ನವದೆಹಲಿ: ಆಫ್ಘಾನಿಸ್ಥಾನ ರಾಷ್ಟ್ರಾಧ್ಯಕ್ಷ ಅಶರಫ್ ಘನಿ ಮತ್ತು ಭಾರತ ಪ್ರಧಾನಿ ನರೇಂದ್ರ ಮೋದಿ ಅವರ ಭೇಟಿಗೂ ಮುಂಚೆ ಮಂಗಳವಾರ ವಿದೇಶಾಂಗ ವ್ಯವಹಾರಗಳ ಖಾತೆ ಸಚಿವೆ ಸುಷ್ಮಾ ಸ್ವರಾಜ್, ಘನಿ ಅವರನ್ನು ಭೇಟಿ ಮಾಡಿ ಮಾತುಕತೆ ನಡೆಸಿದ್ದಾರೆ.
ಮೂರು ದಿನಗಳ ಭೇಟಿಗಾಗಿ ಸೋಮವಾರ ರಾತ್ರಿ ಘನಿ ಅವರು ಭಾರತಕ್ಕ ಬಂದಿಳಿದಿದ್ದಾರೆ. ಏಳು ತಿಂಗಳ ಹಿಂದೆ ರಾಷ್ಟ್ರಾಧ್ಯಕ್ಷರಾಗಿ ಆಯ್ಕೆಗೊಂಡ ನಂತರ ಇದು ಮೊದಲ ಭಾರತದ ಭೇಟಿ.
ಹಣಕಾಸು ಸಚಿವಾಲಯದ ರಾಜ್ಯ ಮಂತ್ರಿ ಜಯಂತ್ ಸಿನ್ಹಾ ಘನಿ ಅವರನ್ನು ಪಳಂ ವಿಮಾನ ನಿಲ್ದಾಣದಲ್ಲಿ ಸ್ವಾಗತಿಸಿದ್ದಾರೆ.
ರಾಷ್ಟ್ರಪತಿ ಭವನದ ದ್ವಾರಕಾ ಭವನದಲ್ಲಿ ಸುಷ್ಮಾ ಸ್ವರಾಜ್ ಘನಿ ಅವರನ್ನು ಭೇಟಿ ಮಾಡಿದ್ದಾರೆ. ನಂತರ ಮೋದಿ ಅವರ ಮಾತುಕತೆಗೆ ಘನಿ ಹೈದರಾಬಾದ್ ಭವನಕ್ಕೆ ತೆರಳಲಿದ್ದಾರೆ.
ಎರಡು ಬಣಗಳು ಮಾಧ್ಯಮಕ್ಕೆ ಹೇಳಿಕೆ ನೀಡಲಿದ್ದು, ಘನಿ ಅವರು ಭದ್ರತಾ ಸಚಿವ ಮನೋಹರ್ ಪರಿಕ್ಕರ್, ಆರೋಗ್ಯ ಸಚಿವ ಜೆ ಪಿ ನಡ್ಡಾ ಒಳಗೊಂಡಂತೆ ಹಲವು ಕೇಂದ್ರ ಸಚಿವರನ್ನು ಭೇಟಿಯಾಗಲಿದ್ದಾರೆ. ಉಪರಾಷ್ಟ್ರಪತಿ ಹಮೀದ್ ಅನ್ಸಾರಿ ಅವರನ್ನು ಕೂಡ ಘನಿ ಭೇಟಿಯಾಗಲಿದ್ದಾರೆ.