ಜಮ್ಮು: ಜಮ್ಮು ಮತ್ತು ಕಾಶ್ಮೀರದ ಲಡಾಕ್ ಪ್ರದೇಶದ, ಸಿಯಾಚೆನ್ ನಲ್ಲಿ ಉಂಟಾದ ಹಿಮಪಾತದಿಂದ ಒಬ್ಬ ಅಧಿಕಾರಿಯೂ ಸೇರಿದಂತೆ ೧೦ ಜನ ಯೋಧರು ಬುಧವಾರ ಕಾಣೆಯಾಗಿದ್ದಾರೆ.
"ಬುಧವಾರ ಬೆಳಗ್ಗೆ ಸಿಯಾಚಿನ್ ಹಿಮಪಾತದಿಂದ ಜೆಸಿಒ ಸೇರಿದಂತೆ ೧೦ ಜನ ಯೋಧರು ಕಾಣೆಯಾಗಿದ್ದಾರೆ" ಎಂದು ಸೇನೆಯ ವಕ್ತಾರ ಎಸ್ ಡಿ ಗೋಸ್ವಾಮಿ ಹೇಳಿದ್ದಾರೆ.
"ಹಿಮಪಾತದಿಂದ ಕಾಣೆಯಾದವರನ್ನು ಹುಡುಕಳು ಸೇನ ಮತ್ತು ವಾಯುಪಡೆ ಭಾರಿ ರಕ್ಷಣಾ ಕಾರ್ಯಾಚರಣೆಯನ್ನು ನಡೆಸುತ್ತಿದೆ" ಎಂದು ಕೂಡ ಅವರು ತಿಳಿಸಿದ್ದಾರೆ.
ಸಿಯಾಚಿನ್ ಹಿಮಪರ್ವತ ವಿಶ್ವದ ಅತಿ ಎತ್ತರದ ಯುದ್ಧ ಪ್ರದೇಶವಾಗಿದ್ದು, ಭಾರತೀಯ ಸೇನೆಯ ಹಲವು ಯೋಧರು ಈ ವೈಪರೀತ್ಯ ಹವಾಮಾನದಲ್ಲಿ ದೇಶದ ರಕ್ಷಣೆಗಾಗಿ ಕಾಯುತ್ತಾರೆ.
ಈ ಪ್ರದೇಶದಲ್ಲಿ ಚಳಿಗಾಲದಲ್ಲಿ ಉಷ್ಣತೆ -೫೦ ಡಿಗ್ರಿವರೆಗೂ ಇಳಿಯುತ್ತದೆ.