ಶ್ರೀನಗರ: ಶ್ರೀನಗರದಿಂದ ೫೩ ಕಿಮೀ ದೂರದಲಿರುವ ಸೋಪೋರಿನ ಮಸೀದಿಯನ್ನು ಕಾಯುತ್ತಿದ್ದ ಪೊಲೀಸ್ ಚೌಕಿಯ ಮೇಲೆ ದಾಳಿ ಮಾಡಿದ ಪರಿಣಾಮ ಒಬ್ಬ ಪೊಲೀಸ್ ಮತ್ತು ಒಬ್ಬ ನಾಗರಿಕ ಮೃತಪಟ್ಟಿದ್ದಾರೆ.
ಬಾರಾಮುಲ್ಲಾದ ಸೋಪೋರಿನ ತುಜ್ಜಾರ್ ಶರೀಫ್ ಪ್ರದೇಶದ ಪೊಲೀಸ್ ಚೌಕಿಯ ಮೇಲೆ ಉಗ್ರರು ಗುಂಡಿನ ದಾಳಿ ನಡೆಸಿದರು ಎಂದು ಪೊಲೀಸ್ ಅಧಿಕಾರಿ ತಿಳಿಸಿದ್ದಾರೆ.
ಇದೇ ಪೊಲೀಸ್ ಚೌಲಿ ಸುಲ್ತಾನ್- ಉಲ್- ಅರಿಫಿನ್ ಮಕ್ಧೂಂ ನ ಮಸೀದಿಯನ್ನು ಕೂಡ ಕಾಯುತ್ತಿತ್ತು ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ಒಬ್ಬ ಪೊಲೀಸ್ ಕಾನ್ಸ್ಟೆಬಲ್ ಫಯಾಜ್ ಅಹ್ಮದ್ ಈ ದಾಳಿಯಲ್ಲಿ ಗಾಯಗೊಂಡಿದ್ದಾರೆ. ಇವರನ್ನು ಸೋಪೋರಿನ ಆಸ್ಪತ್ರೆಗೆ ಸೇರಿಸಲಾಗಿದೆ ಎಂದು ಅವರು ತಿಳಿಸಿದ್ದಾರೆ.
ಗಾಯಗೊಂಡ ಪೋಲಿಸರಿಂದ ಐ ಎನ್ ಎಸ್ ಎ ಎಸ್ ಬಂದೂಕು ಕಸಿದು ಉಗ್ರರು ಅಲ್ಲಿಂದ ಪರಾರಿಯಾಗಿದ್ದು, ಹೆಚ್ಚುವರಿ ಪೊಲೀಸ್ ಪಡೆಗಳನ್ನು ಅಲ್ಲಿ ನಿಯೋಜಿಸಲಾಗಿದೆ.