ಒಬಾಮಾ ಜತೆ ಚಾಯ್ ಪೆ ಚರ್ಚಾದಲ್ಲಿ ನರೇಂದ್ರ ಮೋದಿ 
ಪ್ರಧಾನ ಸುದ್ದಿ

ಮೋದಿ ಸೂಟ್‌ನಲ್ಲೂ 'ಮೋದಿ ನಾಮಧೇಯ'!

ಅಮೆರಿಕದ ಅಧ್ಯಕ್ಷ ಬರಾಕ್ ಒಬಾಮಾರನ್ನು ಭಾನುವಾರ ಭೇಟಿ ಮಾಡಿದಾಗ ಪ್ರಧಾನಿ ನರೇಂದ್ರ ಮೋದಿ ತೊಟ್ಟ ಡ್ರೆಸ್...

ದೆಹಲಿ: ಅಮೆರಿಕದ ಅಧ್ಯಕ್ಷ ಬರಾಕ್ ಒಬಾಮಾರನ್ನು ಭಾನುವಾರ ಭೇಟಿ ಮಾಡಿದಾಗ ಪ್ರಧಾನಿ ನರೇಂದ್ರ ಮೋದಿ ತೊಟ್ಟ ಡ್ರೆಸ್ ಗಮನ ಸೆಳೆದುದು ಮಾತ್ರವಲ್ಲದೆ ಅದನ್ನು ನೋಡಿ ಒಬಾಮಾ ಅಚ್ಚರಿಪಟ್ಟಿದ್ದರಂತೆ!

ಹೈದ್ರಾಬಾದ್ ಹೌಸ್‌ನಲ್ಲಿ ಒಬಾಮಾ ಜತೆ ಚಾಯ್ ಪೆ ಚರ್ಚಾದಲ್ಲಿ ಪಾಲ್ಗೊಂಡಾಗ ಮೋದಿ ಧರಿಸಿದ್ದ ಸೂಟ್ ವಿಶಿಷ್ಟವಾಗಿತ್ತು. ಹಾಗಾದರೆ ಅದರಲ್ಲಿ ಅಂತದ್ದೇನಿತ್ತು?



ಮೋದಿ ಧರಿಸಿದ 'ಬಂಧ್‌ಗಾಲಾ' ಕಡು ನೀಲಿ ಸೂಟ್‌ನಲ್ಲಿ ಬಿಳಿಯ ಗೆರೆಯಂತೆ ಕಾಣುವ ಫ್ಯಾಬ್ರಿಕ್‌ನಲ್ಲಿ  1000 ಬಾರಿ 'ನರೇಂದ್ರ ದಾಮೋದರ್‌ದಾಸ್ ಮೋದಿ' ಎಂದು ಬರೆಯಲಾಗಿತ್ತು. ತುಂಬಾ ಅಪರೂಪದ ಡ್ರೆಸ್‌ನ್ನು ಧರಿಸುವ ಮೂಲಕ ಮೋದಿ ಒಬಾಮಗೂ ಅಚ್ಚರಿಯನ್ನುಂಟು ಮಾಡಿದ್ದರು.



ಚಾಯ್ ಪೆ ಚರ್ಚಾ ಕಾರ್ಯಕ್ರಮದ ಫೋಟೋಗಳನ್ನು ಸೆರೆಹಿಡಿಯಲು ಬಂದ ಕೆಲವು ಫೋಟೋಗ್ರಾಫರ್‌ಗಳಿಗಷ್ಟೇ ಮೋದಿ ಸೂಟ್‌ನಲ್ಲಿರುವ ಮೋದಿ ಹೆಸರು ಕಣ್ಣಿಗೆ ಬಿದ್ದಿತ್ತು. ಸೋಮವಾರ ಸಾಮಾಜಿಕ ತಾಣಗಳಲ್ಲಿ ಮೋದಿ ವಿಶೇಷ ಸೂಟ್‌ನ ಜೂಮ್ ಮಾಡಿದ ಫೋಟೋಗಳು ಪ್ರಕಟವಾಗಿದ್ದು, ಮೋದಿ ಡ್ರೆಸ್ಸಿಂಗ್ ಸೆನ್ಸ್ ಬಗ್ಗೆ ಬಹುಪರಾಕ್ ಕೇಳಿಬರುತ್ತಿದೆ.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

UN-OIC ಕರಡು ನಿರ್ಣಯ: ಉದ್ದೇಶಪೂರ್ವಕವಾಗಿ ಭಾರತವನ್ನು ದೂರವಿಟ್ಟ ಟರ್ಕಿ ವಿರುದ್ಧ ಭಾರತ ತೀವ್ರ ಕಿಡಿ, ನಿರ್ಣಯದ ವಿರುದ್ಧ ಮತದಾನ

ಸದ್ದೇ ಇಲ್ಲದೇ OTTಗೆ ಲಗ್ಗೆ ಇಟ್ಟ ಕನ್ನಡ ಬ್ಲಾಕ್ ಬಸ್ಟರ್ ಚಿತ್ರ 'ಪ್ರೇಮದ ಊರಲಿ'.. ಎಲ್ಲಿ, ಯಾವಾಗ?

West Asia Conflict ಎಫೆಕ್ಟ್: ರಫ್ತುದಾರರಿಗೆ ತೆರಿಗೆ ಬಿಸಿ; Diesel-ATF ರಫ್ತಿನ ಮೇಲಿನ Windfall ತೆರಿಗೆ ಹೆಚ್ಚಿಸಿದ ಕೇಂದ್ರ ಸರ್ಕಾರ, ಪೆಟ್ರೋಲ್‌ಗೆ ಶೂನ್ಯ ಸುಂಕ ಮುಂದುವರಿಕೆ..!

IPL: ರಾಜಸ್ಥಾನ್ ರಾಯಲ್ಸ್ ಗೆ ಕೈಕೊಟ್ಟ ಯಶಸ್ವಿ ಜೈಸ್ವಾಲ್?, KKR ಸೇರುವ ಸಾಧ್ಯತೆ ಇದೆ ಎಂದ ಇರ್ಫಾನ್ ಪಠಾಣ್!

'ನಕಲಿ ಬೌಲಿಂಗ್‌ನೊಂದಿಗೆ ಇಷ್ಟು ವರ್ಷ ಆಡಿದ್ದಾನೆ': ಟೀಂ ಇಂಡಿಯಾ ಉದಯೋನ್ಮುಖ ವೇಗಿ ಕುರಿತು ಮಾಜಿ ಕ್ರಿಕೆಟಿಗ ಕಿಡಿ!