ಸಂಗ್ರಹ ಚಿತ್ರ 
ಪ್ರಧಾನ ಸುದ್ದಿ

ಪಳನಿ ಸ್ವಾಮಿಗೆ "ಬಹುಮತ" ಅಗ್ನಿ ಪರೀಕ್ಷೆ; ನಾಳೆ ತಮಿಳುನಾಡು ವಿಶೇಷ ಅಧಿವೇಶನ!

ತೀವ್ರ ಕುತೂಹಲ ಕೆರಳಿಸಿರುವ ತಮಿಳುನಾಡು ರಾಜ್ಯ ರಾಜಕೀಯ ದಿನಕ್ಕೊಂದು ತಿರುವು ಪಡೆಯುತ್ತಿದ್ದು, ನೂತನ ಸಿಎಂ ಆಗಿ ಎಡಪಾಡಿ ಪಳನಿಸ್ವಾಮಿ ಅಧಿಕಾರ ಸ್ವೀಕರಿಸಿದ ಬೆನ್ನಲ್ಲೇ ಹಲವು ರಾಜಕೀಯ ವಿದ್ಯಾಮಾನಗಳು ನಡೆಯುತ್ತಿವೆ.

ಚೆನ್ನೈ: ತೀವ್ರ ಕುತೂಹಲ ಕೆರಳಿಸಿರುವ ತಮಿಳುನಾಡು ರಾಜ್ಯ ರಾಜಕೀಯ ದಿನಕ್ಕೊಂದು ತಿರುವು ಪಡೆಯುತ್ತಿದ್ದು, ನೂತನ ಸಿಎಂ ಆಗಿ ಎಡಪಾಡಿ ಪಳನಿಸ್ವಾಮಿ ಅಧಿಕಾರ ಸ್ವೀಕರಿಸಿದ ಬೆನ್ನಲ್ಲೇ ಹಲವು ರಾಜಕೀಯ ವಿದ್ಯಾಮಾನಗಳು ನಡೆಯುತ್ತಿವೆ.

ಶನಿವಾರ ವಿಶೇಷ ಅಧಿವೇಶನ ಕರೆದು ಬಹುಮತ ಸಾಬೀತು ಪಡಿಸಲು ಶಶಿಕಲಾ ಬಣದಲ್ಲಿ ಗುರುತಿಸಿಕೊಂಡಿರುವ ಎಡಪಾಡಿ ಪಳನಿಸ್ವಾಮಿ ಸಿದ್ಧತೆ ನಡೆಸಿಕೊಂಡಿದ್ದರೆ, ಇದಕ್ಕೆ ವಿರೋಧ ವ್ಯಕ್ತಪಡಿಸಿರುವ ಮಾಜಿ ಸಿಎಂ ಪನ್ನೀರ್  ಸೆಲ್ವಂ ಬಣ ಪಳನಿಸ್ವಾಮಿ ವಿರುದ್ಧ ಮತಹಾಕುವ ಕುರಿತು ಚಿಂತನೆಯಲ್ಲಿ ತೊಡಗಿವೆ. ಏತನ್ಮಧ್ಯೆ ಎಐಎಡಿಎಂಕೆಯಲ್ಲಿನ ರಾಜಕೀಯ ಬೆಳವಣಿಗೆಳನ್ನು ಕುತೂಹಲದಿಂದ ವೀಕ್ಷಿಸುತ್ತಿರುವ ಪ್ರತಿಪಕ್ಷಗಳು ರಾಜಕೀಯ ಬಿಕ್ಕಟ್ಟನ್ನು ತಮ್ಮ  ಲಾಭಕ್ಕೆ ಬಳಸಿಕೊಳ್ಳಲು ಯತ್ನಿಸುತ್ತಿದ್ದು, ಪ್ರಸ್ತುತ ರಾಜಕೀಯ ಬಿಕ್ಕಟ್ಟಿಗೆ ಸಂಬಂಧಿಸಿದಂತೆ ತಟಸ್ಥವಾಗಿರಲು ನಿರ್ಧರಿಸಿದಂತಿವೆ.

ಇದೇ ಕಾರಣಕ್ಕೆ ಕಾಂಗ್ರೆಸ್ ರಾಜಕೀಯದಾಟದಿಂದ ದೂರ ಉಳಿಯಲು ನಿರ್ಧರಿಸಿದ್ದು, ಈಗಾಗಲೇ ತನ್ನ ಎಲ್ಲ 8 ಶಾಸಕರಿಗೆ ವಿಪ್ ಜಾರಿ ಮಾಡಿದೆ. ಅಲ್ಲದೆ ನಾಳೆ ಎಲ್ಲ ಶಾಸಕರೂ ಕಡ್ಡಾಯವಾಗಿ ಕಲಾಪದಲ್ಲಿ ಪಾಲ್ಗೊಂಡು ಪಳನಿ  ಸ್ವಾಮಿ ಅವರ ವಿರುದ್ಧ ಮತ ಚಲಾಯಿಸುವಂತೆ ವಿಪ್ ಜಾರಿ ಮಾಡಿದೆ. ಇನ್ನು ಪ್ರಮುಖ ವಿಪಕ್ಷ ಡಿಎಂಕೆ ಕೂಡ ಇಂದು ಸಂಜೆ ತನ್ನ ಶಾಸಕರ ಸಭೆ ನಡೆಸುತ್ತಿದ್ದು, ನಾಳಿನ ಅಧಿವೇಶನದಲ್ಲಿ ತಾನು ಕೈಗೊಳ್ಳಬೇಕಾದ ನಿರ್ಣಯಗಳ  ಕುರಿತು ಚರ್ಚೆ ನಡೆಸಲಿದೆ. ಡಿಎಂಕೆ ಮೂಲಗಳು ತಿಳಿಸಿರುವಂತೆ ಪಳನಿ ಸ್ವಾಮಿ ವಿರುದ್ಧ ಡಿಎಂಕೆ ಶಾಸಕರ ಮತ ಚಲಾಯಿಸುವ ಸಾಧ್ಯತೆ ಇದೆ ಎಂದು ಹೇಳಲಾಗುತ್ತಿದೆ.

ಬಹುಮತ ಸಾಬೀತಿಗೂ ಮುನ್ನವೇ ಶಶಿಕಲಾ ಬಣಕ್ಕೆ ಮೊದಲ ಶಾಕ್!

ಇನ್ನು ನೂತನ ಸಿಎಂ ಪಳನಿಸ್ವಾಮಿ ಬಹುಮತ ಸಾಬೀತಿಗೆ ಸಿದ್ಧವಾಗುತ್ತಿರುವಂತೆಯೇ ತಮ್ಮದೇ ಪಕ್ಷದಿಂದ ಮೊದಲ ಶಾಕ್ ಎದುರಾಗಿದ್ದು, ಎಐಎಡಿಎಂಕೆಯ ಮೈಲಾಪುರ ಶಾಸಕ ನಟರಾಜ್ ಅವರು ತಾವು ಪಳನಿ ಸ್ವಾಮಿ ವಿರುದ್ಧ  ಮತ ಚಲಾಯಿಸುವುದಾಗಿ ಘೋಷಣೆ ಮಾಡಿದ್ದಾರೆ. ಅಲ್ಲದೆ ತಾವು ಪನ್ನೀರ್ ಸೆಲ್ವಂ ಅವರಿಗೆ ಬೆಂಬಲ ನೀಡುತ್ತಿರುವುದಾಗಿ ಹೇಳಿದ್ದಾರೆ.

ಬೆಂಬಲಿಗ ಶಾಸಕರೊಂದಿಗೆ ಪನ್ನೀರ್ ಸೆಲ್ವಂ ಸಭೆ
ಇನ್ನು ನಾಳಿನ ಬಹುಮತ ಸಾಬೀತು ವೇಳೆ ಎಐಎಡಿಎಂಕೆ ಪಕ್ಷ ವಿಪ್ ಜಾರಿ ಮಾಡಲಿರುವ ಹಿನ್ನಲೆಯಲ್ಲಿ ಬಂಡಾಯವೆದ್ದಿರುವ ತಾವು ಯಾವ ನಿರ್ಧಾರ ಕೈಗೊಳ್ಳಬೇಕು. ಸರ್ಕಾರದ ಪರ ಅಥವಾ ವಿರುದ್ಧ ಮತ ಚಲಾಯಿಸಬೇಕೇ  ಎನ್ನುವ ಕುರಿತು ಪನ್ನೀರ್ ಸೆಲ್ವಂ ತಮ್ಮ ಬೆಂಬಲಿಗ ಶಾಸಕರೊಂದಿಗೆ ಚರ್ಚಿಸುತ್ತಿದ್ದಾರೆ.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

ನಾಳೆ CJPಯ ತಿರಂಗಾ ಮೆರವಣಿಗೆ ನಡೆಯಬೇಕಿದ್ದ ದೆಹಲಿಯ ಸೆಂಟ್ರಲ್ ಪಾರ್ಕ್ ಅನ್ನು 2 ದಿನ ಮುಚ್ಚಿದ NDMC!

ಕನ್ನಡಿಗರು ಕೊಟ್ಟ ದುಡ್ಡಲ್ಲೇ AR Rahman ತಮ್ಮ ಮೊದಲ ಸ್ಟುಡಿಯೋ ಕಟ್ಟಿದ್ದು: ನಟ ಯಶ್

ದೇಶಕ್ಕೆ ಹೇಗೆ ಬೆಂಕಿ ಹಚ್ಚಬೇಕು ಎಂಬುದನ್ನು ಬಾಂಗ್ಲಾದೇಶ ನಮಗೆ ತೋರಿಸಿಕೊಟ್ಟಿದೆ: ನೇಹಾ ಬೋರಾ ಹೇಳಿಕೆಗೆ ಬಿಜೆಪಿ ಆಕ್ರೋಶ!

Ramayana: 'ರಾಮಾಯಣ'ದ ರನ್ ಟೈಮ್ ಮೂರು ಗಂಟೆಗೂ ಹೆಚ್ಚು; ಅಮೆರಿಕದಲ್ಲಿ 'PG-13' ರೇಟಿಂಗ್!

ದೆಹಲಿಯ ರಾಮಲೀಲಾದಲ್ಲಿ ಈ ಬಾರಿ ರಾವಣನ ಜೊತೆಗೆ 30 ಅಡಿ ಎತ್ತರದ ಕಾಕ್ರೋಚ್ ಪ್ರತಿಕೃತಿ ದಹನ!