ಪ್ರಧಾನ ಸುದ್ದಿ

ಪಾಕಿಸ್ತಾನದಿಂದ ೩೮ ಭಾರತೀಯ ಮೀನುಗಾರರ ಬಂಧನ

Guruprasad Narayana

ಇಸ್ಲಾಮಾಬಾದ್: ಅರೇಬಿಯನ್ ಸಮುದ್ರದಲ್ಲಿ ಸಮುದ್ರ ಗಡಿಯನ್ನು ದಾಟಿದ್ದಾರೆ ಎಂಬ ಕಾರಣಕ್ಕೆ ಭಾರತದ ೩೮ ಮೀನುಗಾರರನ್ನು ಪಾಕಿಸ್ತಾನ ಬಂಧಿಸಿದೆ ಎಂದು ಗುರುವಾರ ಪೊಲೀಸರು ತಿಳಿಸಿದ್ದಾರೆ.

ಪಾಕಿಸ್ತಾನದ ಜಲಾಂತರ್ಯ ಭದ್ರತಾ ಪಡೆ ಜನವರಿ ೨೧ ರಂದು ಮೀನುಗಾರರನ್ನು ಬಂಧಿಸಿ ಏಳು ಹಡಗುಗಳನ್ನು ವಶಪಡಿಸಿಕೊಂಡಿದೆ. ಈ ಘಟನೆ ಕರಾಚಿ ಬಂದರಿನ ಹತ್ತಿರ ನಡೆದಿದೆ. ಮೀನುಗಾರರನ್ನು ನಂತರ ಪೊಲೀಸರಿಗೆ ಒಪ್ಪಿಸಲಾಗಿದೆ.

ಪಾಕಿಸ್ತಾನಕ್ಕೆ ಅನಧಿಕೃತವಾಗಿ ನುಸುಳಲು ಯತ್ನಿಸುವ ಆರೋಪವನ್ನು ಮೀನುಗಾರರ ಮೇಲೆ ಹೊರಿಸಲಾಗಿದೆ ಎಂದು ಅಧಿಕಾರಿಯೊಬ್ಬರು ತಿಳಿಸಿದ್ದಾರೆ.

ಅರೇಬಿಯನ್ ಸಮುದ್ರದಲ್ಲಿ ಗಡಿಯನ್ನು ಸರಿಯಾಗಿ ಗುರುತಿಸಿಲ್ಲದ ಕಾರಣ ಎರಡು ದೇಶಗಳು ವಿರುದ್ಧ ದೇಶದ ಮೀನುಗಾರನ್ನು ಹಿಡಿಯುವುದು ವಾಡಿಕೆಯಾಗಿಬಿಟ್ಟಿದೆ. ನಂತರ ದ್ವಿಪಕ್ಷೀಯ ಮಾತುಕತೆಗಳ ನಂತರ ಬಂಧಿತ ಮೀನುಗಾರರನ್ನು ಎರಡೂ ದೇಶಗಳು ಬಿಡುಗಡೆ ಮಾಡುವುದು ಕೂಡ ರೂಢಿ.

ನರೇಂದ್ರ ಮೋದಿ ಪ್ರಧಾನ ಮಂತ್ರಿಯಾಗಿ ವಚನ ಸ್ವೀಕಾರ ಸಮಾರಂಭಕ್ಕೆ ಪಾಕಿಸ್ತಾನದ ಪ್ರಧಾನಿ ನವಾಜ್ ಶರೀಫ್ ಆಗಮಿಸಿದ್ದಾಗ, ೧೫೧ ಜನ ಭಾರತೀಯ ಮೀನುಗಾರರನ್ನು ಬಿಡುಗಡೆ ಮಾಡಿದ್ದರು.

SCROLL FOR NEXT