ಪ್ರಧಾನ ಸುದ್ದಿ

ಊಹಾಪೋಹಕ್ಕೆ ಎಡೆಮಾಡಿಕೊಟ್ಟ ಶಿವಪಾಲ್ ಯಾದವ್-ಯೋಗಿ ಆದಿತ್ಯನಾಥ್ ಭೇಟಿ

Guruprasad Narayana
ಲಖನೌ: ಪಕ್ಷದಲ್ಲಿ ಮತ್ತು ಪಕ್ಷದ ಅಧ್ಯಕ್ಷ ಅಖಿಲೇಶ್ ಯಾದವ್ ಅವರಿಂದ ಕಡೆಗಣಿಸಲ್ಪಟ್ಟ ಹಿರಿಯ ಸಮಾಜವಾದಿ ಪಕ್ಷದ ಮುಖಂಡ ಶಿವಪಾಲ್ ಸಿಂಗ್ ಯಾದವ್, ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್ ಅವರನ್ನು ಭೇಟಿ ಮಾಡಿರುವುದು ಊಹಾಪೋಹಕ್ಕೆ ಎಡೆಮಾಡಿಕೊಟ್ಟಿದೆ. 
೩೦ ನಿಮಿಷಗಳ ಕಾಲ ನಡೆದ ಈ ಭೇಟಿ "ಸೌಹಾರ್ದತೆಯ ಭೇಟಿಗಿಂತಲೂ ಹೆಚ್ಚಿನದ್ದೇನೂ ಇರಬೇಕು" ಎಂಬುದು ರಾಜಕೀಯ ಪಂಡಿತರ ಅಭಿಮತ.
ಮೂಲಗಳ ಪ್ರಕಾರ ಸಮಾಜವಾದಿ ಪಕ್ಷಗಳ ಹೊರಗೆ ತಮ್ಮ ರಾಜಕೀಯ ಭವಿಷ್ಯವನ್ನು ರೂಪಿಸಿಕೊಳ್ಳಲು ಶಿವಪಾಲ್ ಯಾದವ್ ಚಿಂತಿಸುತ್ತಿದ್ದರು ಎನ್ನಲಾಗಿದೆ. ಕಳೆದ ಕೆಲವು ದಿನಗಳಲ್ಲಿ ಯಾದವ್ ಕುಟುಂಬದ ಸದಸ್ಯ ಬಿಜೆಪಿ ಮುಖ್ಯಮಂತ್ರಿಯನ್ನು ಭೇಟಿ ಮಾಡಿರುವದು ಇದು ಎರಡನೇ ಬಾರಿ.
ಮಾರ್ಚ್ ೧೫ ಮತ್ತು ಮಾರ್ಚ್ ೩೧ ರಂದು ಮುಲಾಯಂ ಅವರ ಕಿರಿಯ ಪುತ್ರ ಪ್ರತೀಕ್ ಮತ್ತು ಅವರ ಪತ್ನಿ ಅಪರ್ಣ ಯಾದವ್ ಆದಿತ್ಯನಾಥ್ ಅವರನ್ನು ಭೇಟಿ ಮಾಡಿದ್ದರು. ಇದು ಯಾದವ್ ಕುಟುಂಬದ ಕೆಲವು ಸದಸ್ಯರು ಬೇಲಿ ಹಾರಿ ಬಿಜೆಪಿ ಸೇರುವುದರ ಬಗ್ಗೆ ಶಂಕೆ ವ್ಯಕ್ತಪಡಿಸಿದೆ ಎನ್ನುತ್ತಾರೆ ರಾಜಕೀಯ ಪಂಡಿತರು. 
೨೦೧೭ ರ ವಿಧಾನಸಭಾ ಚುನಾವಣೆಯ ದಯನೀಯ ಸೋಲಿನ ನಂತರವೂ ಮುಲಾಯಂ ಸಿಂಗ್-ಶಿವಪಾಲ್ ಮತ್ತು ಅಖಿಲೇಶ್ ನಡುವೆ ಸಂಧಾನ ಏರ್ಪಟ್ಟಿಲ್ಲ. 
ಇತ್ತೀಚೆಗಷ್ಟೇ ಮುಲಾಯಂ ಮತ್ತು ಶಿವಪಾಲ್, ಅಖಿಲೇಶ್ ಅವರ ಮೇಲೆ ವಾಗ್ದಾಳಿ ನಡೆಸಿ ಅವರ ಅಹಂಕಾರವೇ ದಯನೀಯ ಸೋಲಿಗೆ ಕಾರಣವಾಯಿತು ಎಂದಿದ್ದರು.  
SCROLL FOR NEXT