ಸ್ವಚ್ಛ ಭಾರತ ಅಭಿಯಾನದಲ್ಲಿ ಪ್ರಧಾನಿ ನರೇಂದ್ರ ಮೋದಿ ( ಕೃಪೆ : ಎಎಫ್ ಪಿ ಸಂಗ್ರಹ ಚಿತ್ರ) 
ಪ್ರಧಾನ ಸುದ್ದಿ

ಅಭಿಯಾನಕ್ಕೆ ಒಂದು ವರ್ಷ, ಭಾರತ ಎಷ್ಟು ಸ್ವಚ್ಛವಾಯಿತು?

ಪಂಚಾಯತ್, ಮುನಿಸಿಪಾಲಿಟಿಗಳಲ್ಲಿನ ಶೌಚಾಲಯ ನಿರ್ಮಾಣ ಯೋಜನೆಗೆ ಸರಿಯಾಗಿ ನಿಧಿ ಇಲ್ಲದೇ ಇರುವುದು ಕೂಡಾ ಈ ಯೋಜನೆ ಕುಂಠಿತಗೊಳ್ಳಲು....

ಸರಿಯಾಗಿ ಒಂದು ವರುಷದ ಹಿಂದೆ ಪ್ರಧಾನಿ ನರೇಂದ್ರ ಮೋದಿಯವರು ಪೊರಕೆ  ಹಿಡಿದು ಸ್ವಚ್ಛ ಭಾರತ ಅಭಿಯಾನಕ್ಕೆ ಚಾಲನೆ ನೀಡಿದ್ದರು. 2019ರ ವೇಳೆಗೆ ಭಾರತ ಕಸ ವಿಮುಕ್ತವಾಗಬೇಕು ಎಂಬ ಉದ್ದೇಶದಿಂದಲೇ ಪ್ರಧಾನಿ ಈ ಅಭಿಯಾನವನ್ನು ಆರಂಭಿಸಿದ್ದರು.
ಭಾರತದಲ್ಲಿ ಶೇ 60 ರಷ್ಟು ಜನ ಬಯಲಿನಲ್ಲಿ ಮಲ ವಿಸರ್ಜನೆ ಮಾಡುತ್ತಿದ್ದಾರೆ. ತೆರೆದ ಬಯಲಿನಲ್ಲಿ ಮಲ ಮೂತ್ರ ವಿಸರ್ಜನೆ ಮಾಡುವುದನ್ನು ನಿಲ್ಲಿಸಿ, ಮನೆಯಲ್ಲಿಯೇ ಶೌಚಾಲಯ ನಿರ್ಮಿಸಿ ಎಂಬ ಘೋಷಣೆಯೊಂದಿಗೆ ಸರ್ಕಾರ ಕಾರ್ಯ ಪ್ರವೃತ್ತವೂ ಆಯಿತು. ಆದರೆ ಈ ಅಭಿಯಾನ ಆರಂಭ ಮಾಡಿ ಒಂದು ವರ್ಷವಾದರೂ ಇದರಲ್ಲಿ ಹೆಚ್ಚಿನ ಪ್ರಗತಿಯೇನೂ ಕಂಡು ಬಂದಿಲ್ಲ ಎಂದು ವರದಿಗಳು ಹೇಳುತ್ತಿವೆ. ಪಂಚಾಯತ್, ಮುನಿಸಿಪಾಲಿಟಿಗಳಲ್ಲಿನ ಶೌಚಾಲಯ ನಿರ್ಮಾಣ ಯೋಜನೆಗೆ ಸರಿಯಾಗಿ ನಿಧಿ ಇಲ್ಲದೇ ಇರುವುದು ಕೂಡಾ ಈ ಯೋಜನೆ ಕುಂಠಿತಗೊಳ್ಳಲು ಕಾರಣ. ಶೌಚಾಲಯ ನಿರ್ಮಾಣಕ್ಕೆ ಸರ್ಕಾರ ಮುತುವರ್ಜಿ ತೋರಿಸಿದ್ದರೂ ಖಾಸಗಿ ವಲಯದಿಂದ ನೀರಸ ಪ್ರತಿಕ್ರಿಯೆ ವ್ಯಕ್ತವಾಗಿತ್ತು.
ಭಾರತದಲ್ಲಿ ಒಟ್ಟು 13.04 ಕೋಟಿ ಶೌಚಾಲಯಗಳ ಅಗತ್ಯವಿದೆ, ಅದರಲ್ಲಿ 12 ಕೋಟಿ ಶೌಚಾಲಯಗಳನ್ನು ಗ್ರಾಮೀಣ ಪ್ರದೇಶದಲ್ಲಿ ನಿರ್ಮಿಸಬೇಕಾಗಿದೆ. 2011ರ ಜನಗಣತಿಯ ಪ್ರಕಾರ  ಶೇ. 67 ರಷ್ಟು ಜನರು ತೆರೆದ ಬಯಲುಗಳಲ್ಲಿ ಮಲ ವಿಸರ್ಜನೆ ಮಾಡುತ್ತಿದ್ದಾರೆ.  ಕುಡಿಯುವ ನೀರು ಸರಬರಾಜು ಮತ್ತು ಒಳಚರಂಡಿ ಸಚಿವಾಲಯದ ಪ್ರಕಾರ,  ಇಲ್ಲಿಯವರೆಗೆ 95.23 ಲಕ್ಷ ಶೌಚಾಲಯಗಳನ್ನು ಗ್ರಾಮೀಣ ಪ್ರದೇಶದಲ್ಲಿ ನಿರ್ಮಿಸಲಾಗಿದೆ.  ಅಂದರೆ ಸ್ವಚ್ಛ ಭಾರತ ಅಭಿಯಾನ ಆರಂಭವಾಗುವ ಮುನ್ನ 2014 ಏಪ್ರಿಲ್  ಮತ್ತು  ಅಕ್ಟೋಬರ್ ತಿಂಗಳ ನಡುವೆ ಒಟ್ಟು 43. 81 ಲಕ್ಷ ಶೌಚಾಲಯಗಳನ್ನು ನಿರ್ಮಲ್ ಭಾರತ್ ಅಭಿಯಾನದಡಿಯಲ್ಲಿ ನಿರ್ಮಿಸಲಾಗಿದೆ.
ಗ್ರಾಮೀಣ ಪ್ರದೇಶದಲ್ಲಿರುವ ಜನರು ಯಾಕಾಗಿ ಶೌಚಾಲಯಗಳನ್ನು ಬಳಸಲು ಹಿಂದೇಟು ಹಾಕುತ್ತಾರೆ ಎಂಬುದಕ್ಕೆ ಸ್ಪಷ್ಟ ಕಾರಣಗಳೂ ಸಿಗುತ್ತಿಲ್ಲ. ದೇಶದಲ್ಲಿ ಬಯಲನ್ನೇ ವಿಸರ್ಜನಾ  ಸ್ಥಳಗಳಾಗಿ ಬಳಸುವ ಶೇ.90 ಜನರಿಗೂ ಶೌಚಾಲಯವೆಂಬುದು ಅಸಹ್ಯ ಎಂಬ ಭಾವನೆಯಿದೆ. ಕೆಲವೊಂದು ಕಡೆ ಗುಂಡಿ ತೋಡಿ ಅದರಲ್ಲಿ ಮಲ ವಿಸರ್ಜನೆ ಮಾಡಿ ಅದನ್ನು ಇನ್ನೊಬ್ಬರಿಂದ ಸ್ವಚ್ಛಗೊಳಿಸುವಂತೆ ಮಾಡುವ ಪದ್ಧತಿಯೂ ಜಾರಿಯಲ್ಲಿದೆ. ಆದ್ದರಿಂದ ಶೌಚಾಲಯ ಎಷ್ಟು ಮುಖ್ಯ ಎನ್ನುವುದನ್ನು ಜನರಿಗೆ ಮೊದಲು ಮನವರಿಕೆ ಮಾಡಿಕೊಡಬೇಕಿದೆ ಎಂದು  ರಿಸರ್ಚ್ ಇನ್ಸಿಟ್ಯೂಚ್ ಫಾರ್ ಕಂಪಾಸಿನೇಟ್ ಇಕಾನಾಮಿಕ್ಸ್  ಎಂಡಿ ಸಂಗೀತಾ ವ್ಯಾಸ್ ಹೇಳಿದ್ದಾರೆ.
ನಗರ ಪ್ರದೇಶಗಳಲ್ಲಿ ಶೇ. 13 ರಷ್ಟು ಜನ ಬಯಲನ್ನೇ ಶೌಚಾಲಯವನ್ನಾಗಿ ಮಾಡಿಕೊಂಡಿದ್ದಾರೆ. ಇನ್ನುಳಿದಂತೆ 1.04 ಕೋಟಿ ಶೌಚಾಲಯಗಳ ನಿರ್ಮಾಣವಾಗಬೇಕಿದೆ. ಸೆಪ್ಟೆಂಬರ್ 4 ನೇ ತಾರೀಖಿನವರೆಗೆ 4.64 ಲಕ್ಷ ಶೌಚಾಲಯಗಳನ್ನು ನಿರ್ಮಿಸಲಾಗಿದೆ. ಆದಾಗ್ಯೂ  ಮಾರ್ಚ್ 2016ರ ವರೆಗೆ 2.5 ಮಿಲಿಯನ್ ಶೌಚಾಲಯಗಳನ್ನು ನಿರ್ಮಿಸುವ ಗುರಿಯನ್ನು ಸರ್ಕಾರ ಹೊಂದಿದೆ.
ಅಂದಹಾಗೆ ಸ್ವಚ್ಛ ಭಾರತ  ಅಭಿಯಾನ ಮಂದಗತಿಯಲ್ಲಿ ಸಾಗಲು ಸರ್ಕಾರ ಕಾರಣವಲ್ಲದೇ ಇದ್ದರೂ ಸ್ವಚ್ಛ ಭಾರತ್ ಕೋಶ್ ನಿಧಿಯ ಸಮಸ್ಯೆ ಇಲ್ಲಿ ಕಾಡುತ್ತಿದೆ.ನಗರ ಪ್ರದೇಶಗಳಲ್ಲಿಯೂ ಯೋಜನೆ ಕಾರ್ಯಗತಗೊಳಿಸಲು ಸರಿಯಾದ ಫಂಡ್ ಇಲ್ಲದೇ ಇರುವುದು ಕೂಡಾ ಹಿನ್ನಡೆಗೆ ಕಾರಣವಾಗಿದೆ. 

Follow KannadaPrabha channel on WhatsApp

  

KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ

 

Subscribe to KannadaPrabha YouTube Channel and watch Videos

'ದೊಡ್ಡ ಆಘಾತ': ಅಮೆರಿಕದಲ್ಲಿ ಶೇ.50 ಸುಂಕ ಜಾರಿ, 48.2 ಬಿಲಿಯನ್ ಡಾಲರ್ ಮೌಲ್ಯದ ಭಾರತದ ರಫ್ತಿಗೆ ಹೊಡೆತ

ಭಾರತದ ಮೇಲೆ ಸುಂಕಾಸ್ತ್ರ ಜಾರಿ: ಮತ್ತೆ ಇಂಡೋ-ಪಾಕ್ ಯುದ್ಧ ನಿಲ್ಲಿಸಿದ್ದು ನಾನೇ ಎಂದು ಪುನರುಚ್ಛರಿಸಿದ ಡೊನಾಲ್ಡ್ ಟ್ರಂಪ್

ದೇಶಾದ್ಯಂತ ಗಣೇಶ ಚತುರ್ಥಿ ಸಂಭ್ರಮ: ದೇವಾಲಯಗಳಲ್ಲಿ ವಿಶೇಷ ಪೂಜೆ, ರಾಷ್ಟ್ರಪತಿ, ಪ್ರಧಾನಿ, ಮುಖ್ಯಮಂತ್ರಿಗಳಿಂದ ಶುಭಾಶಯ

ಜಮ್ಮುವಿನಲ್ಲಿ ಭೀಕರ ಮಳೆಯಿಂದ ಭಾರೀ ಅನಾಹುತ ಸೃಷ್ಟಿ: ವೈಷ್ಣೋದೇವಿ ಮಾರ್ಗದಲ್ಲಿ ಭೂಕುಸಿತ, ಕನಿಷ್ಠ 30 ಮಂದಿ ಸಾವು

ಬೂಕರ್ ಪ್ರಶಸ್ತಿ ಮಹತ್ವ ತಿಳಿದಿದ್ದರೆ ನನ್ನನ್ನು ಟೀಕಿಸುತ್ತಿರಲಿಲ್ಲ, ಸಾಹಿತ್ಯ ಸಮ್ಮೇಳನದ ವಿಡಿಯೋ ತಿರುಚಲಾಗಿದೆ: ಬಾನು ಮುಷ್ತಾಕ್

SCROLL FOR NEXT