ಬೆಂಗಳೂರು: ಹಿರಿಯ ಸಂಶೋಧಕ ಡಾ.ಎಂ.ಎಂ. ಕಲಬುರ್ಗಿ ಅವರ ಹತ್ಯೆ ಖಂಡಿಸಿರುವ ಪ್ರಗತಿಪರ ಚಿಂತಕರು, ತಪ್ಪಿತಸ್ಥರನ್ನು ಪತ್ತೆ ಹಚ್ಚಿ ಕಠಿಣ ಶಿಕ್ಷೆಗೆ ಗುರಿಪಡಿಸುವಂತೆ ಒಕ್ಕೊರಲಿನಿಂದ ಸರ್ಕಾರವನ್ನು ಒತ್ತಾಯಿಸಿದ್ದಾರೆ.
ಭಾನುವಾರ ನಗರದ ಪುರಭವನದ ಎದುರು ಸಾಹಿತಿಗಳು, ಪ್ರಗತಿಪರ ಚಿಂತಕರು, ವಿದ್ಯಾರ್ಥಿ ಮುಖಂಡರು, ಎಸ್‍ಡಿಪಿಐ ಹಾಗೂ ಕರವೇ ಕಾರ್ಯಕರ್ತರು ಸೇರಿದಂತೆ ನೂರಕ್ಕೂ ಹೆಚ್ಚು ಮಂದಿ ಪ್ರತಿಭಟನೆಯಲ್ಲಿ ಭಾಗವಹಿಸಿ ಹತ್ಯೆ ಘಟನೆಯನ್ನು ಖಂಡಿಸಿದರು. `ಅಂದು ಬಸವಣ್ಣ, ಇಂದು ಕಲಬುರ್ಗಿ', `ಕಲಬುರ್ಗಿ ಅವರನ್ನು ಕೊಂದ ದುಷ್ಕರ್ಮಿಗಳಿಗೆ ಶಿಕ್ಷೆಯಾಗಲಿ', `ಅಭಿವ್ಯಕ್ತಿ
ಸ್ವಾತಂತ್ರ್ಯ ಹತ್ತಿಕ್ಕುವವರಿಗೆ ಶಿಕ್ಷೆಯಾಗಲಿ'...ಎಂಬಿತ್ಯಾದಿ ಘೋಷಣೆಗಳನ್ನು ಕೂಗಿ ತಮ್ಮ ಆಕ್ರೋಶ ವ್ಯಕ್ತಪಡಿಸಿದರು.
ಸರ್ವರಿಗೂ ಪ್ರಿಯವಾಗಿದ್ದ ಕಲಬುರ್ಗಿ ಅವರನ್ನು ಹತ್ಯೆಗೈದಿದ್ದು ಕನ್ನಡ ನಾಡಿಗೆ ಮಾಡಿದ ಬಹುದೊಡ್ಡ ದ್ರೋಹ. ಪ್ರಜ್ಞಾವಂತ ಸಮೂಹ ಇದನ್ನು ಖಂಡಿಸುತ್ತದೆ. ಇದು ತಲ್ಲಣದ ಸಂಗತಿಯಾಗಿದೆ. ಅಪ್ಪಟ ಬಸವಾನುಯಾಯಿಯಾಗಿದ್ದ ಅವರು ವಚನ ಸಾಹಿತ್ಯ ಕುರಿತು ಅಧಿಕೃತವಾಗಿ ಮಾತಾಡಬಲ್ಲ ಕೆಲವೇ ವಿದ್ವಾಂಸರಲ್ಲಿ ಒಬ್ಬರಾಗಿದ್ದರು.
ಹಳಗನ್ನಡ ಸಾಹಿತ್ಯ, ಜಾನಪದ, ಸಂಶೋಧನೆಯಲ್ಲಿ ಅವರದು ಎತ್ತಿದ ಕೈ. ಎಂದು ಯಾರನ್ನೂ ದ್ವೇಷಿಸದ ಅವರು, ಸೈದಾಟಛಿಂತಿಕ ಸ್ಪಷ್ಟ ದೃಷ್ಟಿಕೋನವುಳ್ಳವರಾಗಿದ್ದರು. ಹಿಂದೊಮ್ಮೆ ನೀಲಾಂಬಿಕೆ ಕುರಿತು ಮಾರ್ಗ ಕೃತಿಯಲ್ಲಿ ವಸ್ತುನಿಷ್ಠವಾದ ಲೇಖನವೊಂದನ್ನು ಬರೆದಾಗ ಜಾತಿವಾದಿಗಳಿಂದ ಹಲ್ಲೆಗೆ ಒಳಗಾಗಿದ್ದರು ಎಂದು ಪ್ರತಿಭಟನೆ ವೇಳೆ ಗುಣಗಾನ ಮಾಡಿ ಸಂತಾಪ ಸೂಚಿಸಲಾಯಿತು.
ಪ್ರತಿಭಟನೆಯಲ್ಲಿ ಸಾಹಿತಿಗಳಾದ ಡಾ.ಗಿರೀಶ್ ಕಾರ್ನಾಡ್, ಡಾ.ಜಿ.ಆರ್. ರಾಮಕೃಷ್ಣ, ಡಾ.ಕೆ.ಮರುಳಸಿದ್ದಪ್ಪ, ಪ್ರೊ.ಬರಗೂರು ರಾಮಚಂದ್ರಪ್ಪ,ಬೊಳುವಾರ ಮೊಹಮ್ಮದ್ ಕುಂಞ ಎಂ.ಎಸ್.ಆಶಾದೇವಿ, ಮಾಜಿ ಸಭಾಪತಿ ಪ್ರೊ.ಬಿ.ಕೆ. ಚಂದ್ರಶೇಖರ್, ಕಾರ್ಮಿಕ ಮುಖಂಡ ಜಿ.ಎನ್ .ನಾಗರಾಜ್, ಮುಖ್ಯಮಂತ್ರಿಗಳ ಮಾಧ್ಯಮ ಸಲಹೆಗಾರ ದಿನೇಶ್ ಅಮೀನ್‍ಮಟ್ಟು, ರಂಗಕರ್ಮಿ ಸಿ. ಬಸವಲಿಂಗಯ್ಯ, ಪತ್ರಕರ್ತೆ ಕವಿತಾ ಲಂಕೇಶ್, ಲೇಖಕಿಯರ ಸಂಘದ ಅಧ್ಯಕ್ಷೆ ಡಾ. ವಸುಂಧರಾ ಭೂಪತಿ, ಪ್ರೊ. ಪಂಡಿತಾರಾಧ್ಯ, ಎಸ್‍ಡಿಪಿಐ ರಾಜ್ಯಾಧ್ಯಕ್ಷ ಅಬ್ದುಲ್ ಮಜೀದ್, ಹಿಂದುಳಿದ ವರ್ಗಗಳ ಶಾಶ್ವತ ಆಯೋಗದ ಮಾಜಿ ಅಧ್ಯಕ್ಷ ಡಾ.ಸಿ.ಎಸ್. ದ್ವಾರಕನಾಥ್, ಸಾಮಾಜಿಕ ಕಾರ್ಯಕರ್ತರಾದ ವಿಮಲಾ, ಸುಜೇಂದ್ರ ಸೇರಿದಂತೆ ಹಲವು ಮಂದಿ ಭಾಗವಹಿಸಿದ್ದರು.
ನಿರ್ಣಯಗಳು