ಹುತಾತ್ಮ ಲೆಫ್ಟಿನೆಂಟ್ ಕರ್ನಲ್ ಇ ಕೆ ನಿರಂಜನ್ ಶ್ರದ್ಧಾಂಜಲಿ ಸಭೆ 
ಪ್ರಧಾನ ಸುದ್ದಿ

ಪಠಾನ್ ಕೋಟ್ ಹುತಾತ್ಮ ನಿರಂಜನ್ ಅವಮಾನಿಸಿದ ಎಫ್ ಬಿ ಪ್ರತಿಕ್ರಿಯೆ; ವ್ಯಕ್ತಿಯ ಬಂಧನ

ಪಠಾನ್ ಕೋಟ್ ಭಯೋತ್ಪಾದನಾ ದಾಳಿಯಲ್ಲಿ ಹೋರಾಡಿ ಮಡಿದ ಹುತಾತ್ಮ ಲೆಫ್ಟಿನೆಂಟ್ ಕರ್ನಲ್ ಇ ಕೆ ನಿರಂಜನ್ ಅವರ ಬಗ್ಗೆ ಫೇಸ್ಬುಕ್ ನಲ್ಲಿ ಅವಮಾನಕಾರಿಯಾಗಿ ಪ್ರತಿಕ್ರಿಯಿಸಿದ್ದ

ಪಠಾನ್ ಕೋಟ್ ಭಯೋತ್ಪಾದನಾ ದಾಳಿಯಲ್ಲಿ ಹೋರಾಡಿ ಮಡಿದ ಹುತಾತ್ಮ ಲೆಫ್ಟಿನೆಂಟ್ ಕರ್ನಲ್ ಇ ಕೆ ನಿರಂಜನ್ ಅವರ ಬಗ್ಗೆ ಫೇಸ್ಬುಕ್ ನಲ್ಲಿ ಅವಮಾನಕಾರಿಯಾಗಿ ಪ್ರತಿಕ್ರಿಯಿಸಿದ್ದ ಕೇರಳದ ಮಲಪ್ಪುರಂನ ವ್ಯಕ್ತಿಯೊಬ್ಬನನ್ನು ದೇಶದ್ರೋಹದ ಆರೋಪದ ಮೇಲೆ ಬಂಧಿಸಲಾಗಿದೆ.

ಮಾಧ್ಯಮಂ ಪತ್ರಿಕೆಯ ಪತ್ರಿಕೋದ್ಯಮಿ ಎಂದು ಹೇಳಿಕೊಂಡಿದ್ದ ಅನ್ವರ್ "ಈಗ ಒಂದು ತೊಂದರೆ ಕಳೆಯಿತು. ಈಗ ಅವನ ಹೆಂಡತಿಗೆ ಹಣ ಮತ್ತು ಕೆಲಸ ದೊರೆಯಲಿದೆ. ನಮ್ಮಂತಹ ಸಾಮಾನ್ಯರಿಗೆ ಏನೂ ಸಿಗುವುದಿಲ್ಲ. ಕೊಳೆತು ನಾರುವ ಪ್ರಜಾಪ್ರಭುತ್ವಕ್ಕೆ ಧಿಕ್ಕಾರ" ಎಂದು ಅರ್ಥ ಬರುವಂತೆ ಮಲಯಾಳಂನಲ್ಲಿ ಬರೆದಿದ್ದ ಎಂದು ದೂರಲಾಗಿತ್ತು. ನಂತರ ಈ ಪ್ರತಿಕ್ರಿಯೆಯನ್ನು ತೆಗೆದಿದ್ದರು ಅದರ ಇಮೇಜ್ ರೂಪ ಫೇಸ್ಬುಕ್ ನಲ್ಲಿ ಓಡಾಡುತ್ತಿತ್ತು.

ಆದರೆ ಇದಕ್ಕೆ ಸ್ಪಷ್ಟೀಕರಣ ನೀಡಿದ ಮಾಧ್ಯಮಂ ಪತ್ರಿಕೆ, ಅಂತಹ ಯಾವ ವ್ಯಕ್ತಿಯೂ ನಮ್ಮ ಪತ್ರಿಕೆಯಲ್ಲಿ ಕೆಲಸ ಮಾಡುತ್ತಿಲ್ಲ, ಇದು ನಮ್ಮ ಗೌರವಕ್ಕೆ ಧಕ್ಕೆ ತರುತ್ತದೆ ಎಂದು ಪೊಲೀಸ್ ದೂರು ನೀಡಿದ್ದರು.

ಈ ದೂರಿನ ಹಿನ್ನಲೆಯಲ್ಲಿ ಮಲಪ್ಪುರಂನ ರೇಶನ್ ಅಂಗಡಿಯೊಂದರಲ್ಲಿ ಸಹಾಯಕನಾಗಿ ಕೆಲಸ ಮಾಡುವ ೨೪ ವರ್ಷದ ಅನ್ವರ್ ನನ್ನು ಪೊಲೀಸರು ದೇಶದ್ರೋಹ ಆರೋಪದ ಮೇಲೆ ಬಂಧಿಸಿದ್ದಾರೆ. ಈ ಆರೋಪ ಸಾಬೀತಾದರೆ ಬಂಧಿತ ವ್ಯಕ್ತಿ ಜೀವಾವಧಿ ಶಿಕ್ಷೆಗೆ ಗುರಿಯಾಗುವ ಸಾಧ್ಯತೆ ಇರುತ್ತದೆ.

Follow KannadaPrabha channel on WhatsApp

  

Download the KannadaPrabha News app to follow the latest news updates

  

Subscribe and Receive exclusive content and updates on your favorite topics

  

Subscribe to KannadaPrabha YouTube Channel and watch Videos

'ನಿಮ್ಮ ಭಾಷಣ ನಾಚಿಕೆಯಿಲ್ಲದೆ ಸಮರ್ಥನೆ ಮಾಡಿಕೊಂಡಂತೆ ಇತ್ತು': 1947ರ ಐನ್ ಸ್ಟೈನ್ ನೆಹರೂಗೆ ಬರೆದ ಪತ್ರ ಉಲ್ಲೇಖಿಸಿ Modi ಟೀಕಿಸಿದ ಕಾಂಗ್ರೆಸ್

ಶಿವಮೊಗ್ಗ: 10 ಕಿಲೋ ವ್ಯಾಟ್ FM ಟ್ರಾನ್ಸ್ಮಿಟರ್ ಕೇಂದ್ರ ಉದ್ಘಾಟನೆ! ಆಕಾಶವಾಣಿ, ದೂರದರ್ಶನ ಅಭಿವೃದ್ದಿಗೆ 2,500 ಕೋಟಿ ಹಣ ವೆಚ್ಚ- ಡಾ. ಎಲ್ ಮುರುಗನ್

'ಇಸ್ರೇಲ್‌ ಜೊತೆ ನಮ್ಮ ಸಂಬಂಧ 'ರಕ್ತ ಮತ್ತು ತ್ಯಾಗ'ದಲ್ಲಿ ಬರೆಯಲ್ಪಟ್ಟಿದೆ, ನಾನು ಹುಟ್ಟಿದ ವರ್ಷ ಭಾರತ ಇಸ್ರೇಲ್ ಗೆ ಮಾನ್ಯತೆ ನೀಡಿತು': ಪ್ರಧಾನಿ ಮೋದಿ-Video

ಅಮ್ಮಾ....ಐ ಲವ್ ಯೂ ಸೋ ಮಚ್: ಕುವೈತ್ ನಲ್ಲಿದ್ದ ತಾಯಿಗೆ ಕೊನೆಯ ಸಂದೇಶ ಕಳಿಸಿ ಯೂಟ್ಯೂಬರ್ ಆತ್ಮಹತ್ಯೆ

ಹಗರಣ ರಹಿತ ಹುದ್ದೆ ಭರ್ತಿಗೆ ಕ್ರಮ: ಯುವಕರು ಧೈರ್ಯವಾಗಿರಿ, ನಿಮ್ಮ ಸಮಸ್ಯೆ ಬಗೆಹರಿಸುತ್ತೇವೆ, ಸದ್ಯದಲ್ಲೇ ಸಂದೇಶ ನೀಡುತ್ತೇವೆ; ಡಿ ಕೆ ಶಿವಕುಮಾರ್

SCROLL FOR NEXT