ಪ್ರಧಾನ ಸುದ್ದಿ

ಬಿಹಾರ ಮಂತ್ರಿ ತೇಜ್ ಪ್ರತಾಪ್ ಒಡೆತನದ ಪೆಟ್ರೋಲ್ ಪಂಪ್ ಪರವಾನಗಿ ರದ್ದು

Guruprasad Narayana
ಪಾಟ್ನಾ: ಭಾರತ ಪೆಟ್ರೋಲಿಯಂ ಕಾರ್ಪೊರೇಷನ್ ಲಿಮಿಟೆಡ್ (ಬಿಪಿಸಿಎಲ್), ಬಿಹಾರ ಆರೋಗ್ಯ ಸಚಿವ ತೇಜ್ ಪ್ರತಾಪ್ ಯಾದವ್ ಒಡೆತನದ ಪೆಟ್ರೋಲ್ ಪಂಪ್ ಪರವಾನಗಿಯನ್ನು ಶನಿವಾರ ರದ್ದು ಮಾಡಿದೆ. ತೇಜ್ ಪ್ರತಾಪ್ ಕಾನೂನುಬಾಹಿರವಾಗಿ ಪರವಾನಗಿ ತೆಗೆದುಕೊಂಡಿದ್ದಾರೆ ಎಂದು ಆರೋಪಿಸಲಾಗಿತ್ತು. 
ರಾಷ್ಟ್ರೀಯ ಜನತಾ ದಳ ಮುಖ್ಯಸ್ಥ ಲಾಲು ಪ್ರಸಾದ್ ಯಾದವ್ ಅವರ ಹಿರಿಯ ಪುತ್ರ ತೇಜ್ ಪ್ರತಾಪ್ ಯಾದವ್. 
ಅನಿಸಾಬಾದ್ ಬೈಪಾಸ್ ಬಳಿ ಇರುವ ಪೆಟ್ರೋಲ್ ಬಂಕ್ ನ ಪ್ರದೇಶ ತೇಜ್ ಪ್ರತಾಪ್ ಗೆ ಸೇರಿದ್ದಲ್ಲ ಎಂದು ಬಿಜೆಪಿ ಮುಖಂಡ ಸುಶೀಲ್ ಕುಮಾರ್ ಮೋದಿ ಮಾಡಿದ್ದ ಆರೋಪಕ್ಕೆ ಉತ್ತರಿಸಲು ಮೇ ೨೯ರಂದು ಬಿಪಿಸಿಎಲ್, ತೇಜ್ ಪ್ರತಾಪ್ ಅವರಿಗೆ ನೋಟಿಸ್ ನೀಡಿತ್ತು. 
ಬಿಪಿಸಿಎಲ್ ಪ್ರಾದೇಶಿಕ ನಿರ್ದೇಶಕ (ರಿಟೇಲ್) ಪಾಟ್ನಾ, ಮನೀಶ್ ಕುಮಾರ್ ಈ ನೋಟಿಸ್ ನೀಡಿದ್ದರು. ತಪ್ಪು ಮಾಹಿತಿ ನೀಡಿ ತೇಜ್ ಪ್ರತಾಪ್ ಪೆಟ್ರೋಲ್ ಪಂಪ್ ಪರವಾನಗಿ ಪಡೆದಿದ್ದಾರೆ ಎಂದು ದೂರಲಾಗಿತ್ತು. ಇದಕ್ಕೆ ಉತ್ತರಿಸಲು ೧೫ ದಿನಗಳ ಕಾಲಾವಕಾಶ ನೀಡಲಾಗಿತ್ತು. ಆ ಗಡವು ಮುಗಿದಿತ್ತು. 
ದೂರುದಾರನ ಪ್ರಕಾರ ಪೆಟ್ರೋಲ್ ಪಂಪ್ ಇರುವ ಜಾಗ ತಮಗೆ ಒಳಪಟ್ಟಿದ್ದು ಎಂದು ಸಚಿವ ಸುಳ್ಳು ಮಾಹಿತಿ ಒದಗಿಸಿದ್ದರು ಎಂದು ಆರೋಪಿಸಿದ್ದರು.
ಈಗ ಪರವಾನಗಿ ರದ್ದುಪಡಿಸಿದ್ದು, ಬಿಪಿಸಿಎಲ್ ನಿರ್ಧಾರ ಏಕಪಕ್ಷೀಯವಾಗಿದೆ ಎಂದು ತೇಜ್ ಪ್ರತಾಪ್ ಅವರ ಸಹೋದರ ಬಿಹಾರ ಉಪಮುಖ್ಯಮಂತ್ರಿ ತೇಜಸ್ವಿ ಯಾದವ್ ಹೇಳಿದ್ದಾರೆ. 
SCROLL FOR NEXT