ಪ್ರಧಾನ ಸುದ್ದಿ

ಮಾಧ್ಯಮವನ್ನು ನಿಯಂತ್ರಿಸಿದರೆ ಪ್ರಜಾಪ್ರಭುತ್ವ ಉಳಿಯದು:ಪಿಸಿಐ ಅಧ್ಯಕ್ಷ

Guruprasad Narayana

ನವದೆಹಲಿ: ಪ್ರಜಾಪ್ರಭುತ್ವದಲ್ಲಿ ನಿಯಂತ್ರಿತ ಮಾಧ್ಯಮವನ್ನು ಹೊಂದಿರುವುದಕ್ಕಿಂತ ಬೇಜವಾಬ್ದಾರಿ ಮಾಧ್ಯಮವೇ ಮೇಲು ಎಂದು ಭಾರತೀಯ ಮಾಧ್ಯಮ ಸಮಿತಿಯ (ಪಿಸಿಐ) ಹೊಸ ಅಧ್ಯಕ್ಷ,  ಸರ್ವೋಚ್ಛ ನ್ಯಾಲಾಯದ ಮಾಜಿ ನ್ಯಾಯಾಧೀಶ ಚಂದ್ರಮೌಳಿ ಕುಮಾರ ಪ್ರಸಾದ್ ಗುರುವಾರ ಅಭಿಪ್ರಾಯ ಪಟ್ಟಿದ್ದಾರೆ. ಮಾಧ್ಯಮದ ಸ್ವಾಯತ್ತತೆಯನ್ನು ಕಾಪಾಡುವುದು ಅವರ ಮೊದಲ ಆದ್ಯತೆ ಎಂದಿದ್ದಾರೆ.

ಭಾನುವಾರ ಪಿಸಿಐ ಅಧ್ಯಕ್ಷರಾಗಿ ಅಧಿಕಾರ ಸ್ವೀಕರಿಸಿದ ಪ್ರಸಾದ್, ಮಾಧ್ಯಮ ಜವಾಬ್ದಾರಿಯಿಂದ ವರ್ತಿಸುತ್ತಿದೆಯೇ ಎಂದು ನಿರ್ಧರಿಸುವಷ್ಟು ಜನ ಬುದ್ಧಿವಂತರಾಗಿದ್ದಾರೆ, ಆದರೆ ಮಾಧ್ಯಮವನ್ನು ನಿಯಂತ್ರಿಸುವುದರಿಂದ ಪ್ರಜಾಪ್ರಭುತ್ವ ಉಳಿಯಸು ಸಾಧ್ಯವಿಲ್ಲ ಎಂದಿದ್ದಾರೆ. ಮಾಧ್ಯಮಗಳು ತಮ್ಮನ್ನು ತಾವೇ ನಿಯಂತ್ರಿಸಿಕೊಳ್ಳುವುದು ಒಳ್ಳೆಯದು ಎಂದಿದ್ದಾರೆ.

ಇದು ತಮ್ಮ ವೈಯಕ್ತಿಕ ನಿಲುವು, ಇದನ್ನು ಪಿಸಿಐ ನ ನಿಲುವೆಂದು ತಪ್ಪಾಗಿ ಭಾವಿಸಬಾರದು ಎಂದು ಸ್ಪಷ್ಟನೆ ನೀಡಿರುವ ಪ್ರಸಾದ್ ಮಾಧ್ಯಮಗಳ ಸ್ವಾಯತ್ತತೆಯ ಹೊರತು ಏನೂ ಸಾಧ್ಯವಿಲ್ಲ ಆದುದರಿಂದ ನನ್ನ ಮೂಲ ಮಂತ್ರ ಮಾಧ್ಯಮಗಳ ಸ್ವಾತಂತ್ರ ಎಂದಿದ್ದಾರೆ.

ನ್ಯಾಯಾಧೀಶ ಕಾಟ್ಜು ಅವರು ತೆರವುಗೊಳಿಸಿರುವ ಸ್ಥಾನವನ್ನು ಸಿ ಕೆ ಪ್ರಸಾದ್ ಅವರು ಪಿಸಿಐ ಅಧ್ಯಕ್ಷರಾಗಿ ಇಂದು ಅಧಿಕಾರ ವಹಿಸಿಕೊಂಡಿದ್ದಾರೆ.

SCROLL FOR NEXT