ನವದೆಹಲಿ: ಕೇಂದ್ರ ಲೋಕಸೇವಾ ಆಯೋಗ(ಯುಪಿಎಸ್ಸಿ) ಮಂಗಳವಾರ 2015ನೇ ಸಾಲಿನ ಅಂತಿಮ ಪರೀಕ್ಷೆಯ ಫಲಿತಾಂಶ ಪ್ರಕಟಿಸಿದ್ದು, ದೆಹಲಿ ಯುವತಿ ಟೀನಾ ಡಾಬಿ ಮೊದಲ ಪ್ರಯತ್ನದಲ್ಲೇ ಮೊದಲ ರ್ಯಾಂಕ್ ಪಡೆದಿದ್ದು, ಜಮ್ಮು ಮತ್ತು ಕಾಶ್ಮೀರದ ರೇಲ್ವೆ ಅಧಿಕಾರಿ ಅತಾರ್ ಅಮಿರ್ ಉಲ್ ಶಫಿ ಖಾನ್ ಅವರು ಎರಡನೇ ರ್ಯಾಂಕ್ ಪಡೆದಿದ್ದಾರೆ.
ಟೀನಾ ಡಬಿ(0256747) ಪ್ರಥಮ ಶ್ರೇಯಾಂಕ ಪಡೆದುಕೊಂಡಿದ್ದಾರೆ. ಅತಾರ್ ಉಲ್ ಶಫಿ ಖಾನ್(ರೋಲ್ ನಂಬರ್ 0058239), ಜಸ್ಮೀರ್ ಸಿಂಗ್ ಸಂಧು (0010512), ಆರ್ತಿಕಾ ಶುಕ್ಲಾ(0000123), ಶಶಾಂಕ್ ತ್ರಿಪಾಠಿ(0015876) ಮೊದಲ 5 ಸ್ಥಾನ ಗಳಿಸಿದ್ದಾರೆ. ಕರ್ನಾಟಕದ ದರ್ಶನ್ 48ನೇ ಹಾಗೂ ಶ್ರೀನಿವಾಸ್ ಗೌಡ ಎ. ಆರ್ (0535527) ಅವರು 105ನೇ ಸ್ಥಾನ ಗಳಿಸಿದ್ದಾರೆ
ಫಲಿತಾಂಶದನ ನಂತರ ಮಾಧ್ಯಮ ಪ್ರತಿಕ್ರಿಯಿಸಿರುವ 22 ವರ್ಷದ ಟೀನಾ, ದೇಶಕ್ಕಾಗಿ ಏನನ್ನಾದರೂ ಮಾಡುವ ಆಸೆ ಹೊಂದಿದ್ದೇನೆ. ನನ್ನ ಈ ಸಾಧನೆಯ ಹಿಂದೆ ನನ್ನ ತಾಯಿಯ ಪಾತ್ರವೂ ಇದೆ ಎಂದು ಹೇಳಿದ್ದಾರೆ.
ಕರ್ನಾಟಕದ ಅಭ್ಯರ್ಥಿಗಳ ಫಲಿತಾಂಶ