ಪ್ರಧಾನ ಸುದ್ದಿ

ತಮಿಳುನಾಡಿನಲ್ಲಿ ಶೇಖರ್‌ ರೆಡ್ಡಿ ಸಹಾಯಕನ ಮನೆ ಐಟಿ ದಾಳಿ

Lingaraj Badiger
ಚೆನ್ನೈ: ಅಕ್ರಮ ಹಣ ವರ್ಗಾವಣೆ ಪ್ರಕರಣಕ್ಕೆ ಸಂಬಂಧಿಸಿದಂತೆ ಜೈಲು ಪಾಲಾಗಿರುವ ತಿರುಮಲ ತಿರುಪತಿ ದೇವಸ್ಥಾನ ಸಮಿತಿ ಟ್ರಸ್ಟಿಯಲ್ಲೊಬ್ಬರಾದ ಚೆನ್ನೈ ಮೂಲದ ಉದ್ಯಮಿ ಜೆ. ಶೇಖರ್‌ ರೆಡ್ಡಿ ಸಹಾಯಕ ಹಾಗೂ ಖ್ವಾರಿ ಗುತ್ತಿಗೆದಾರ ರತ್ನಂ ಅವರ ಮನೆ ಮೇಲೆ ಶನಿವಾರ ಆದಾಯ ತೆರಿಗೆ ಇಲಾಖೆ ಅಧಿಕಾರಿಗಳು ದಾಳಿ ನಡೆಸಿದ್ದಾರೆ.
ರತ್ನಂ ಸಹ ಅಕ್ರಮ ಹಣ ವಿನಿಯಮ ಮಾಡಿದ ಆರೋಪದ ಮೇಲೆ ಎರಡು ದಿನಗಳ ಹಿಂದೆ ಬಂಧನಕ್ಕೊಳಗಾಗಿದ್ದು, ಇಂದು ಬೆಳಗ್ಗೆ ಪೆರಂಬಲೂರ್ ನ ಆದಾಯ ತೆರಿಗೆ ಅಧಿಕಾರಿಗಳು ಅವರ ಮನೆ ಮೇಲೆ ದಾಳಿ ಮಾಡಿದ್ದಾರೆ.
ಕಳೆದ ವಾರ ರೆಡ್ಡಿ ಹಾಗೂ ಇತರೆ ಇಬ್ಬರ ಮನೆ, ಕಚೇರಿ ಮೇಲೆ ದಾಳಿ ನಡೆಸಿದ್ದ ಆದಾಯ ತೆರಿಗೆ ಅಧಿಕಾರಿಗಳು 170 ಕೋಟಿ ರು ನಗದು ಹಾಗೂ 130 ಕೆಜಿ ಚಿನ್ನ ಮತ್ತು ಆಭರಣವನ್ನು ಜಪ್ತಿ ಮಾಡಿದ್ದರು. ಇದೇ ಪ್ರಕರಣ ಸಂಬಂಧ ಸಿಬಿಐ ಡಿಸೆಂಬರ್ 22ರಂದು ರತ್ನಂ ಹಾಗೂ ಮತ್ತೊಂದು ಖ್ವಾರಿ ಗುತ್ತಿಗೆದಾರ ರಾಮಚಂದ್ರನ್ ಅವರನ್ನು ಸಹ ಬಂಧಿಸಿದೆ.
ಡಿಸೆಂಬರ್ 21ರಂದು ಶೇಖರ್ ರೆಡ್ಡಿ, ಶ್ರೀನಿವಾಸ್ ರೆಡ್ಡಿ ಹಾಗೂ ಪ್ರೇಮ್ ಅವರನ್ನು ಬಂಧಿಸಿದ್ದು, ಸದ್ಯ ಆರೋಪಿಗಳು ನ್ಯಾಯಾಂಗ ಬಂಧನದಲ್ಲಿದ್ದಾರೆ.
SCROLL FOR NEXT