1. ಮೇಷ್ಟ್ರ ಹೆಂಡ್ತಿ 'ರೀ, ಒಲೆ ಮೇಲೆ ಏನಿಡಲಿ?' ಅಂತ ಕೇಳ್ತಾಳೆ. ಒಬ್ಬ ವ್ಯಕ್ತಿ ಬಂದು 'ಮೇಷ್ಟ್ರೇ ಶಾಲೆಗೆ ಏಕೆ ಹೋಗಿಲ್ಲ?' ಅಂತಾನೆ. ಮೇಷ್ಟ್ರ ಉತ್ತರವೇನು?
2. 'ಆ ಡಬ್ಬಿಯಲ್ಲಿ ಏನಿದೆ?' ಎಂದು ಒಬ್ಬ ಕೇಳ್ತಾನೆ. ದಾರಿಹೋಕನೊಬ್ಬ 'ಸ್ವಾಮಿ ಈ ದಾರಿ ಎಲ್ಲಿಗೆ ಹೋಗುತ್ತೆ' ಅಂತಾನೆ. ಈತನ ಉತ್ತರವೇನು?
3. ಅಜ್ಜನಿಗೆ ಮೊಮ್ಮಗ ಬಂದು 'ತಾತಾ ಕಡ್ಲೆಕಾಯಿ ತಿಂತೀಯಾ?' ಅಂತಾನೆ. ಅದೇ ಅಜ್ಜನನ್ನು ಪಕ್ಕದ ಮನೆಯವನು 'ತಾತಾ ನಿಮ್ಮಲ್ಲಿ ಏಣಿ ಇತ್ತಲ್ಲ ಸ್ವಲ್ಪ ಕೊಡ್ತೀರಾ?' ಅಂತಾನೆ. ಅಜ್ಜನ ಉತ್ತರ?
ಉತ್ತರಗಳು: 1. ಹಾಲಿಡೇ 2. ಕಾಡಿಗೆ 3. ಹಲ್ಲಿಲ್ಲ ಕಣಪ್ಪಾ!
-ವಿವೇಕಾನಂದ, ಕಾರಗಿ.