ಸಾಂದರ್ಭಿಕ ಚಿತ್ರ 
ಪ್ರಧಾನ ಸುದ್ದಿ

ಚಿರತೆ ಭೀತಿ: ಬೆಂಗಳೂರಿನ 134 ಶಾಲೆಗಳಿಗೆ ರಜೆ ಘೋಷಣೆ

ಬೆಂಗಳೂರಿನ ಹೊರವಲಯದ ವರ್ತೂರಿನ ವಿಬ್ ಗಯಾರ್ ಶಾಲೆ ಬಳಿ ಮತ್ತೆ ಎರಡು ಚಿರತೆ ಕಾಣಿಸಿಕೊಂಡು ಆತಂಕ ಸೃಷ್ಟಿಯಾಗಿರುವ...

ಬೆಂಗಳೂರು: ಬೆಂಗಳೂರಿನ ಹೊರವಲಯದ ವರ್ತೂರಿನ ವಿಬ್ ಗಯಾರ್ ಶಾಲೆ ಬಳಿ ಮತ್ತೆ ಎರಡು ಚಿರತೆ ಕಾಣಿಸಿಕೊಂಡು ಆತಂಕ ಸೃಷ್ಟಿಯಾಗಿರುವ ಹಿನ್ನೆಲೆಯಲ್ಲಿ ಪೂರ್ವ ತಾಲ್ಲೂಕಿನ ಸರ್ಕಾರಿ ಖಾಸಗಿ ಸೇರಿದಂತೆ ಒಟ್ಟು 134 ಶಾಲೆಗಳಿಗೆ ರಜೆ ಘೋಷಿಸಲಾಗಿದೆ.
ಸಾರ್ವಜನಿಕ ಶಿಕ್ಷಣ ಇಲಾಖೆ ಗುರುವಾರ ಒಂದು ದಿನ ರಜೆ ಘೋಷಿಸಿದೆ. ಇನ್ನು ಸುತ್ತುಮುತ್ತಲಿನ ಪ್ರದೇಶದಲ್ಲಿ ಆತಂಕ ಸೃಷ್ಟಿಯಾಗಿದ್ದು, ಸ್ಥಳೀಯರು ಮನೆ ಹೊರಗಡೆ ಬರಲು, ಒಬ್ಬಂಟಿಯಾಗಿ ಓಡಾಡಲು ಭಯಭೀತರಾಗಿದ್ದಾರೆ. 
ಮಂಗಳವಾರ ರಾತ್ರಿ 8 ಗಂಟೆ ಸುಮಾರಿಗೆ ವಿಭ್ ಗಯಾರ್ ಶಾಲೆ ಬಳಿ ಇರುವ ಸ್ಥಳೀಯರು ಎರಡು ಚಿರತೆಗಳನ್ನು ಕಂಡು ಕಿರುಚಾಡಿದ್ದು, ಪೊಲೀಸರಿಗೆ ದೂರು ನೀಡಿದ್ದಾರೆ. 
ಇನ್ನು ಕಾರ್ಯಾಚರಣೆ ವೇಳೆ ಚಿರತೆಯ ಹೆಜ್ಜೆ ಗುರುತುಗಳು ಪತ್ತೆಯಾಗಿದ್ದು, ಹೆಚ್ಚು ಮರ ಹಾಗೂ ಪೊದೆಗಳಿರುವ ಕಾರಣ ಚಿರತೆ ಪತ್ತೆ ಕಾರ್ಯ ವಿಳಂಬವಾಗಲಿದೆ. ಹೀಗಾಗಿ ಬೋನು ಇಟ್ಟು ಅದರಲ್ಲಿ ನಾಯಿ ಕಟ್ಟಲಾಗುವುದು ಎಂದು ಅಧಿಕಾರಿಗಳು ತಿಳಿಸಿದ್ದಾರೆ.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

ಸತ್ಯ ನಿಕೇತನ ಪಿಜಿ ಕುಸಿತದ ಬಗ್ಗೆ ಉನ್ನತ ಮಟ್ಟದ ತನಿಖೆಗೆ ದೆಹಲಿ ಹೈಕೋರ್ಟ್ ಆದೇಶ; ದುರಂತಕ್ಕೆ ಮಾಲೀಕನಷ್ಟೇ ಅಲ್ಲ MCD, DU ಸಹ ಹೊಣೆ!

Varanasi: ತೆಲುಗು ರಾಜ್ಯಗಳಲ್ಲಿ ಬರೋಬ್ಬರಿ 320 ಕೋಟಿಗೆ ಹಕ್ಕುಗಳ ಮಾರಾಟ? ರಾಜಮೌಳಿಗೆ ಹೊಸ ತಲೆಬಿಸಿ!

ಮೊದಲ ಬಾರಿ ಬುಕ್‌ಮೈಶೋನಲ್ಲಿ ಮೋದಿ ಕಾರ್ಯಕ್ರಮಕ್ಕೆ ಬುಕಿಂಗ್; ಒಂದೇ ಗಂಟೆಯಲ್ಲಿ ಎಲ್ಲ ಸೀಟ್ ಭರ್ತಿ! ವೇಟಿಂಗ್ ಎಷ್ಟು ಗೊತ್ತಾ?

SC/ST ಪ್ರಕರಣ; ಹಿಂದುತ್ವವಾದಿ ಸ್ವತಂತ್ರ ಭಾರದ್ವಾಜ್‌ಗೆ ಹೈಕೋರ್ಟ್ ಶಾಕ್: 14 ದಿನ ನ್ಯಾಯಾಂಗ ಬಂಧನ!

72 ವರ್ಷಗಳ ಸಂಪ್ರದಾಯಕ್ಕೆ ಬ್ರೇಕ್: ಇದೇ ಮೊದಲ ಬಾರಿಗೆ ದೆಹಲಿ ಬದಲು ಗುಜರಾತ್‌ನಲ್ಲಿ ರಾಷ್ಟ್ರೀಯ ಚಲನಚಿತ್ರ ಪ್ರಶಸ್ತಿ ಪ್ರದಾನ!