಇತ್ತು.

- ನಿರ್ಮಲಾ, ಗುರ್ಲ್ಬರ್ಗಾ ವಿವಿ

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

ಇಂಧನ ಸ್ಥಾವರಗಳ ಮೇಲಿನ ದಾಳಿಯನ್ನು ನಿಲ್ಲಿಸಲು ರಷ್ಯಾ-ಉಕ್ರೇನ್ ಒಪ್ಪಿಕೊಂಡಿವೆ: ಟ್ರಂಪ್ ಘೋಷಣೆ

ಕೊನೆಯ ಓವರ್‌ನಲ್ಲಿ ಭಾರತಕ್ಕೆ ವಿಂಡೀಸ್ ವಿರುದ್ಧ ರೋಚಕ ಜಯ: T20 ಸರಣಿಯಲ್ಲಿ 2-1 ಮುನ್ನಡೆ!

'We're Sorry': ಅಭಿಜಿತ್ ದೀಪ್ಕೆಗೆ ಅಜ್ಜಿಯ ಸಾವಿನ ಬಗ್ಗೆ ತಿಳಿಸಿದ್ದ ಮಹಿಳಾ ಪೊಲೀಸ್; ಹೇಗಿತ್ತು CJP ನಾಯಕನ ಪ್ರತಿಕ್ರಿಯೆ...: ವಿಡಿಯೋ ವೈರಲ್!

'ಮತದಾನದ ಹಕ್ಕನ್ನೇ ಕಸಿದರೆ ಯಾವ ಪಕ್ಷವೂ ಸುರಕ್ಷಿತವಾಗಿರಲ್ಲ': SIR ವಿರುದ್ಧ ದೇಶಾದ್ಯಂತ ಹೋರಾಟಕ್ಕೆ CJP ಕರೆ

ಸ್ಟಿಂಗ್‌ ಆಪರೇಷನ್ ಆರೋಪ: ಶಾಂಗ್ರೀಲಾ ಹೋಟೆಲ್‌ನಲ್ಲಿ ಯಾರ ಜೊತೆ ಕುಳಿತಿದ್ರಿ; ಸಿಎಂ ಶಿವಕುಮಾರ್ ವಿರುದ್ಧ HDK ಹೊಸ ಬಾಂಬ್