ಗಾಂಧಿನಗರ: ಯುವ ಪ್ರವಾಸಿ ಭಾರತೀಯ ದಿವಸ್ ಕಾರ್ಯಕ್ರಮಕ್ಕೆ ವಿದೇಶಾಂಗ ಸಚಿವೆ ಸುಷ್ಮಾ ಸ್ವರಾಜ್ ಬುಧವಾರ ಚಾಲನೆ ನೀಡಿದ್ದಾರೆ.
ಪರಸ್ಪರ ಸಂಪರ್ಕ ಬೆಳೆಸುವ ಹಾಗೂ ವಾಣಿಜ್ಯ ಸಂಬಂಧವನ್ನು ದೃಢಗೊಳಿಸುವ ನಿಟ್ಟಿನಲ್ಲಿ ಭಾರತೀಯ ಮೂಲದ ವ್ಯಕ್ತಿಗಳನ್ನು ಜತೆಗೂಡಿಸುವ ವಾರ್ಷಿಕ ಕಾರ್ಯಕ್ರಮವಾದ 13ನೇ ಪ್ರವಾಸಿ ಭಾರತೀಯ ದಿವಸ್ ನಲ್ಲಿ 4,000 ಕ್ಕಿಂತಲೂ ಹೆಚ್ಚು ಜನಪ್ರತಿನಿಧಿಗಳು ಭಾಗವಹಿಸಿದ್ದಾರೆ.
ಮಹಾತ್ಮಾ ಗಾಂಧಿ ದಕ್ಷಿಣ ಆಫ್ರಿಕಾದಿಂದ ಭಾರತಕ್ಕೆ ಮರಳಿದ ದಿನದ ನೆನಪಿಗಾಗಿ ಜನವರಿ 7-9ರ ವರೆಗೆ ಮಹಾತ್ಮಾ ಗಾಂಧಿ ಕಾಂಪ್ಲೆಕ್ಸ್‌ನಲ್ಲಿ ಮೂರು ದಿನಗಳ ಕಾರ್ಯಕ್ರಮ ನಡೆಯಲಿದೆ.
ಕಾರ್ಯಕ್ರಮವನ್ನುದ್ದೇಶಿಸಿ ಮಾತನಾಡಿದ ಸುಷ್ಮಾ ಸ್ವರಾಜ್, ದೇಶದ ಅಭಿವೃದ್ಧಿಗಾಗಿ ಯುವಜನತೆ ಶ್ರಮಿಸಬೇಕು ಎಂದಿದ್ದಾರೆ.
ಭಾರತ ಈಗ ಬಡದೇಶವಾಗಿ ಉಳಿದಿಲ್ಲ. ನಮ್ಮ ದೇಶ ಪ್ರಗತಿಯತ್ತ ಸಾಗುತ್ತಿದೆ. ನಮ್ಮ ದೇಶದಲ್ಲಿನ ಪ್ರಜಾಪ್ರಭುತ್ವ ಮತ್ತು ಯುವ ಜನತೆಯೇ ನಮ್ಮ ಶಕ್ತಿಯಾಗಿದೆ. ಭಾರತದ ಜನಸಂಖ್ಯೆಯಲ್ಲಿ ಶೇ.50 ಜನರು 25 ವರ್ಷದ ಕೆಳಗಿನವರಾಗಿದ್ದಾರೆ. ಸರ್ಕಾರ ಉತ್ತಮ ರೀತಿಯಲ್ಲಿ ಕೆಲಸ ಮಾಡುತ್ತಿದ್ದು, ಶಿಕ್ಷಣ, ಆರೋಗ್ಯ ಮತ್ತು ಸಂಶೋಧನೆಯತ್ತ ಹೆಚ್ಚಿನ ಆದ್ಯತೆಯನ್ನು ನೀಡಿದೆ. ಇಲ್ಲಿನ ಯುವಜನತೆಯೇ ಭಾರತದ ರಾಯಭಾರಿಗಳಾಗಿದ್ದಾರೆ ಎಂದು ಸುಷ್ಮಾ ಹೇಳಿದ್ದಾರೆ.
Follow KannadaPrabha channel on WhatsApp
Download the KannadaPrabha News app to follow the latest news updates
Subscribe and Receive exclusive content and updates on your favorite topics
Subscribe to KannadaPrabha YouTube Channel and watch Videos