ಪ್ರಧಾನ ಸುದ್ದಿ

40 ವರ್ಷಗಳಲ್ಲೇ ಭೀಕರ ದುರಂತ; ವಿಮಾನದ ಬ್ಲಾಕ್ ಬಾಕ್ಸ್ ಪತ್ತೆ

Srinivasamurthy VN

ಪ್ಯಾರಿಸ್: 148 ಮಂದಿಯನ್ನು ಆಪೋಷನ ತೆಗೆದುಕೊಂಡ ಜರ್ಮನಿಯ ವಿಮಾನ ಪತನಗೊಂಡದ್ದು ಫ್ರಾನ್ಸ್ ರಾಜಧಾನಿ ಪ್ಯಾರಿಸ್‍ನಿಂದ 700 ಕಿಮೀ ದೂರದಲ್ಲಿ. ಆಲ್ಫ್ ಪರ್ವತ ಶ್ರೇಣಿಯ ಜನಪ್ರಿಯ ರೆಸಾರ್ಟ್ ಸಮೀಪದ ಪತನವಾಗಿದೆ. ಘಟನೆ ಗೊತ್ತಾದದ್ದು ಸ್ಥಳೀಯರಿಗೆ. ಆರಂಭದಲ್ಲಿ ಬಳಿಯ ಉಂಡೆಯಂತೆ ಬೀಳುತ್ತಿದ್ದ ವಿಮಾನವನ್ನು ನೋಡಿ ಹಿಮಪಾತವಾಗುತ್ತಿದೆ ಎಂದು ಭಾವಿಸಿದರಂತೆ. ಬಳಿಕ ಪರಿಸ್ಥಿತಿಯ ಅರಿವಾಯಿತು ಎಂದು ಮಾಧ್ಯಮಗಳಿಗೆ ತಿಳಿಸಿದ್ದಾರೆ.

ಹಳೆಯ ವಿಮಾನ

ಪತನಗೊಂಡ ವಿಮಾನ ಜರ್ಮನಿ ವಿಮಾನಯಾನ ಸಂಸ್ಥೆ ಲುಫ್ತಾನ್ಸಾಕ್ಕೆ ಸೇರಿದೆ. ಈ ಸಂಸ್ಥೆ ಜರ್ಮನ್‍ವಿಂಗ್ಸ್ ಎಂಬ ಅಗ್ಗದ ದರದ ವಿಮಾನ (ಬಜೆಟ್ ಏರ್‍ಲೈನ್ಸ್) ಸಂಸ್ಥೆಗೆ ಸೇರಿದ್ದಾಗಿದೆ. ಅದನ್ನು ಕಳೆದ 25 ವರ್ಷ ಗಳಿಂದ ಬಳಕೆ ಮಾಡಲಾಗುತ್ತಿತ್ತು. 1991ರಲ್ಲಿ ಪತನಕ್ಕೆ ಒಳಗಾದ ವಿಮಾನವನ್ನು ಲುಫ್ತಾನ್ಸಾಕ್ಕೆ ನೀಡಲಾಗಿತ್ತು.

ತಾಂತ್ರಿಕವಾಗಿ ಫಿಟ್
ಏರ್ ಬಸ್‍ನ ಏ320 ವರ್ಗಕ್ಕೆ ಸೇರಿದ ಈ ವಿಮಾನ ಹಳೆಯದಾಗಿದ್ದರೂ ತಾಂತ್ರಿಕವಾಗಿ ಉತ್ತಮವಾಗಿತ್ತು. ಬೋಯಿಂಗ್ ತಂತ್ರಜ್ಞರು ಹೇಳುವ ಪ್ರಕಾರ ಟೇಕ್ ಆಗುವ ವೇಳೆ ಈ ಸರಣಿಯ ವಿಮಾನಗಳಿಗೆ ಶೇ.0.14 ರಷ್ಟು ಅಪಘಾತ ಮಾತ್ರ ದಾಖಲಾಗಿದೆ.

ಯಾವ ರಾಷ್ಟ್ರದವರು?
ದುರಂತದಲ್ಲಿ ಅಸುನೀಗಿದವರೆಲ್ಲ ಜರ್ಮನಿ, ಸ್ಪೇನ್, ಟರ್ಕಿಗೆ ಸೇರಿದವ ರಾಗಿದ್ದಾರೆ. ಇದೇ ವೇಳೆ  ಫ್ರಾನ್ಸ್ ಗೆ ಜರ್ಮನಿ ಅಧ್ಯಕ್ಷರು ಪ್ಯಾರಿಸ್‍ಗೆ ಭೇಟಿ ನೀಡಲಿದ್ದಾರೆ.

ಪ್ರಧಾನಿ ಮೋದಿ ಶೋಕ
ಅಮೆರಿಕ ಅಧ್ಯಕ್ಷ ಬರಾಕ್ ಒಬಾಮ, ಪ್ರಧಾನಿ ನರೇಂದ್ರ ಮೋದಿ ಘಟನೆ ಬಗ್ಗೆ ಶೋಕ ವ್ಯಕ್ತಪಡಿಸಿದ್ದಾರೆ. ಈ ಬಗ್ಗೆ ಟ್ವೀಟ್ ಮಾಡಿರುವ ಪ್ರಧಾನಿ ಮೋದಿ ವಿಮಾನ ಪತನವಾಗಿ 150 ಮಂದಿ ಸಾವಿಗೀಡಾದದ್ದು ದುರಂತ ಎಂದು ಬರೆದುಕೊಂಡಿದ್ದಾರೆ.

ಬ್ಲ್ಯಾಕ್ ಬಾಕ್ಸ್ ಪತ್ತೆ
ಪತನಕ್ಕೆ ಒಳಗಾದ ವಿಮಾನದ ಬ್ಲ್ಯಾಕ್ ಬಾಕ್ಸ್ ಪತ್ತೆಯಾಗಿದ್ದು. ದುರಂತಕ್ಕೆ ಕಾರಣ ತಿಳಿಯಲು ಇದು ಸಹಾಯಕವಾಗಲಿದೆ. ಇನ್ನು ಮೂಲಗಳ ಪ್ರಕಾರ ವಿಮಾನ ನಿಯಂತ್ರಣ ಕಳೆದುಕೊಳ್ಳತ್ತಲೇ ಪೈಲಟ್ ಸಹಾಯಕ್ಕಾಗಿ ಕರೆ ಮಾಡಿದ್ದ ವಿಚಾರ ಬಹಿರಂಗವಾಗಿದೆ. 38 ಸಾವಿರ ಅಡಿ ಎತ್ತರದಲ್ಲಿ ವಿಮಾನ ಏಕಾಏಕಿ 5 ಸಾವಿರ ಅಡಿಗಳಿಗೆ ಕುಸಿದಿತ್ತು. ದುರಂತ ಸಂಭವಿಸುವ ಕೊನೆಯ ಹಂತದಲ್ಲಿ 31 ಸಾವಿರ ಅಡಿ ಎತ್ತರದಲ್ಲಿ ಹಾರಾಟ ನಡೆಸುತ್ತಿತ್ತು.

SCROLL FOR NEXT