ಹುಲ್ಲು ಹಾಸಿನ ಮೈಲುದ್ದ
ಹಸಿರು ಬಳಿದವರಾರೋ?
ಚೆಲುವನೆಲ್ಲ ಕಣ್ಣಲಿ ಹರಿಸಿದ
ಕಂದನ ಪ್ರೀತಿ ಸುರಿದವರಾರೋ?
ತಂಗಾಳಿಗೆ ತಲೆದೂಗಿ
ಮಧುರವಾದವರಾರೋ?
ಹಾಡು-ಹಸೆಯನು ಹೊಸೆದು
ಅಂದ ತಂದವರಾರೋ?
ಹೆಜ್ಜೆ-ಗೆಜ್ಜೆಯ ದನಿಗೆ
ಮೈಮರೆತು ಕುಣಿದವರಾರೋ?
ಮಧುರತೆಯ ಮೈಪುಳಕ
ಭಾವ ಸುರಿದವರಾರೋ?
ಬೆಸೆದ ಭಾವದ ಪ್ರೀತಿ
ಅಮ್ಮನಲ್ಲಿ ತಂದಿತ್ತವರಾರೋ?
-ಶುಭಶ್ರೀ. ಎಂ. ಆರಾಧ್ಯ,
7ನೇ ತರಗತಿ, 'ಎ' ವಿಭಾಗ, ಪ್ರಾರ್ಥನಾ ಶಾಲೆ,
ಪದ್ಮನಾಭನಗರ,
ಬೆಂಗಳೂರು-70