ಪ್ರಧಾನ ಸುದ್ದಿ

ಗುಲಾಬಿ ಅಥವಾ ಸಿಹಿ ಪೊಟ್ಟಣ? ವ್ಯಾಪಕಗೊಂಡಿರುವ ಲಿಂಗ ಪತ್ತೆ ಹಚ್ಚುವ ಮೊಬೈಲ್ ಸಾಧನಗಳು

Guruprasad Narayana

ಕೊಯಂಬತ್ತೂರು: ಜನನ ಪೂರ್ವ ಲಿಂಗ ಪರೀಕ್ಷೆ ಅಪರಾಧ ಎಂದು ಸುಪ್ರೀಮ್ ಕೋರ್ಟ್ ಸೂಚನೆ ನೀಡಿದ್ದರೂ, ತಮಿಳು ನಾಡಿನಾದ್ಯಂತ ಸುಲಭವಾಗಿ ಒಯ್ಯಬಹುದಾದ ಮೊಬೈಲ್ ಅಲ್ಟ್ರಾ ಸೌಂಡ್ ಸ್ಕ್ಯಾನ್ ಸಾಧನಗಳು ಲಿಂಗ ಪತ್ತೆ ಹಚ್ಚುವ ಕಾರ್ಯದಲ್ಲಿ ವ್ಯಾಪಕವಾಗಿ ಬಳಕೆಯಲ್ಲಿವೆ. ಕಾರ್ಯಕರ್ತರು, ಎನ್ ಜಿ ಓ ಗಳು ಮತ್ತು ಆರೋಗ್ಯ ಅಧಿಕಾರಿಗಳನ್ನು ಪ್ರಶ್ನಿಸಿದಾಗ, ಕಡಲೂರು, ತಿರುವಲ್ಲೂರು, ಕೃಷ್ಣಗಿರಿ ಮತ್ತು ಧರ್ಮಪುರಿ ಜಿಲ್ಲೆಗಳಲ್ಲಿ ಭ್ರೂಣ ಲಿಂಗ ಪತ್ತೆ ಹಚ್ಚುವ ಸಾಧನಗಳು ಹಾಗು ಕೆಲವು ಕಡೆ ಭ್ರೂಣ ಹತ್ಯೆಗೆ ಸಹಕರಿಸುವ ಕ್ಲಿನಿಕ್ ಗಳು ವ್ಯಾಪಕವಾಗಿ ಹರಡಿರುವ ಸುದ್ದಿ ತಿಳಿಯುತ್ತದೆ.

ಭ್ರೂಣ ಲಿಂಗ ಪತ್ತೆ ಮತ್ತು ಹೆಣ್ಣು ಭ್ರೂಣ ಹತ್ಯೆ ಗಂಡು ಹೆಣ್ಣಿನ ಸಂಖ್ಯ ಅನುಪಾದಲ್ಲಿನ ತೀವ್ರ ವ್ಯತ್ಯಾಸಕ್ಕೆ ಕಾರಣ ಎನ್ನಲಾಗಿದೆ.

ಲ್ಯಾಪ್ ಟಾಪ್ ಗಾತ್ರದ ಈ ಮೊಬೈಲ್ ಸ್ಕಾನಿಗ್ ಸಾಧನಗಳು ಡಾಕ್ಟರ್ ನ ಚೀಲದಲ್ಲಿ ಹಾಕಿಕೊಳ್ಳುವಷ್ಟು ಚಿಕ್ಕದಾಗಿರುತ್ತವೆ.

ಕೃಷ್ಣಗಿರಿಯ ಸಾರ್ವಜನಿಕ ಆರೋಗ್ಯ ಇಲಾಖೆ ಅಧಿಕಾರಿ ಡಾ. ಹರಿಪ್ರಸಾದ್ ಅವರ ಪ್ರಕಾರ, ಕೆಲವು ಸ್ಕ್ಯಾನಿಂಗ್ ಕೇಂದ್ರಗಳಲ್ಲಿ ರಹಸ್ಯ ಪದ-ಸಂಕೇತಗಳ ಮೂಲಕ ವ್ಯವಹರಿಸಲಾಗುತ್ತದೆ. ಉದಾಹರಣೆಗೆ ಗಂಡು ಭ್ರೂಣವಾಗಿದ್ದರೆ ಒಂದು ಸಿಹಿ ಪೊಟ್ಟಣದ ಜೊತೆ ಬಿಲ್ ನೀಡಲಾಗುತ್ತದೆ.

ಕಡಲೂರು, ನೈವೇಲಿ, ಪನೃತಿ ಮತ್ತು ವಡಲೂರಿನ ಏಳು ಸ್ಕಾನ್ನಿಂಗ್ ಕೇಂದ್ರಗಳಲ್ಲಿ ಹೆಣ್ಣು ಭ್ರೂಣವನ್ನು ಸೂಚಿಸಲು ಚಾಕೊಲೇಟ್ ಅಥವಾ ಗುಲಾಬಿ ಹೂವನ್ನು ನೀಡಲಾಗುತ್ತಿದೆ ಎಂದು ತಿಳಿದು ಬಂದಿದೆ.

SCROLL FOR NEXT