ದೆಹಲಿ ಮುಖ್ಯಮಂತ್ರಿ ಅರವಿಂದ ಕೇಜ್ರಿವಾಲ್ 
ಪ್ರಧಾನ ಸುದ್ದಿ

ಚುನಾವಣಾ ಭರವಸೆಗಳನ್ನು ಪೂರೈಸಲು ಎಎಪಿ ವಿಫಲವಾಗಿದೆ: ಬಿಜೆಪಿ

ಚುನಾವಣೆಗೂ ಪ್ರಣಾಳಿಕೆಯಲ್ಲಿ ತಿಳಿಸಲಾಗಿದ್ದ ಮಹಿಳೆಯರಿಗೆ ಸುರಕ್ಷತೆ, ಉಚಿತ ವೈ-ಫೈ ಮುಂತಾದ ವಚನಗಳಿಗೆ ರೂಪ ನಿಡಲು ಎಎಪಿ ಸರ್ಕಾರ ವಿಫಲವಾಗಿದೆ

ನವದೆಹಲಿ: ಚುನಾವಣೆಗೂ ಪ್ರಣಾಳಿಕೆಯಲ್ಲಿ ತಿಳಿಸಲಾಗಿದ್ದ ಮಹಿಳೆಯರಿಗೆ ಸುರಕ್ಷತೆ, ಉಚಿತ ವೈ-ಫೈ ಮುಂತಾದ ವಚನಗಳಿಗೆ ರೂಪ ನಿಡಲು ಎಎಪಿ ಸರ್ಕಾರ ವಿಫಲವಾಗಿದೆ ಎಂದು ಬಿಜೆಪಿ ಪಕ್ಷದ ಎಲ್ಲ ೭ ಲೋಕಸಭಾ ಸಂಸದರು ಜಂಟಿ ಹೇಳಿಕೆ ನಿಡಿದ್ದಾರೆ.

"ಎಎಪಿ ಸರ್ಕಾರಕ್ಕೆ ಒಂದು ವರ್ಷ ತುಂಬುತ್ತಿದೆ ಆದರೆ ಅವರು ನೀಡಿದ್ದ ೭೦ ಚುನಾವಣಾ ಭರವಸೆಗಳನ್ನು ಪೂರೈಸಲು ವಿಫಲವಾಗಿದೆ" ಎಂದು ಬಿಜೆಪಿ ಸಂಸದ ಮತ್ತು ಕೆಂದ್ರ ಸಚಿವ ಹರ್ಷವರ್ಧನ್ ಹೇಳಿದ್ದಾರೆ.

ಮುಂದಿನ ವರ್ಷ ಫೆಬ್ರವರಿ ೧೪ಕ್ಕೆ ದೆಹಲಿ ಮುಖ್ಯಮಂತ್ರಿ ಅರವಿಂದ ಕೇಜ್ರಿವಾಲ್ ಸರ್ಕಾರ ಒಂದು ವರ್ಷದ ಆಡಳಿತ ಪೂರೈಸಲಿದೆ.

ದೆಹಲಿ ಸಂಸದರಿಗೆ ಎಎಪಿ ಸರ್ಕಾರ ಸರಿಯಾದ ಮರ್ಯಾದೆ ನೀಡುತ್ತಿಲ್ಲ ಎಂದು ಕೂಡ ಚಾಂದಿನಿ ಚೌಕ್ ನಿಂದ ಆಯ್ಕೆಯಾಗಿರುವ ಸಂಸದ ಹರ್ಷವರ್ಧನ್ ದೂರಿದ್ದಾರೆ.

ಮಹಿಳಾ ಸುರಕ್ಷತೆಗಾಗಿ ಯಾವುದೇ ಒಳ್ಳೆಯ ಯೋಜನೆ ರೂಪಿಸಲು ಎಎಪಿ ಪಕ್ಷ ವಿಫಲವಾಗಿದೆ ಎಂದು ಮತ್ತೊಬ್ಬ ಸಂಸದೆ ಮೀನಾಕ್ಷಿ ಲೇಕಿ ದೂರಿದ್ದಾರೆ.

Follow KannadaPrabha channel on WhatsApp

  

KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ

 

Subscribe to KannadaPrabha YouTube Channel and watch Videos

'ದೊಡ್ಡ ಆಘಾತ': ಅಮೆರಿಕದಲ್ಲಿ ಶೇ.50 ಸುಂಕ ಜಾರಿ, 48.2 ಬಿಲಿಯನ್ ಡಾಲರ್ ಮೌಲ್ಯದ ಭಾರತದ ರಫ್ತಿಗೆ ಹೊಡೆತ

ಜಮ್ಮುವಿನಲ್ಲಿ ಭೀಕರ ಮಳೆಯಿಂದ ಭಾರೀ ಅನಾಹುತ ಸೃಷ್ಟಿ: ವೈಷ್ಣೋದೇವಿ ಮಾರ್ಗದಲ್ಲಿ ಭೂಕುಸಿತ, ಕನಿಷ್ಠ 32 ಮಂದಿ ಸಾವು

Shocking: ಆಸಿಸ್ ಕ್ರಿಕೆಟ್ ದಿಗ್ಗಜ Michael Clarkeಗೆ 'ಚರ್ಮದ ಕ್ಯಾನ್ಸರ್'!

'ಮದುವೆಗೆ ಮುನ್ನ ಪೋಷಕರ ಒಪ್ಪಿಗೆ ಕಡ್ಡಾಯಗೊಳಿಸಿ': ಹರಿಯಾಣ BJP ಶಾಸಕ

ಭಾರತದ ಮೇಲೆ ಸುಂಕಾಸ್ತ್ರ ಜಾರಿ: ಮತ್ತೆ ಇಂಡೋ-ಪಾಕ್ ಯುದ್ಧ ನಿಲ್ಲಿಸಿದ್ದು ನಾನೇ ಎಂದು ಪುನರುಚ್ಛರಿಸಿದ ಡೊನಾಲ್ಡ್ ಟ್ರಂಪ್

SCROLL FOR NEXT