ಪ್ರವಾಸ-ವಾಹನ

120 ಕಿಮೀ ಮೈಲೆಜ್ ನೀಡುವ ಪರಿಸರ ಸ್ನೇಹಿ ಇ-ಸ್ಕೂಟರ್ ಕ್ರೂಸರ್ ಬಿಡುಗಡೆ

Srinivasamurthy VN

ಬೆಂಗಳೂರು: ಒಂದು ಸಲ ಚಾರ್ಜ್ ಮಾಡಿದರೆ 120 ಕಿಮೀ ಮೈಲೆಜ್ ನೀಡುವ ಪರಿಸರ ಸ್ನೇಹಿ ಇ-ಸ್ಕೂಟರ್ 'ಕ್ರೂಸರ್' ಅನ್ನು ಒಕಿನವಾ ಸಂಸ್ಥೆಯು ಅನಾವರಣಗೊಳಿಸಿದೆ. 

ನೀತಿ ಆಯೋಗದ ಮಿಷನ್ ಆನ್ ಟ್ರ್ಯಾನ್ಸ್ ಫರ್ಮೆಟಿವ್ ಅಂಡ್ ಬ್ಯಾಟರಿ ಸ್ಟೋರೆಜ್ ನ ಮಿಷನ್ ಡೈರೆಕ್ಟರ್ ಆದ ಅನಿಲ್ ಶ್ರೀವಾಸ್ತವ ಇದನ್ನು ಅನಾವರಣ ಮಾಡಿದರು. ಮೇಕ್ ಇನ್ ಇಂಡಿಯಾದ ಪರಿಕಲ್ಪನೆಗೆ ಸಂಸ್ಥೆಯು ಬದ್ಧವಾಗಿದ್ದು ಈ ಪರಿಕಲ್ಪನೆಯ ಅಡಿಯಲ್ಲಿ ಇ-ಸ್ಕೂಟರ್ ಗಳನ್ನು ಹೊರತಂದಿದೆ.

ಇದೊಂದು ಮಾಕ್ಸಿ ಸ್ಕೂಟರ್ ಆಗಿದ್ದು ಇದರಲ್ಲಿ ಹೈ ಸ್ಪೀಡ್ ಚಾರ್ಜರ್ ಅಳವಡಿಸಲಾಗಿದೆ. ಪರಿಣಾಮ ಕೇವಲ 2-3 ಗಂಟೆಯಲ್ಲಿ ಬ್ಯಾಟರಿಯನ್ನು ಸಂಪೂರ್ಣವಾಗಿ ಚಾರ್ಜ್ ಮಾಡಬಹುದು. ಈ ಸ್ಖೂಟರ್ ನ ಟಾಪ್ ಸ್ಪೀಡ್ 100 ಕಿಮೀ ಆಗಿದೆ. ಕಳಚಬಹುದಾದ 4 ಕೆಡಬ್ಲ್ಯುಎಚ್‌ ಲಿಥಿಯಂ ಐಯಾನ್ ಬ್ಯಾಟರಿಯನ್ನು ಈ ಸ್ಕೂಟರ್ ಹೊಂದಿದೆ. ಚಾರ್ಜ್ ಖಾಲಿ ಆಗುತ್ತೆ ಎನ್ನುವುದರ ಬಗ್ಗೆ ಚಿಂತಿಸದೆ ಕೇವಲ ಒಂದು ಸಲ ಚಾರ್ಜ್ ಮಾಡಿ ನಗರ ಪೂರ್ತಿ ಸುತ್ತಾಡಬಹುದು. 

"ಇಲೆಕ್ಟ್ರಿಕ್ ವಾಹನ ತಯಾರಿಕೆಯಲ್ಲಿ ಕ್ರಾಂತಿ ತರುವ ನಿಟ್ಟಿನಲ್ಲಿ ಒಕಿನವಾ ಸಂಸ್ಥೆಯು ಶ್ರಮಿಸುತ್ತಿದೆ. ನಮ್ಮ ಉತ್ಪನ್ನಗಳನ್ನು ಪರಿಚಯಿಸಲು ಆಟೋ ಎಕ್ಸ್ ಪೋ ಉತ್ತಮ ವೇದಿಕೆ ಒದಗಿಸುತ್ತದೆ. ಗ್ರಾಹಕರಿಗೆ ಅಗತ್ಯವಿರುವ ಸವಲತ್ತುಗಳ ಕಡೆಗೆ ಒತ್ತು ನೀಡುವುದು ಸಂಸ್ಥೆಯ ಗುರಿ ಮತ್ತು ಇದು ನಮಗೆ ಹೊಸತನಕ್ಕೆ ದಾರಿ ಒದಗಿಸುತ್ತದೆ." ಎಂದು ಒಕಿನವಾ ಸಂಸ್ಥೆಯ ಸಂಸ್ಥಾಪಕ ಮತ್ತು ವ್ಯವಸ್ಥಾಪಕ ನಿರ್ದೇಶಕ ಜೀತೆಂದರ್ ಶರ್ಮ ಹೇಳಿದರು.

SCROLL FOR NEXT