ಬೆಂಗಳೂರು: ಬೆಂಗಳೂರಿನಿಂದ ಈಶಾನ್ಯ ಭಾರತದ ಬೆಟ್ಟಗಳ ಸೌಂದರ್ಯ ನೋಡಬೇಕು ಎಂದುಕೊಂಡವರಿಗೆ IRCTC ದು ಅದ್ಭುತ ಅವಕಾಶ ತಂದಿದೆ.! ಸ್ಪ್ಲೆಂಡರ್ಸ್ ಆಫ್ ನಾರ್ತ್ ಈಸ್ಟ್ ಎಕ್ಸ್ ಬೆಂಗಳೂರು ಹೆಸರಿನ ಈ ವಿಶೇಷ ಪ್ಯಾಕೇಜ್ ನವೆಂಬರ್ 17 ರಂದು ಶುರುವಾಗಲಿದೆ. ಕೇವಲ 5 ರಾತ್ರಿ 6 ಹಗಲು ಅವಧಿಯಲ್ಲಿ ಕಲಿಂಪಾಂಗ್, ಗ್ಯಾಂಗ್ಟಕ್ ಮತ್ತು ಡಾರ್ಜಿಲಿಂಗ್ ನಂತಹ ಪ್ರಸಿದ್ಧ ತಾಣಗಳನ್ನು ನೋಡಬಹುದು. ವಿಮಾನ ಪ್ರಯಾಣ, ಉಳಿದುಕೊಳ್ಳುವ ವ್ಯವಸ್ಥೆ, ಊಟ ಎಲ್ಲವೂ ಒಂದೇ ಪ್ಯಾಕೇಜ್ ನಲ್ಲಿ ಸಿಗುವುದರಿಂದ ಕುಟುಂಬ ಸಮೇತ ಆರಾಮವಾಗಿ ಪ್ರವಾಸ ಮಾಡಬಹುದು. ಆ ಕುರಿತ ವರದಿ ಇಲ್ಲಿದೆ:
ಪ್ರಯಾಣದ ವಿವರ:
ನವೆಂಬರ್ 17 ರಂದು ಬೆಳಿಗ್ಗೆ 9 ಗಂಟೆ 10 ನಿಮಿಷಕ್ಕೆ ಬೆಂಗಳೂರಿನ ಕೆಂಪೇಗೌಡ ವಿಮಾನ ನಿಲ್ದಾಣದಿಂದ 6e443 ವಿಮಾನ ಹೊರಡುತ್ತದೆ. ಮಧ್ಯಾಹ್ನ 11 ಗಂಟೆ 50 ನಿಮಿಷಕ್ಕೆ ಬಾಗ್ಡೋಗ್ರಾ ತಲುಪುತ್ತದೆ. ವಾಪಸ್ ನವೆಂಬರ್ 22 ರಂದು ಮಧ್ಯಾಹ್ನ 12 ಗಂಟೆ 30 ನಿಮಿಷಕ್ಕೆ ಬಾಗ್ಡೋಗ್ರಾದಿಂದ 6e445 ವಿಮಾನ ಹೊರಟು ಸಂಜೆ 3 ಗಂಟೆ 45 ನಿಮಿಷಕ್ಕೆ ಬೆಂಗಳೂರು ತಲುಪುತ್ತದೆ. ಪ್ರಯಾಣಿಕರು ವಿಮಾನ ನಿಲ್ದಾಣಕ್ಕೆ ಕನಿಷ್ಠ 2 ಗಂಟೆ ಮೊದಲೇ ತಲುಪಬೇಕು.
ದಿನವಾರು ಪ್ರವಾಸ ಹೇಗಿರುತ್ತದೆ?
ದಿನ 1: ಗುಹಾವಟಿಗೆ ತಲುಪಿದ ನಂತರ ಹೋಟೆಲ್ ಗೆ ಚೆಕ್ ಇನ್. ಸಂಜೆ ಬ್ರಹ್ಮಪುತ್ರ ನದಿ ದಡದಲ್ಲಿ ಸಮಯ ಕಳೆಯಬಹುದು.
ದಿನ 2: ಗುಹಾವಟಿ - ಶಿಲ್ಲಾಂಗ್. ಬೆಳಗ್ಗೆ ಕಾಮಾಖ್ಯ ದೇವಸ್ಥಾನ ದರ್ಶನ, ನಂತರ ಉಮಿಯಂ ಸರೋವರ ನೋಡಿಕೊಂಡು ಶಿಲ್ಲಾಂಗ್ ಗೆ ಪ್ರಯಾಣ.
ದಿನ 3: ಶಿಲ್ಲಾಂಗ್ - ಚಿರಾಪುಂಜಿ - ಶಿಲ್ಲಾಂಗ್. ಎಲಿಫೆಂಟ್ ಫಾಲ್ಸ್, ನೋಹ್ಕಲಿಕಾಯ್ ಜಲಪಾತ, ಮಾವ್ಸ್ ಮಾಯಿ ಗುಹೆ, ಸೆವೆನ್ ಸಿಸ್ಟರ್ಸ್ ಫಾಲ್ಸ್ ದರ್ಶನ.
ದಿನ 4: ಶಿಲ್ಲಾಂಗ್ - ಡಾವ್ಕಿ - ಮಾವ್ಲಿನ್ನಾಂಗ್ - ಶಿಲ್ಲಾಂಗ್. ಬಾಂಗ್ಲಾದೇಶ ಗಡಿಯಲ್ಲಿರುವ ಡಾವ್ಕಿ ನದಿಯಲ್ಲಿ ಬೋಟಿಂಗ್ ಮತ್ತು ಏಷ್ಯಾದ ಅತ್ಯಂತ ಸ್ವಚ್ಛ ಗ್ರಾಮ ಮಾವ್ಲಿನ್ನಾಂಗ್ ಭೇಟಿ.
ದಿನ 5: ಶಿಲ್ಲಾಂಗ್ - ಗುಹಾವಟಿ. ವಾಪಸ್ ಬರುವಾಗ ಶಿಲ್ಲಾಂಗ್ ಪೀಕ್, ಸ್ಥಳೀಯ ಮಾರುಕಟ್ಟೆಯಲ್ಲಿ ಶಾಪಿಂಗ್.
ದಿನ 6: ಗುಹಾವಟಿಯಿಂದ ವಾಪಸ್. ಬೆಳಗಿನ ಉಪಹಾರದ ನಂತರ ಏರ್ ಪೋರ್ಟ್ ಅಥವಾ ರೈಲ್ವೆ ಸ್ಟೇಷನ್ ಗೆ ಡ್ರಾಪ್.
ಹಾಗಾದ್ರೆ, ವಸತಿ ಮತ್ತು ಪ್ಯಾಕೇಜ್ ಬೆಲೆ ಎಷ್ಟು?
ಕಲಿಂಪಾಂಗ್ ನಲ್ಲಿ ಗೋಲ್ಡನ್ ಸ್ಟರ್ಲಿಂಗ್ ಪಾರ್ಕ್, ಗ್ಯಾಂಗ್ಟಕ್ ನಲ್ಲಿ ಹೋಟೆಲ್ ಸಮಿಟ್ ನಮ್ನಾಂಗ್, ಡಾರ್ಜಿಲಿಂಗ್ ನಲ್ಲಿ ಹೋಟೆಲ್ ಸಮಿಟ್ ಹರ್ಮನ್ ಅಥವಾ ಇದೇ ಮಟ್ಟದ ಹೋಟೆಲ್ ನಲ್ಲಿ ವಸತಿ ಇರುತ್ತದೆ. ಒಬ್ಬರಿಗೆ 61,200 ರೂಪಾಯಿ, ಇಬ್ಬರು ಒಟ್ಟಿಗೆ ಇದ್ದರೆ ತಲಾ 46,750 ರೂಪಾಯಿ, ಮೂವರು ಇದ್ದರೆ ತಲಾ 45,500 ರೂಪಾಯಿ. 5 ರಿಂದ 11 ವರ್ಷದ ಮಕ್ಕಳಿಗೆ ಹಾಸಿಗೆ ಸಹಿತ 43,100 ರೂಪಾಯಿ, ಹಾಸಿಗೆ ರಹಿತ 40,800 ರೂಪಾಯಿ. 2 ರಿಂದ 4 ವರ್ಷದ ಮಕ್ಕಳಿಗೆ 31,500 ರೂಪಾಯಿ. ಒಟ್ಟು 29 ಸೀಟುಗಳು ಮಾತ್ರ ಇವೆ.
ಪ್ಯಾಕೇಜ್ ನಲ್ಲಿ ಏನಿದೆ, ಏನಿಲ್ಲ?
ಪ್ಯಾಕೇಜ್ ನಲ್ಲಿ ಬೆಂಗಳೂರು ಬಾಗ್ಡೋಗ್ರಾ ವಿಮಾನ ಟಿಕೆಟ್, 5 ರಾತ್ರಿ ಹೋಟೆಲ್ ವಸತಿ, ಬೆಳಗಿನ ಉಪಾಹಾರ ಮತ್ತು ರಾತ್ರಿ ಊಟ, ವಾಹನ ವ್ಯವಸ್ಥೆ, ಪ್ರಯಾಣ ವಿಮೆ ಮತ್ತು ಜಿಎಸ್ ಟಿ ಸೇರಿದೆ. ಪ್ರವೇಶ ಶುಲ್ಕ, ನಾಥುಲಾ ಪಾಸ್ ಪ್ರವಾಸ, ಗೈಡ್ ಶುಲ್ಕ, ಟಿಪ್ಸ್ ಮತ್ತು ವೈಯಕ್ತಿಕ ಖರ್ಚು ಸೇರಿಲ್ಲ. ರದ್ದತಿಗೆ ನಿಯಮದಂತೆ ಶುಲ್ಕ ಇರುತ್ತದೆ. ಆಸಕ್ತರು ಬೇಗ ಬುಕ್ ಮಾಡುವುದು ಒಳ್ಳೆಯದು.