ಬುರ್ಧ್ವಾನ್: ಆಲುಗಡ್ಡೆ ಬೆಳೆಯಿಂದ ಲಾಭ ಬರದೆ ಹೋದದ್ದಕ್ಕೆ ರೈತನಾಗಿದ್ದ ಯುವ ಎಂಜಿನಿಯರಿಂಗ್ ಪದವೀಧರ ಪಶ್ಚಿಮ ಬಂಗಾಳದಲ್ಲಿ ಆತ್ಮಹತ್ಯೆ ಮಾಡಿಕೊಂಡಿರುವುದು ತಿಳಿದುಬಂದಿದೆ. ಇದು ೨೦೧೫ರಲ್ಲಿ ಪಶ್ಚಿಮ ಬಂಗಾಳದಲ್ಲಿ ಸತ್ತ ರೈತರ ಸಂಖ್ಯೆಯನ್ನು ೧೨ ಕ್ಕೆ ಏರಿಸಿದೆ.
ಮೆಮಾರಿಯ ತನ್ನ ಮನೆಯಲ್ಲಿ ೨೭ ವರ್ಷದ ಪ್ರೋಬಿನ್ ಕುಮಾರ ಆತ್ಮಹತ್ಯೆ ಮಾಡಿಕೊಂಡಿರುವುದಾಗಿ ಪೊಲೀಸರು ಧೃಢೀಕರಿಸಿದ್ದಾರೆ.
ಪ್ರತಿಷ್ಟಿತ ಜಾಧವಪುರ ವಿಶ್ವವಿದ್ಯಾಲಯದ ಪದವೀಧರ ಪ್ರೋಬಿನ್. ಉದ್ಯೋಗ ಸಿಗದೇ ರೈತನಾಗಿದ್ದ ಪ್ರೋಬಿನ್, ಐದು ಎಕರೆ ಜಾಗದಲ್ಲಿ ಆಲುಗಡ್ಡೆ ಬೆಳೆದಿದ್ದ ಎಂದು ಅವರ ತಂದೆ ನಿವೃತ್ತ ಶಾಲಾ ಶಿಕ್ಷಕ ಗಂಗಾಧರ್ ಲಾಹಾ ತಿಳಿಸಿದ್ದಾರೆ.
ಬಂಪರ್ ಬೆಳೆ ಬಂದಿರುವುದರಿಂದ ರಾಜ್ಯದಲ್ಲಿ ಆಲೂ ಬೆಲೆ ಕುಸಿಯುತ್ತಿದೆ. ಇದರಿಂದ ನೊಂದಿರುವ ಪ್ರೋಬಿನ್ ಗುರುವಾರ ರಾತ್ರಿ ಊಟಕ್ಕೂ ಮುಂಚೆ ನೇಣು ಹಾಕಿಕೊಂಡಿದ್ದಾನೆ. ಆಸ್ಪತ್ರೆಗೆ ಕರೆದುಕೊಂಡು ಹೋದಮೇಲೆ ವೈದ್ಯರು ಮೃತಪಟ್ಟಿರುವುದನ್ನು ಘೋಷಿಸಿದ್ದಾರೆ.