(ಸಾಂದರ್ಭಿಕ ಚಿತ್ರ) 
ಪ್ರಧಾನ ಸುದ್ದಿ

ಫ್ರಾನ್ಸ್ ಕಚೇರಿಗೆ ಬೆದರಿಕೆ ಪತ್ರ ಕಳುಹಿಸಿದ್ದು ರಫೀಕ್!

ಫ್ರಾನ್ಸ್ ಅಧ್ಯಕ್ಷ ಒಲಾಂದ್ ಗಣರಾಜ್ಯೋತ್ಸವದಲ್ಲಿ ಅತಿಥಿಯಾಗಿ ಭಾಗವಹಿಸುವುದನ್ನು ವಿರೋಧಿಸಿ ಬೆಂಗಳೂರಿನಲ್ಲಿರುವ ಫ್ರಾನ್ಸ್ ರಾಯಭಾರ ಕಚೇರಿಗೆ ಬಂದಿದ್ದ ಬೆದರಿಕೆ ಪತ್ರದ ರಹಸ್ಯ ಇದೀಗ ಬಯಲಾಗಿದೆ. ಇತ್ತೀಚೆಗೆ ಬಂಧಿಸಲಾಗಿರುವ ಶಂಕಿತ ಉಗ್ರ ಜಾವೇದ್ ರಫೀಕ್...

ಬೆಂಗಳೂರು: ಫ್ರಾನ್ಸ್ ಅಧ್ಯಕ್ಷ ಒಲಾಂದ್ ಗಣರಾಜ್ಯೋತ್ಸವದಲ್ಲಿ ಅತಿಥಿಯಾಗಿ ಭಾಗವಹಿಸುವುದನ್ನು ವಿರೋಧಿಸಿ ಬೆಂಗಳೂರಿನಲ್ಲಿರುವ ಫ್ರಾನ್ಸ್ ರಾಯಭಾರ ಕಚೇರಿಗೆ ಬಂದಿದ್ದ ಬೆದರಿಕೆ ಪತ್ರದ ರಹಸ್ಯ ಇದೀಗ ಬಯಲಾಗಿದೆ. ಇತ್ತೀಚೆಗೆ ಬಂಧಿಸಲಾಗಿರುವ ಶಂಕಿತ ಉಗ್ರ ಜಾವೇದ್ ರಫೀಕ್ ನೇ ಈ ಬೆದರಿಕೆ ಪತ್ರ ಬರೆದಿರುವುದು ವಿಚಾರಣೆಯಲ್ಲಿ ಹೊರಬಿದ್ದಿದೆ.

ವಸಂತನಗರದಲ್ಲಿರುವ ಫ್ರಾನ್ಸ್ ರಾಯಭಾರಿ ಕಚೇರಿಗೆ ಬಂದ ಈ ಅನಾಮಧೇಯ ಬೆದರಿಕೆ ಪತ್ರ ಬೆಂಗಳೂರಿನಲ್ಲಿ ಆತಂಕದ ವಾತಾವರಣ ಸೃಷ್ಟಿಸಿತ್ತು. ಪತ್ರ ಬಂದ ಬೆನ್ನಲ್ಲೇ ಎನ್ ಐಎ ಅಧಿಕಾರಿಗಳು ಮಿಂಚಿನ ಕಾರ್ಯಾಚರಣೆ ಸಂಘಟಿಸಿ ಬೆಂಗಳೂರು ಸೇರಿದಂತೆ ರಾಜ್ಯದ ನಾನಾ ಕಡೆ ಆರು ಮಂದಿ ಶಂಕಿತ ಉಗ್ರರನ್ನು ಬಂಧಿಸಿದ್ದರು.

ಆರೋಪಿಗಳ ಬಂಧನದಿಂದ ಬೆಚ್ಚಿಬಿದ್ದಿದ್ದ ರಾಜ್ಯದ ಜನತೆಗೆ ಒಂದೇ ದಿನದ ಅಂತರದಲ್ಲಿ ತೆಲಂಗಾಣ ಎಟಿಎಸ್ ಅಧಿಕಾರಿಗಳು ಬೆಂಗಳೂರಿನಲ್ಲಿ ಶಂಕಿತ ಉಗ್ರ ರಫೀಕ್ ನನ್ನು ಮಡಿವಾಳದಲ್ಲಿ ಬಂಧಿಸಿ ಅಚ್ಚರಿ ಮೂಡಿಸಿದ್ದರು.

ಬಾಯ್ಬಿಟ್ಟ ಆರೋಪಿ
ಬೆಂಗಳೂರಿನಲ್ಲಿರುವ ಇಸ್ರೇಲ್ ವೀಸಾ ವಿಲೇವಾರಿ ಕಚೇರಿಗೆ ಕಳೆದ ನವೆಂಬರ್ 29ರ ರಾತ್ರಿ ಬೆಂಕಿ ಇಟ್ಟಿದ್ದು ನಾನೇ ಎಂದು ರಫೀಕ್ ಬಾಯ್ಬಿಟ್ಟಿರುವುದಾಗಿಯೂ ತಿಳಿದುಬಂದಿದೆ. ಅಹಮದಾಬಾದ್ ಸರಣಿ ಬಾಂಬ್ ಸ್ಫೋಟದ ರೂವಾರಿ ಎನ್ನಲಾಗಿರುವ ರಫೀಕ್, ರಾಜ್ಯದಲ್ಲಿ ಐಎಸ್ ಉಗ್ರ ಸಂಘಟನೆ ಬಲವರ್ಧನೆಗೆ ಪ್ರಯತ್ನಿಸುತ್ತಿದ್ದ ಎಂದು ತಿಳಿದುಬಂದಿದೆ. ಇದೀಗ ಚರ್ಚ್ ಸ್ಟ್ರೀಟ್ ಸ್ಫೋಟ ಪ್ರಕರಣಕ್ಕೂ ಈತನಿಗೂ ಸಂಬಂಧ ಇರಬಹುದೆಂದು ತನಿಖಾಧಿಕಾರಿಗಳು ಶಂಕಿಸಿದ್ದಾರೆ.

Follow KannadaPrabha channel on WhatsApp

  

KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ

 

Subscribe to KannadaPrabha YouTube Channel and watch Videos

'ಪಾಕಿಸ್ತಾನದೊಂದಿಗೆ ಯುದ್ಧ ನಿಲ್ಲಿಸಲು ಟ್ರಂಪ್ 24 ಗಂಟೆ ಕಾಲಾವಕಾಶ ನೀಡಿದ್ದರು, ಮೋದಿ ಕೇವಲ 5 ಗಂಟೆಗಳಲ್ಲಿ ಪಾಲಿಸಿದರು': ರಾಹುಲ್ ಗಾಂಧಿ

Dharmasthala: Mahesh Shetty Thimarodi ಮನೆ ಮಹಜರು, ಪತ್ನಿ-ಮಕ್ಕಳ ಮೊಬೈಲ್ ವಶಕ್ಕೆ, 3 ತಲ್ವಾರ್ ಕೂಡ ಪತ್ತೆ!

ಕಟ್ಟಡ ಕುಸಿತಕ್ಕೂ ಕೆಲವೇ ಕ್ಷಣಗಳ ಮುನ್ನ 22 CRPF ಸೈನಿಕರ ರಕ್ಷಣೆ; Indian Army ಹೆಲಿಕಾಪ್ಟರ್ ರೋಚಕ ಕಾರ್ಯಾಚರಣೆ! Video

ಡಿ ಕೆ ಶಿವಕುಮಾರ್ ಹಿಂದೂ ಜನರ ಭಾವನೆಗಳಿಗೆ ನೋವುಂಟುಮಾಡಿದ್ದು ಕ್ಷಮೆಯಾಚಿಸಬೇಕು: ಶೋಭಾ ಕರಂದ್ಲಾಜೆ

Tamil Nadu: ನಟ-ರಾಜಕಾರಣಿ ದಳಪತಿ ವಿಜಯ್ ಬೌನ್ಸರ್ ಗಳಿಂದ ವ್ಯಕ್ತಿಯ ಮೇಲೆ ಹಲ್ಲೆ ಆರೋಪ! ಕೇಸ್ ದಾಖಲು, ವಿಡಿಯೋದಲ್ಲಿ ಏನಿದೆ?

SCROLL FOR NEXT