ಪ್ರಧಾನ ಸುದ್ದಿ

ಸರ್ಕಾರವನ್ನು ಸಮರ್ಥಿಸಿಕೊಂಡ ನಕ್ವಿ; ರಾಜಕೀಯ ಮತ್ತು ಸಾಹಿತ್ಯ ಬೆಸುಗೆ ಸರಿಯಲ್ಲ

Guruprasad Narayana

ನವದೆಹಲಿ: ದೇಶದಲ್ಲಿ ಹೆಚ್ಚುತ್ತಿರುವ ಅಸಹನೆಯನ್ನು ವಿರೋಧಿಸಿ ಹಲವಾರು ಸಾಹಿತಿಗಳು ಸಾಹಿತ್ಯ ಅಕಾಡೆಮಿ ಪ್ರಶಸ್ತಿ ಹಿಂದಿರುಗಿಸುತ್ತಿರುವ ಹಿನ್ನಲೆಯಲ್ಲಿ, ಅದಕ್ಕೆ ಕಾರಣವಾಗಿ ಸರ್ಕಾರದ ಮೇಲೆ ಆಪಾದನೆ ಮಾಡದಂತೆ ಅಲ್ಪಸಂಖ್ಯಾತ ವ್ಯವಹಾರಗಳ ಸಚಿವ ಮುಖ್ತಾರ್ ಅಬ್ಬಾಸ್ ನಕ್ವಿ ಮಂಗಳವಾರ ತಿಳಿಸಿದ್ದು, ರಾಜಕೀಯ ಮತ್ತು ಸಾಹಿತ್ಯ ಬೆಸೆಯುವುದು ಸರಿಯಲ್ಲ ಎಂದಿದ್ದಾರೆ.

"ನಾವು ನಮ್ಮ ಸಾಹಿತಿಗಳನ್ನು ಗೌರವಿಸುತ್ತೇವೆ. ಅವರೇ ದೇಶಕ್ಕೆ ಗೌರವ ಮತ್ತು ಪ್ರಶಸ್ತಿಗಳನ್ನು ತಂದುಕೊಂಡುವುದು ಮತ್ತು ಅವರ ಆತಂಕಕ್ಕೂ ನಮ್ಮ ಬೆಂಬಲವಿದೆ ಆದರೆ ಏನಾದರು ದುರ್ಘಟನೆ ಘಟಿಸಿದಾಗ ಸರ್ಕಾರವನ್ನು ದೂಷಿಸುವುದು ದುರದೃಷ್ಟಕರ" ಎಂದು ನಕ್ವಿ ಹೇಳಿದ್ದಾರೆ.

"ಸಾಹಿತ್ಯ ಮತ್ತು ರಾಜಕೀಯನ್ನು ಬೇರ್ಪಡಿಸುವುದು ಮುಖ್ಯ, ಮತ್ತದು ಅವರಿಗಷ್ಟೇ ಅಲ್ಲ ದೇಶಕ್ಕೂ ಒಳ್ಳೆಯದು. ಇವೆರಡೂ ಬೆಸೆದರೆ ಅವರಿಗಿರುವ ಗೌರವಕ್ಕೆ ಕುಂದು ಬರುತ್ತದೆ" ಎಂದಿದ್ದಾರೆ.

ಪ್ರತಿಭಟಿಸುತ್ತಿರುವ ಸಾಹಿತಿಗಳಿಗೆ ಸಂದೇಶ ನೀಡಿರುವ ನಕ್ವಿ, ಭ್ರಾತೃತ್ವ, ಸಹಕಾರ ಮತ್ತು ಏಕತೆಯಷ್ಟೇ ಕೋಮು ಹಿಂಸೆಯ ವಿರುದ್ಧ ಹೋರಾಡಲು ಇರುವ ಅಸ್ತ್ರಗಳು ಎಂದಿದ್ದಾರೆ.

ಉದಯ್ ಪ್ರಕಾಶ್, ನಯನತಾರಾ ಸೈಗಲ್, ಅಶೋಕ್ ವಾಜಪೇಯಿ, ಸಾರಾ ಜೋಸೆಫ್, ಕುಂ ವೀರಭದ್ರಪ್ಪ, ರಹಮತ್ ತರಿಕೆರೆ, ಜಿ ಎನ್ ರಂಗನಾಥರಾವ್ ಮುಂತಾದ ಹಿರಿಯ ಸಾಹಿತಿಗಳು ಎಂ ಎಂ ಕಲ್ಬುರ್ಗಿ ಹತ್ಯೆ, ದಾದ್ರಿಯಲ್ಲಿ ನಡೆದ ಕೋಮು ಹಿಂಸಾಚಾರ, ಇವುಗಳಿಗೆ ಕೇಂದ್ರ ಸರ್ಕಾರ ತೋರಿರುವ ದಿವ್ಯ ಮೌನ ವಿರೋಧಿಸಿ ಸಾಹಿತ್ಯ ಅಕಾಡೆಮಿ ಪ್ರಶಸ್ತಿಯನ್ನು ಹಿಂದಿರುಗಿಸಿದ್ದಾರೆ.

SCROLL FOR NEXT