ಚಾರ್ಲಿ ಹೆಬ್ಡೊ ಪತ್ರಿಕೆಯ ಮುಖಪುಟ 
ಪ್ರಧಾನ ಸುದ್ದಿ

ಪ್ಯಾರಿಸ್ ಶೂಟೌಟ್: ಮೃತರ ಸಂಖ್ಯೆ ೧೨ಕ್ಕೆ ಏರಿಕೆ

ಫ್ರಾನ್ಸ್ ರಾಜಧಾನಿಯಲ್ಲಿರುವ ವಿಡಂಬನಾ ಪತ್ರಿಕೆ ಚಾರ್ಲಿ ಹೆಬ್ಡೊ ಕಛೇರಿಯ ಮೇಲೆ

ಪ್ಯಾರಿಸ್: ಫ್ರಾನ್ಸ್ ರಾಜಧಾನಿಯಲ್ಲಿರುವ ವಿಡಂಬನಾ ಪತ್ರಿಕೆ ಚಾರ್ಲಿ ಹೆಬ್ಡೊ ಕಛೇರಿಯ ಮೇಲೆ ನಡೆದಿರುವ ಗುಂಡಿನ ದಾಳಿಯಲ್ಲಿ ಮೃತರ ಸಂಖ್ಯೆ ೧೨ಕ್ಕೆ ಏರಿದೆ. ಫ್ರಾನ್ಸ್ ಅಧ್ಯಕ್ಷ ಫ್ರಾನ್ ಸ್ವಾ ಓಲ್ವಾಂಡ್ ಅವರು ಇದನ್ನು ಭಯೋತ್ಪಾದನಾ ಕೃತ್ಯ ಎಂದಿದ್ದು ಫ್ರಾನ್ಸ್ ನಲ್ಲಿ ಕಟ್ಟೆಚ್ಚರಿಕೆ ಸೂಚಿಸಿದ್ದಾರೆ. ಈ ದಾಳಿಯಲ್ಲಿ ಇಬ್ಬರು ಪೊಲೀಸ್ ಅಧಿಕಾರಿಗಳು ಕೂಡ ಮೃತಪಟ್ಟಿದ್ದಾರೆ.

ಧರ್ಮದ ಬಗ್ಗೆ ಕಾರ್ಟೂನ್ ಗಳನ್ನು ಪ್ರಕಟಿಸುವ ಈ ಪತ್ರಿಕೆ, ಡ್ಯಾನಿಶ್ ಪತ್ರಿಕೆಯೊಂದು ಹಿಂದೆ ಪ್ರಕಟಿಸಿದ್ದ ಪ್ರವಾದಿ ಮಹಮದ್ದನ ವಿವಾದಿತ ಕಾರ್ಟೂನ್ ಒಂದನ್ನು ಮರುಪ್ರಕಟಿಸಿ ಮುಸ್ಲಿಂ ಉಗ್ರಗಾಮಿ ಸಂಘಟನೆಯಾದ ತಾಲಿಬಾನ್ ನ ಹಿಟ್ ಲಿಸ್ಟ್ ನಲ್ಲಿ ಸೇರ್ಪಡೆಯಾಗಿತ್ತು. ಹಾಗೆಯೇ ನವೆಂಬರ್ ೨೦೧೧ ರಲ್ಲಿ ಕಛೇರಿಯ ಮೇಲೆ ಬಾಂಬ್ ದಾಳಿ ಕೂಡ ಆಗಿತ್ತು. ಇದಾದ ಮರು ಸಂಚಿಕೆಯಲ್ಲೇ "ದ್ವೇಶಕ್ಕಿಂತ ಪ್ರೀತಿ ದೊಡ್ಡದು" ಎಂಬ ಸಂದೇಶ ಸಾರುವ ಮತ್ತೊಂದು ವಿವಾದಿತ ಕಾರ್ಟೂನ್ ಒಂದನ್ನು ಪತ್ರಿಕೆ ಪ್ರಕಟಿಸಿತ್ತು.

ಈ ದಾಳಿಯ ಪ್ರಮುಖ ಗುರಿಗಳು ಪತ್ರಿಕೆಯ ಕಾರ್ಟೂನಿಸ್ಟ್ ಗಳಾಗಿದ್ದರು ಎಂದು ತಿಳಿದು ಬಂದಿದೆ. ಪತ್ರಿಕೆಯ ಸಂಪಾದಕ ಮುಖ್ಯಸ್ಥ ಕಾರ್ವ್, ಕಾರ್ಟೂನಿಸ್ಟ್ ಕಾಬು ಸೇರಿದಂತೆ ನಾಲ್ಕು ಕಾರ್ಟೂನಿಸ್ಟ್ ಗಳು ಈ ದಾಳಿಯಲ್ಲಿ ಮೃತಪಟ್ಟಿದ್ದಾರೆ.

Follow KannadaPrabha channel on WhatsApp

  

KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ

 

Subscribe to KannadaPrabha YouTube Channel and watch Videos

ಅಮೆರಿಕ ನಿಯೋಜಿತ ರಾಯಭಾರಿ ಸೆರ್ಗಿಯೊ ಗೋರ್- ಮೋದಿ, ಜೈಶಂಕರ್ ಭೇಟಿ; Tariff ಒತ್ತಡದ ನಡುವೆ ಭಾರತ-ಅಮೆರಿಕ ಸಂಬಂಧ ಸುಧಾರಣೆಯ ಸೂಚನೆ?

ಅಫ್ಘಾನಿಸ್ತಾನ ನಮ್ಮೊಂದಿಗೆ ಗಡಿ ಹಂಚಿಕೊಂಡಿರುವ ನೆರೆ ರಾಷ್ಟ್ರ- S Jaishankar; ಭಾರತದೊಂದಿಗೆ POK ವಿಲೀನದ ಸುಳಿವು; ಚೀನಾಗೂ ಶಾಕ್!

ಅಬ್ಬಬ್ಬಾ ರೋಮಾಂಚನ: ಅದ್ಭುತ ಸೃಷ್ಟಿಸಿದ ರಿಷಬ್ ಶೆಟ್ಟಿಗೆ ರಾಷ್ಟ್ರಪ್ರಶಸ್ತಿ ಕೊಡಲೇಬೇಕು - ತಮಿಳು ನಿರ್ದೇಶಕ ಅಟ್ಲೀ

Pakistan: ಇಸ್ರೇಲ್ ವಿರೋಧಿ ಪ್ರತಿಭಟನಾ ಜಾಥಾ, ಪೋಲೀಸರ ಗುಂಡೇಟಿಗೆ 11 ಮಂದಿ ಬಲಿ! Video

ಉತ್ತರ ಪ್ರದೇಶಕ್ಕೆ ಭೇಟಿ ನೀಡಿದ ತಾಲಿಬಾನ್ ಸಚಿವನಿಗೆ ಅದ್ಧೂರಿ ಸ್ವಾಗತ, ಸರ್ಕಾರದ ಭದ್ರತೆ; ಯೋಗಿಗೆ ನಾಚಿಕೆಯಾಗಬೇಕು- SP ಸಂಸದ ಶಫೀಕರ್

SCROLL FOR NEXT