ದೆಹಲಿಯಲ್ಲಿನ ಮೊಹಲ್ಲಾ ಕ್ಲಿನಿಕ್ ಚಿತ್ರ 
ಪ್ರಧಾನ ಸುದ್ದಿ

ಮುಂದಿನ ೬ ತಿಂಗಳಲ್ಲಿ ದೆಹಲಿಯಲ್ಲಿ ೧೦೦೦ ಮೊಹಲ್ಲಾ ಕ್ಲಿನಿಕ್ ಗಳು: ಲೆಫ್ಟಿನೆಂಟ್ ಗವರ್ನರ್

ದೆಹಲಿಯಲ್ಲಿ ಈಗಾಗಲೇ ೧೦೦ ಮೊಹಲ್ಲಾ ಕ್ಲಿನಿಕ್ ಗಳು ತಲೆಯೆತ್ತಿದ್ದು ಈ ಸಂಖ್ಯೆ ಮುಂದಿನ ಆರು ತಿಂಗಳುಗಳಲ್ಲಿ ೧೦೦೦ಕ್ಕೆ ಏರಲಿದೆ ಎಂದು ಲೆಫ್ಟಿನೆಂಟ್ ಗವರ್ನರ್ ಅನಿಲ್ ಬೈಜಾಲ್ ಸೋಮವಾರ

ನವದೆಹಲಿ: ದೆಹಲಿಯಲ್ಲಿ ಈಗಾಗಲೇ ೧೦೦ ಮೊಹಲ್ಲಾ ಕ್ಲಿನಿಕ್ ಗಳು ತಲೆಯೆತ್ತಿದ್ದು ಈ ಸಂಖ್ಯೆ ಮುಂದಿನ ಆರು ತಿಂಗಳುಗಳಲ್ಲಿ ೧೦೦೦ಕ್ಕೆ ಏರಲಿದೆ ಎಂದು ಲೆಫ್ಟಿನೆಂಟ್ ಗವರ್ನರ್ ಅನಿಲ್ ಬೈಜಾಲ್ ಸೋಮವಾರ ಹೇಳಿದ್ದಾರೆ. 
ಬಜೆಟ್ ಅಧಿವೇಶನದ ಮೊದಲ ದಿನವಾದ ಇಂದು ದೆಹಲಿ ವಿಧಾನಸಭೆಯನ್ನುದ್ದೇಶಿಸಿ ಮಾತನಾಡಿದ ಬೈಜಾಲ್, ಕಳೆದ ಎರಡು ವರ್ಷಗಳ ಆಮ್ ಆದ್ಮಿ ಪಕ್ಷ ಸರ್ಕಾರದ ಸಾಧನೆಗಳನ್ನು ಪಟ್ಟಿ ಮಾಡಿದರು. 
ಡಿಸೆಂಬರ್ ನಲ್ಲಿ ಅಧಿಕಾರ ಸ್ವೀಕರಿಸಿದ ನಂತರ ದೆಹಲಿ ವಿಧಾನಸಭೆಯನ್ನುದ್ದೇಶಿಸಿ ಬೈಜಾಲ್ ಮಾಡಿದ ಮೊದಲ ಭಾಷಣ ಇದು. 
ಆರೋಗ್ಯ ಮತ್ತು ಶಿಕ್ಷಣ ವಲಯಗಳನ್ನು ಪ್ರಾಥಮಿಕವಾಗಿ ದೃಷ್ಟಿಯಲ್ಲಿರಿಸಿಕೊಂಡಿರುವುದಾಗಿ ಹೇಳಿರುವ ಬೈಜಾಲ್ ೨೦ ಹೊಸ ಶಾಲೆಗಳಲ್ಲಿ ೮೦೦೦ ಹೊಸ ಶಾಲಾಕೊಠಡಿಗಳನ್ನು ಸರ್ಕಾರ ನಿರ್ಮಿಸುತ್ತಿದೆ ಮತ್ತು ಅವುಗಳಲ್ಲಿ ೧೪ ಶಾಲೆಗಳು ಸಂಪೂರ್ಣಗೊಂಡಿವೆ ಎಂದು ಹೇಳಿದ್ದಾರೆ. 
ವೈದ್ಯರು, ವೈದ್ಯಕೀಯ ಪರೀಕ್ಷೆ ಮತ್ತು ಉಚಿತ ಔಷಧಿ ಲಭ್ಯವಿರುವ ೧೦೦ ಮೊಹಲ್ಲಾ ಕ್ಲಿನಿಕ್ ಗಳನ್ನು ಸ್ಥಾಪಿಸಲಾಗಿದೆ ಮತ್ತು ಮುಂದಿನ ಆರು ತಿಂಗಳುಗಳಲ್ಲಿ ಈ ಸಂಖ್ಯೆಯನ್ನು ೧೦೦೦ಕ್ಕೆ ಹೆಚ್ಚಿಸುವ ಉದ್ದೇಶ ಇದೆ ಎಂದು ಕೂಡ ಹೇಳಿದ್ದಾರೆ. 
೧೨೨ ಪಾಲಿಕ್ಲಿನಿಕ್ ಗಳು -- ಹೆಚ್ಚುವರಿ ಆರೋಗ್ಯ ಕೇಂದ್ರಗಳ ಅಭಿವೃದ್ಧಿಯನ್ನು ಕೂಡ ಮುಂದಿನ ಒಂದು ವರ್ಷದಲ್ಲಿ ಸಂಪೂರ್ಣಗೊಳಿಸಲಾಗುವದು ಎಂದಿದ್ದಾರೆ. 
"ದೆಹಲಿ ಜನಕ್ಕೆ ಲಭ್ಯವಿರುವ ಆರೋಗ್ಯ ಸೌಲಭ್ಯಗಳನ್ನು ಹೆಚ್ಚಿಸುವತ್ತ ಇದ್ದ ಬದ್ಧತೆಯನ್ನು ಪೂರ್ಣಗೊಳಿಸಲು ನನ್ನ ಸರ್ಕಾರ ಕೆಲಸ ಮಾಡುತ್ತಿದೆ" ಎಂದು ಬೈಜಾಲ್ ಹೇಳಿದ್ದಾರೆ. 
೨೫ ನಿಮಿಷದ ಭಾಷಣದಲ್ಲಿ, ಬೈಜಾಲ್ ಕಾರ್ಮಿಕ ವರ್ಗಕ್ಕೆ ಕನಿಷ್ಠ ವೇತನವನ್ನು ಹೆಚ್ಚಿಸಿರುವುದರ ಬಗ್ಗೆ ಕೂಡ ಪ್ರಸ್ತಾಪಿಸಿದ್ದಾರೆ. ದೆಹಲಿ ಜಲ ಮಂಡಳಿಯ ಅಭಿಯಾನದ ಬಗ್ಗೆ ಕೂಡ ಅವರು ಮಾತನಾಡಿದ್ದು, ೧೧೭೫ ಅನಧಿಕೃತ ಕಾಲೋನಿಗಳಲ್ಲಿ ನೀರು ಸರಬರಾಜು ಸೌಲಭ್ಯ ನೀಡಲಾಗಿದೆ ಎಂದು ತಿಳಿಸಿದ್ದಾರೆ. ಪ್ರತಿ ಮನೆಗೂ ಉಚಿತವಾಗಿ ೨೦,೦೦೦ ಲೀಟರ್ ನೀರನ್ನು ಸರ್ಕಾರ ನೀಡುತ್ತಿರುವುದಾಗಿ ಕೂಡ ಅವರು ಹೇಳಿದ್ದಾರೆ. 
ದೆಹಲಿ ಮೆಟ್ರೋದ ನಾಲ್ಕನೇ ಹಂತಕ್ಕೆ ಸರ್ಕಾರ ಅನುಮತಿ ನೀಡಿದ್ದು ೨೦೨೧ ರೊಳಗೆ ಅದು ಸಂಪೂರ್ಣಗೊಳ್ಳಲಿದೆ ಎಂದು ಕೂಡ ಬೈಜಾಲ್ ಹೇಳಿದ್ದಾರೆ. "ಜೂನ್ ೨೦೧೭ ರೊಳಗೆ ದೆಹಲಿ ಮೆಟ್ರೋದ ಮೂರನೇ ಹಂತ ಸಂಪೂರ್ಣಗೊಳ್ಳಲಿದ್ದು, ಚಟುವಟಿಕೆಯ ಮಾರ್ಗ ೧೭೯ ಕಿಲೋಮೀಟರ್ ನಿಂದ ೩೩೦ ಕಿಲೋಮೀಟರ್ ಗೆ ಹೆಚ್ಚಲಿದೆ" ಎಂದಿದ್ದಾರೆ. 

Follow KannadaPrabha channel on WhatsApp

  

KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ

 

Subscribe to KannadaPrabha YouTube Channel and watch Videos

ಅಮೆರಿಕ ನಿಯೋಜಿತ ರಾಯಭಾರಿ ಸೆರ್ಗಿಯೊ ಗೋರ್- ಮೋದಿ, ಜೈಶಂಕರ್ ಭೇಟಿ; Tariff ಒತ್ತಡದ ನಡುವೆ ಭಾರತ-ಅಮೆರಿಕ ಸಂಬಂಧ ಸುಧಾರಣೆಯ ಸೂಚನೆ?

ಅಫ್ಘಾನಿಸ್ತಾನ ನಮ್ಮೊಂದಿಗೆ ಗಡಿ ಹಂಚಿಕೊಂಡಿರುವ ನೆರೆ ರಾಷ್ಟ್ರ- S Jaishankar; ಭಾರತದೊಂದಿಗೆ POK ವಿಲೀನದ ಸುಳಿವು; ಚೀನಾಗೂ ಶಾಕ್!

ಅಬ್ಬಬ್ಬಾ ರೋಮಾಂಚನ: ಅದ್ಭುತ ಸೃಷ್ಟಿಸಿದ ರಿಷಬ್ ಶೆಟ್ಟಿಗೆ ರಾಷ್ಟ್ರಪ್ರಶಸ್ತಿ ಕೊಡಲೇಬೇಕು - ತಮಿಳು ನಿರ್ದೇಶಕ ಅಟ್ಲೀ

Pakistan: ಇಸ್ರೇಲ್ ವಿರೋಧಿ ಪ್ರತಿಭಟನಾ ಜಾಥಾ, ಪೋಲೀಸರ ಗುಂಡೇಟಿಗೆ 11 ಮಂದಿ ಬಲಿ! Video

ಉತ್ತರ ಪ್ರದೇಶಕ್ಕೆ ಭೇಟಿ ನೀಡಿದ ತಾಲಿಬಾನ್ ಸಚಿವನಿಗೆ ಅದ್ಧೂರಿ ಸ್ವಾಗತ, ಸರ್ಕಾರದ ಭದ್ರತೆ; ಯೋಗಿಗೆ ನಾಚಿಕೆಯಾಗಬೇಕು- SP ಸಂಸದ ಶಫೀಕರ್

SCROLL FOR NEXT