ಪ್ರಧಾನ ಸುದ್ದಿ

ಕಲಾಂ ರಾಮೇಶ್ವರಂ ಮನೆಯ ಸುತ್ತ ಭಾರಿ ಜನಸ್ತೋಮ

Guruprasad Narayana

ಚೆನ್ನೈ: ದಿವಂಗತ ಭಾರತೀಯ ವಿಜ್ಞಾನಿ ಹಾಗು ಮಾಜಿ ರಾಷ್ಟ್ರಪತಿ ಎ ಪಿ ಜೆ ಅಬ್ದುಲ್ ಕಲಾಂ ಅವರ ರಾಮೇಶ್ವರಂ ಗೃಹದ ಸುತ್ತ ಹೆಚ್ಚಿನ ಸಂಖ್ಯೆಯಲ್ಲಿ ಜನ ನೆರೆದಿದ್ದಾರೆ ಎಂದು ಬುಧವಾರ ಸಂಬಧಿಯೊಬ್ಬರು ತಿಳಿಸಿದ್ದಾರೆ.

"ಕೊನೆಯ ವಿಧಿಗೆ ಗೌರವ ಸಮರ್ಪಿಸಲು ಕಲಾಂ ಅವರ ಮನೆಯ ಸುತ್ತ ಹೆಚ್ಚಿನ ಸಂಖ್ಯೆಯಲ್ಲಿ ಜನ ನೆರೆದಿದ್ದಾರೆ" ಎಂದು ಕಲಾಂ ಅವರ ಸಹೋದರರ ಮೊಮ್ಮಗ ಶೇಕ್ ಸಲೀಮ್ ತಿಳಿಸಿದ್ದಾರೆ.

"ನಮ್ಮ ಸಂಬಂಧಿಗಳೆಲ್ಲರೂ ಕೊನೆಯ ವಿಧಿಯಲ್ಲಿ ಭಾಗವಹಿಸಲು ಬಂದಿದ್ದಾರೆ" ಎಂದು ಅವರು ತಿಳಿಸಿದ್ದಾರೆ.

ಹಿಂದೂ ಧರ್ಮದ ಪುಣ್ಯ ಕ್ಷೇತ್ರವಾದ ಸಮುದ್ರ ತೀರದ ರಾಮೇಶ್ವರಂ ಚೆನ್ನೈನಿಂದ ೬೦೦ ಕಿಮೀ ದೂರದಲ್ಲಿದೆ. ಕಲಾಂ ಅವರು ಜನಿಸಿದ್ದು ಇಲ್ಲಿಯೇ ಹಾಗು ಬಡತನದಲ್ಲಿ ತಮ್ಮ ಬಾಲ್ಯವನ್ನು ಇಲ್ಲಿ ಕಳೆದಿದ್ದರು.

ಬಸ್ ನಿಲ್ದಾಣದ ಬಳಿ ಕಲಾಂ ಅವರ ದೇಹವನ್ನು ಇರಿಸಲಾಗುವುದು ಮತ್ತು ಸಾರ್ವಜನಿಕರು ಅಂತಿಮ ದರ್ಶನವನ್ನು ಪಡೆಯಬಹುದು ಎಂದು ಸಲೀಮ್ ತಿಳಿಸಿದ್ದಾರೆ.

"ಬುಧವಾರ ರಾತ್ರಿ ೮ ರವರೆಗೆ ಸಾರ್ವಜನಿಕರು ದರ್ಶನವನ್ನು ಪಡೆಯಬಹುದಾಗಿದ್ದು, ನಂತರ ಮಾಸ್ಕ್ ರಸ್ತೆಯಲ್ಲಿರುವ 'ಕಲಾಂ ಮನೆ'ಗೆ ದೇಹವನ್ನು ಕೊಂಡೊಯ್ಯಲಾಗುತ್ತದೆ ಎಂದು ಅವರು ತಿಳಿಸಿದ್ದಾರೆ.

ಗುರುವಾರ ಬೆಳಗ್ಗೆ ೧೦:೩೦ಕ್ಕೆ ಕೊನೆಯ ವಿಧಿಯನ್ನು ಪೂರೈಸಲಾಗುವುದು ಎಂದು ಅವರು ತಿಳಿಸಿದ್ದಾರೆ. ಕುಟುಂಬದ ಮನವಿ ಮೇರೆಗೆ ಕಲಾಂ ಅವರ ಅಂತಿಮ ವಿಧಿಗೆ ಜಯಲಲಿತಾ ಸರ್ಕಾರ ಜಾಗ ನೀಡಿದೆ ಎನ್ನಲಾಗಿದೆ.

SCROLL FOR NEXT