ಸಂಗ್ರಹ ಚಿತ್ರ 
ಪ್ರಧಾನ ಸುದ್ದಿ

ಭಾರತಕ್ಕೆ ಕಾಲಿಟ್ಟ 'ರೋಬೋ ಕಾಪ್'; ಬಾಂಬ್ ಪತ್ತೆಗೆ ರೋಬೋಟ್ ಬಳಕೆ ಮಾಡಲಿರುವ ಸಿಆರ್ ಪಿಎಫ್!

ಶೀಘ್ರದಲ್ಲೇ ಭಾರತೀಯ ಸೇನೆಗೆ ಹೊಸ ಯೋಧನ ಸೇರ್ಪಡೆಯಾಗಲಿದ್ದು, ಕೇಂದ್ರೀಯ ಮೀಸಲು ಪಡೆ ಸಿಆರ್ ಪಿಎಫ್ ಶೀಘ್ರದಲ್ಲೇ ಬಾಂಬ್ ಶೋಧಕ್ಕಾಗಿ ಹೊಸ ರೋಬೋಕಾಪ್ ಗಳನ್ನು ಬಳಸಿಕೊಳ್ಳಲಿದೆ.

ನವದೆಹಲಿ: ಶೀಘ್ರದಲ್ಲೇ ಭಾರತೀಯ ಸೇನೆಗೆ ಹೊಸ ಯೋಧನ ಸೇರ್ಪಡೆಯಾಗಲಿದ್ದು, ಕೇಂದ್ರೀಯ ಮೀಸಲು ಪಡೆ ಸಿಆರ್ ಪಿಎಫ್ ಶೀಘ್ರದಲ್ಲೇ ಬಾಂಬ್ ಶೋಧಕ್ಕಾಗಿ ಹೊಸ ರೋಬೋಕಾಪ್ ಗಳನ್ನು ಬಳಸಿಕೊಳ್ಳಲಿದೆ.

ದೇಶದ ಅತ್ಯಂತ ದೊಡ್ಡ ಅರೆ ಸೇನಾ ಪಡೆ ಎಂಬ ಖ್ಯಾತಿ ಪಡೆದಿರುವ ಸಿಆರ್ ಪಿಎಫ್ ಅಧುನೀಕರಣಗೊಳ್ಳುತ್ತಿದ್ದು, ಯೋಧರಿಗೆ ಕಾಣದಂತೆ ನೆಲದಡಿಯಲ್ಲಿ ಹುದುಗಿಸಿರಬಹುದಾದ ಬಾಂಬ್ ಗಳನ್ನು ಶೋಧಿಸಿ ತೆಗೆದು ಅವುಗಳನ್ನು  ನಿಷ್ಕ್ರಿಯಗೊಳಿಸಲು ಈ ರೋಬೋ ಕಾಪ್ ಗಳು (ರೋಬಾಟ್ ಗಳು) ನೆರವಾಗಲಿವೆ. ಪ್ರತೀ ವರ್ಷ ನಕ್ಸಲ್ ಕಾರ್ಯಾಚರಣೆಯಲ್ಲಿ ನೂರಾರು ಯೋಧರು ಮೃತಪಡುತ್ತಿದ್ದು. ನಕ್ಸಲರ ವಿರುದ್ಧದ ಗುಂಡಿನ ದಾಳಿಗಿಂತ ನಕ್ಸಲರು ಇಡುವ  ಬಾಂಬ್ ಗಳು ಹಾಗೂ ಲ್ಯಾಂಜ್ ಮೈನ್ ಗಳ ಸ್ಫೋಟದಿಂದಾಗಿಯೇ ಹೆಚ್ಚು ಯೋಧರು ಸಾವನ್ನಪ್ಪುತ್ತಿದ್ದಾರೆ.

ಹೀಗಾಗಿ ಇಂತಹ ಸಂದರ್ಭಗಳಿಗಾಗಿ ಸದಾಕಾಲ ಸಿದ್ಧವಾಗಿರುವ ರೋಬೋಟ್ ಗಳನ್ನು ಅಳವಡಿಸಿಕೊಳ್ಳಲು ಸಿಆರ್ ಪಿಎಫ್ ಮುಂದಾಗಿದ್ದು, ಇದಕ್ಕಾಗಿ ಮುಂಬೈ ಐಐಟಿ ಸಂಸ್ಥೆಯನ್ನು ಸಂಪರ್ಕಿಸಿ ಚರ್ಚೆ ನಡೆಸಿದೆ. ಈ ಬಗ್ಗೆ  ಮಾಧ್ಯಮಗಳಿಗೆ ಮಾಹಿತಿ ನೀಡಿರುವ ಸಿಆರ್ ಪಿಎಫ್ ನ ಡಿಜಿ ಕೆ ದುರ್ಗಾ ಪ್ರಸಾದ್ ಅವರು, ಬಾಂಬ್ ಗಳನ್ನು ನಿಷ್ಕ್ರಿಯಗೊಳಿಸುವ ರೋಬೋಟ್ ಗಳನ್ನು ಸೇನೆಯಲ್ಲಿ ಬಳಸಿಕೊಳ್ಳುವ ಕುರಿತು ಮುಂಬೈ ಐಐಟಿಯನ್ನು  ಸಂಪರ್ಕಿಸಲಾಗಿದೆ ಎಂದು ಹೇಳಿದ್ದಾರೆ.

ಈ ಸಾಧನಗಳಿಂದ ನೆಲದಡಿಯಲ್ಲಿ ಹುದುಗಿಸಿಟ್ಟರಬಹುದಾದ ಬಾಂಬ್ ಗಳನ್ನು ಶೋಧಿಸಲು ನೆರವಾಗುತ್ತದೆ. ಆ ಮೂಲಕ ಬಾಂಬ್ ದಾಳಿಯಲ್ಲಿ ಸಾವನ್ನಪ್ಪುವ ಸಾವಿರಾರು ಯೋಧರ ಪ್ರಾಣ ಉಳಿಯುತ್ತದೆ. ಪ್ರಸ್ತುತ ಬಾಂಬ್  ನಿಷ್ಕ್ರಿಯಗೊಳಿಸುವ ರೋಬೋಟ್ ಗಳ ಪರೀಕ್ಷೆ ನಡೆಸಲಾಗುತ್ತಿದ್ದು, ಅವುಗಳ ಸಾಮರ್ಥ್ಯವನ್ನು ಪರೀಕ್ಷಿಸಿ ಬಳಿಕ ಸೇನೆಗೆ ಸೇರ್ಪಡೆಗೊಳಿಸಲಾಗುತ್ತದೆ ಎಂದು ಹೇಳಿದ್ದಾರೆ. ಇದಲ್ಲದೆ ಸೇನಾ ಯೋಧರಿಗೆ ವಿಶೇಷ ಬೂಟ್ ಗಳನ್ನು  ನೀಡುವ ಕುರಿತೂ ಚಿಂತಿಸಲಾಗುತ್ತಿದ್ದು, ಶೀಘ್ರದಲ್ಲೇ ಅವುಗಳನ್ನು ಯೋಧರಿಗೆ ವಿತರಣೆ ಮಾಡಲಾಗುತ್ತದೆ ಎಂದು ದುರ್ಗಾ ಪ್ರಸಾದ್ ಅವರು ಹೇಳಿದ್ದಾರೆ.

ಡಿಜಿ ದುರ್ಗಾ ಪ್ರಸಾದ್ ಅವರ ಆಡಳಿತಾವಧಿ ನಾಳೆ ಅಂತ್ಯಗೊಳ್ಳಲ್ಲಿದ್ದು, ಅವರು ನಿವೃತ್ತಿಯಾಗುತ್ತಿದ್ದಾರೆ.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

'ಜನರು ಬಿಜೆಪಿ, ಮೋದಿ ಅವರೊಂದಿಗಿದ್ದಾರೆ': 2029ರ ಚುನಾವಣೆಯಲ್ಲಿ ಮತ್ತೊಂದು 'ಭಾರಿ ಸೋಲಿಗೆ' ಸಿದ್ಧರಾಗಿ: ರಾಹುಲ್ ಗಾಂಧಿ ವಿರುದ್ಧ ಅಮಿತ್ ಶಾ ವಾಗ್ದಾಳಿ

'ನನ್ನ ಜೊತೆ ಮಲಗಿದ್ರೆ ಸಿನಿಮಾ ಅವಕಾಶ’: ಚಿಕ್ಕ ವಯಸ್ಸಿಗೆ ಚಿತ್ರರಂಗ ಬಿಟ್ಟಿದ್ದೇಕೆ; ಸೌಥ್ ನಿರ್ದೇಶಕನ ಬಗ್ಗೆ ನಟಿ ಶಾಕಿಂಗ್ ಹೇಳಿಕೆ!

3 ಬಾರಿ ಸಿಎಂ ಕೂಡ ಸುರಕ್ಷಿತವಾಗಿಲ್ಲ: ಮಮತಾ ಬ್ಯಾನರ್ಜಿ ಮೇಲೆ ಚಾಕುವಿನಿಂದ ದಾಳಿಗೆ ಯತ್ನ; ಮಹಿಳೆ ಬಂಧನ

ವಿಚಿತ್ರವಾದ್ರೂ ಸತ್ಯ: ಅಪ್ರಾಪ್ತೆಯನ್ನು ಹಿಂಬಾಲಿಸಿ ಲೈಂಗಿಕ ದೌರ್ಜನ್ಯ; ರೋಬೋಟ್ ವಶಕ್ಕೆ ಪಡೆದ ಪೊಲೀಸರು!

'ಏನೇನ್ ದಾಖಲೆ ಇದೆ ಎಲ್ಲಾ ತರಿಸುತ್ತೇನೆ': HDK 'ಸ್ಟಿಂಗ್' ಆರೋಪಕ್ಕೆ CM ಡಿಕೆಶಿ ಶಾಕಿಂಗ್ ರಿಯಾಕ್ಷನ್!