ಪ್ರಧಾನ ಸುದ್ದಿ

4 ಸಾವಿರ ಕೋಟಿ ರೂ. ಹಿಂತಿರುಗಿಸಲು ಮಲ್ಯ ಸಿದ್ಧ: ಸುಪ್ರೀಂ ಕೋರ್ಟ್ ಗೆ ಮಾಹಿತಿ

Guruprasad Narayana

ನವದೆಹಲಿ: ದೇಶ ತೊರೆದಿರುವ ಸುಸ್ತಿದಾರ ವಿಜಯ್ ಮಲ್ಯ ೧೩ ಬ್ಯಾಂಕುಗಳಿಂದ ತೆಗೆದುಕೊಂಡಿರುವ ಸಾಲವನ್ನು ಮನ್ನಾ ಮಾಡಲು ೪೦೦೦ ಕೋಟಿ ರೂ ಪಾವತಿ ಮಾಡಲು ಸಿದ್ಧರಿದ್ದಾರೆ ಎಂದು ಸುಪ್ರೀಮ್ ಕೋರ್ಟ್ ಗೆ ತಿಳಿಸಲಾಗಿದೆ.

ಅಲ್ಲದೆ ಬಹುರಾಷ್ಟ್ರೀಯ ಸಂಸ್ಥೆ ಜನರಲ್ ಎಲೆಕ್ಟ್ರಿಕ್ ವಿರುದ್ಧ ವಿಜಯ್ ಮಲ್ಯ ದ್ಯಾವೆ ಹೂಡಿದ್ದು ಆ ಪ್ರಕರಣದಲ್ಲಿ ಜಯಗಳಿಸಿದರೆ ಅಲ್ಲಿಂದ ಸಿಗುವ ಸಾಧ್ಯತೆಯಿರುವ ೨೦೦೦ ಕೋಟಿ ರೂ ಮೊತ್ತವನ್ನು ಕೂಡ ಪಾವತಿಸಲಿದ್ದಾರೆ ಎಂದು ಅಪೆಕ್ಸ್ ಕೋರ್ಟ್ ನ್ಯಾಯಧೀಶರಾದ ಕುರಿಯನ್ ಜೋಸೆಫ್ ಮತ್ತು ರೋಹಿಂಗ್ಟನ್ ಎಫ್ ನಾರಿಮನ್ ಅವರಿಗೆ ತಿಳಿಸಲಾಗಿದೆ.

೪೦೦೦ ಕೋಟಿ ರೂ ಸೆಪ್ಟಂಬರ್ ಒಳಗೆ ಪಾವತಿಸುವುದಾಗಿ ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾ ವ್ಯವಸ್ಥಾಪಕರಿಗೆ ತಿಳಿಸಲಾಗಿದೆ ಎಂದು ಮಲ್ಯ ಪರ ವಕೀಲ ತಿಳಿಸಿದ್ದಾರೆ.

೨೦೧೩ರಲ್ಲಿ ೬೯೦೩ ಕೋಟಿ ರೂ ಮೂಲ ಸಾಲ ಮತ್ತು ಅದಕ್ಕೆ ಬಡ್ಡಿಯನ್ನು ವಸೂಲು ಮಾಡಲು ವಿಜಯ್ ಮಲ್ಯ ವಿರುದ್ಧ ದ್ಯಾವೆ ಹೂಡಿರುವ ಎಸ್ ಬಿ ಐ, ಈ ಹೊಸ ಮನವಿಯ ಬಗ್ಗೆ ಚರ್ಚಿಸಿ ನಿರ್ಧಾರಕ್ಕೆ ಬರಲು ಒಂದು ವಾರದ ಸಮಯ ಕೋರಿದೆ.

ವಿಜಯ್ ಮಲ್ಯ ಸದ್ಯಕ್ಕೆ ನೆಲೆಸಿರುವ ಪ್ರದೇಶದ ಬಗ್ಗೆ ಕೇಳಿದ್ದ ಬ್ಯಾಂಕ್ ಪ್ರಶ್ನೆಗೆ, ಅವರು ಸದ್ಯಕ್ಕೆ ಲಂಡನ್ ನಲ್ಲಿ ನೆಲೆಸಿದ್ದು, ಅಲ್ಲಿಗೆ ತೆರಳಿದ ಮೇಲೆ ಬ್ಯಾಂಕ್ ಅಧಿಕಾರಿಗಳ ಜೊತೆಗೆ ವಿಡಿಯೋ ಕಾನ್ಫರೆನ್ಸ್ ನಲ್ಲಿ ಎರಡು ಬಾರಿ ಮಾತನಾಡಿದ್ದಾರೆ ಎಂದು ವಕೀಲರು ತಿಳಿಸಿದ್ದಾರೆ.

SCROLL FOR NEXT