ಪ್ರಧಾನ ಸುದ್ದಿ

ಸ್ವೀಡನ್ ರಾಯಭಾರ ಕಚೇರಿ ಅಧಿಕಾರಿಗಳು ಸುರಕ್ಷಿತ: ಸುಷ್ಮಾ ಸ್ವರಾಜ್

Srinivasamurthy VN

ಸ್ಟಾಕ್ ಹೋಮ್: ಸ್ವೀಡನ್ ರಾಜಧಾನಿ ಸ್ಟಾಕ್ ಹೋಮ್ ನಲ್ಲಿ ನಡೆದ ಉಗ್ರ ದಾಳಿ ಘಟನೆಯಲ್ಲಿ ಯಾವುದೇ ಭಾರತೀಯ ರಾಯಭಾರ ಕಚೇರಿ ಅಧಿಕಾರಿಗಳಿಗೆ ತೊಂದರೆಯಾಗಿಲ್ಲ. ಅಧಿಕಾರಿಗಳೆಲ್ಲರೂ ಸುರಕ್ಷಿತರಾಗಿದ್ದಾರೆ ಎಂದು  ಕೇಂದ್ರ ವಿದೇಶಾಂಗ ಸಚಿವ ಸುಷ್ಮಾ ಸ್ವರಾಜ್ ತಿಳಿಸಿದ್ದಾರೆ.

ನಿನ್ನೆ ಸ್ವೀಡನ್ ನ ರಾಜಧಾನಿ ಸ್ಟಾಕ್ ಹೋಮ್ ನಲ್ಲಿ ಉಗ್ರ ದಾಳಿಯಲ್ಲಿ ಯಾವುದೇ ಭಾರತೀಯ ರಾಯಭಾರ ಅಧಿಕಾರಿಗಳಿಗೆ ತೊಂದರೆಯಾಗಿಲ್ಲ. ಎಲ್ಲರೂ ಸುರಕ್ಷಿತವಾಗಿದ್ದಾರೆ ಸುಷ್ಮಾ ಸ್ವರಾಜ್ ತಿಳಿಸಿದ್ದಾರೆ. ಸ್ಟಾಕ್ ಹೋಮ್ ನ  ಕ್ವೀನವ್ಸ್ ರಸ್ತೆಯಲ್ಲಿರುವ ಭಾರತೀಯ ರಾಯಭಾರ ಕಚೇರಿ ಸಮೀಪದಲ್ಲಿ ದಾಳಿ ನಡೆದಿದೆಯಾದರೂ ಅದೃಷ್ಟವಶಾತ್ ಯಾವುದೇ ಅಧಿಕಾರಿಗೂ ತೊಂದರೆಯಾಗಿಲ್ಲ. ನಾನು ಸ್ವೀಡನ್ ರಾಯಭಾರ ಕಚೇರಿಯೊಂದಿಗೆ ನಿರಂತರ  ಸಂಪರ್ಕದಲ್ಲಿದ್ದು, ತತ್ ಕ್ಷಣದ ಮಾಹಿತಿ ಪಡೆಯುತ್ತಿದ್ದೇನೆ ಎಂದು ಸುಷ್ಮಾ ಸ್ವರಾಜ್ ತಿಳಿಸಿದ್ದಾರೆ.

ನಿನ್ನೆ ಸ್ಟಾಕ್ ಹೋಮ್ ನ ಕ್ವೀನ್ಸ್ ರಸ್ತೆಯಲ್ಲಿ ಉಗ್ರನೋರ್ವ ಜನರ ಮೇಲೆ ಟ್ರಕ್ ಹರಿಸಿದ ಪರಿಣಾಮ 4 ಮಂದಿ ಸಾವನ್ನಪ್ಪಿದ್ದರು. ಅಂತೆಯೇ 15 ಮಂದಿಗೆ ಗಂಭೀರಗಾಯವಾಗಿದ್ದು, ಗಾಯಾಳುಗಳನ್ನು ಆಸ್ಪತ್ರೆಗೆ ದಾಖಲಿಸಲಾಗಿದೆ.

SCROLL FOR NEXT