ಪ್ರಧಾನ ಸುದ್ದಿ

ಸರ್ಕಾರಿ ಬಂಗಲೆ ತೆರವುಗೊಳಿಸುವಂತೆ ಮಾಜಿ ಸಂಸದನಿಗೆ ಕೋರ್ಟ್ ಸೂಚನೆ

Guruprasad Narayana

ನವದೆಹಲಿ: ಅಧಿಕಾರಿಗಳು ಸೂಚಿಸಿದ್ದರೂ ಇನ್ನು ಸರ್ಕಾರಿ ಬಂಗಲೆಯನ್ನು ತೊರೆಯದೆ ವಾಸವಾಗಿರುವ ಮಾಜಿ ರಾಜ್ಯಸಭಾ ಸದಸ್ಯ ಅಖಿಲೇಶ್ ದಾಸ್ ಗುಪ್ತಾ ಅವರಿಗೆ ಬಂಗಲೆ ತೆರವುಗೊಳಿಸಲು ಕೋರ್ಟ್ ಆದೇಶಿಸಿದೆ.

ನವೆಂಬರ್ ೨೦೦೨ ರಲ್ಲಿ ನೀಡಲಾಗಿದ್ದ ಲೋಧಿ ಎಸ್ಟೇಟ್ ೧೧, ಬಂಗಲೆಯನ್ನು ತೆರವುಗೊಳಿಸುವಂತೆ ಮಾಜಿ ಸಂಸದರಿಗೆ ಜಿಲ್ಲಾ ನ್ಯಾಯಾಧೀಶ ಅಮರ್ ನಾಥ್ ಆದೇಶಿಸಿದ್ದಾರೆ.

ನವೆಂಬರ್ ೧೯೯೬ ರಲ್ಲಿ ಸಂಸತ್ತಿನ ಮೇಲ್ಮನೆಗೆ ಕಾಂಗ್ರೆಸ್ ಸದಸ್ಯರಾಗಿ ಗುಪ್ತಾ ಆಯ್ಕೆಯಾಗಿದ್ದರು ಮತ್ತು ೨೦೦೨ರಲ್ಲಿ ಮರು ಆಯ್ಕೆಯಾಗಿದ್ದರು. ಮತ್ತೆ ೨೦೦೮ ರಲ್ಲಿ ಬಹುಜನ ಸಮಾಜ ಪಕ್ಷದಿಂದ ರಾಜ್ಯಸಭೆಗೆ ಆಯ್ಕೆಯಾಗಿದ್ದರು.

ಗುಪ್ತಾ ಅವರ ರಾಜ್ಯಸಭಾ ಅವಧಿ ನವೆಂಬರ್ ೨೦೧೪ ಕ್ಕೆ ಮುಗಿದಿತ್ತು ಆದರೆ ಮಾರ್ಚ್ ೨೫ ೨೦೧೫ ರವರೆಗೆ ಬಾಡಿಗೆ ನೀಡಿ ಬಂಗಲೆಯಲ್ಲಿ ಉಳಿಯಲಿ ರಾಜ್ಯ ಸಭಾ ಸೆಕ್ರೆಟರಿಯಟ್ ಅವಕಾಶ ನೀಡಿದ್ದರು. ನಂತರ ಈ ಅವಧಿಯನ್ನು ಜುನ್ ೨೬ ೨೦೧೫ರವರೆಗೆ ವಿಸ್ತರಿಸಲಾಗಿತ್ತು ಆದರೆ ನಂತರದ ಮನವಿಯನ್ನು ಸೆಕ್ರೆಟರಿಯಟ್ ಪುರಸ್ಕರಿಸಲಿಲ್ಲ. ಆದುದರಿಂದ ಜನವರಿ ೧೫ ೨೦೧೬ ರಂದು ಬಂಗಲೆ ತೊರೆಯುವಂತೆ ಅಧಿಕಾರಿಗಳು ಸೂಚಿಸಿದ್ದರು.

ನಂತರ ಗುಪ್ತ ಅವರು ತಾವು ಬಾಡಿಗೆ ನೀಡುತ್ತಿರುವುದರಿಂದ ಬಂಗಲೆಯಲ್ಲಿ ವಾಸಿಸಲು ಅವಕಾಶ ಕೋರಿ ದೆಹಲಿ ಕೋರ್ಟ್ ಮೊರೆ ಹೋಗಿದ್ದರು ಆದರೆ ಇದನ್ನು ತಿರಸ್ಕರಿಸಿದ ಕೋರ್ಟ್ ಬಂಗಲೆ ತೊರೆಯುವಂತೆ ಸೂಚಿಸಿದೆ.

SCROLL FOR NEXT