ಕೋಲ್ಕತ್ತಾದಲ್ಲಿ ಟ್ರೇನಿ ವೈದ್ಯೆಯ ಅತ್ಯಾಚಾರ ಮತ್ತು ಹತ್ಯೆಯ ಕುರಿತು ತನಿಖೆ ಮತ್ತು ಪ್ರತಿಭಟನೆಗಳು ಮುಂದುವರೆದಿದೆ. ಈಮಧ್ಯೆ, ಆರೋಪಿ ಸಂಜಯ್ ರಾಯ್ ಅವರ ಅತ್ತೆ, ಆರೋಪಿಯು ತನ್ನ ಮಾಜಿ ಪತ್ನಿ ಅಂದರೆ ನನ್ನ ಮಗಳನ್ನು ಹೊಡೆಯುತ್ತಿದ್ದನು ಎಂದು ಹೇಳಿದ್ದಾರೆ.
ಸಂಜಯ್ ರಾಯ್ ತನ್ನ ಮೂರು ತಿಂಗಳ ಗರ್ಭಿಣಿ ಹೆಂಡತಿಯನ್ನು ಹೊಡೆದರು ಮತ್ತು ಅದರಿಂದಾಗಿ ಆಕೆಗೆ ಗರ್ಭಾಪಾತವಾಯಿತು ಎಂದು ಅವರು ಆರೋಪಿಸಿದ್ದಾರೆ. ಅವನು ಮಾಡಿರುವ ಅಪರಾಧಕ್ಕಾಗಿ ಆತನನ್ನು ಗಲ್ಲಿಗೇರಿಸಬೇಕು ಎಂದು ಅವರು ಆಗ್ರಹಿಸಿದರು.
ಆದಾಗ್ಯೂ, ಆರ್‌ಜಿ ಕರ್ ವೈದ್ಯಕೀಯ ಕಾಲೇಜು ಮತ್ತು ಆಸ್ಪತ್ರೆಯಲ್ಲಿ 31 ವರ್ಷದ ಟ್ರೈನಿ ವೈದ್ಯೆಯ ಅತ್ಯಾಚಾರ ಮತ್ತು ಕೊಲೆಯಲ್ಲಿ ಹೆಚ್ಚಿನ ಜನರು ಭಾಗಿಯಾಗಿರಬಹುದು. ಏಕೆಂದರೆ ಸಂಜಯ್ ರಾಯ್ ಒಬ್ಬನೆ ಮಾತ್ರ ಇದನ್ನು ಮಾಡಲು ಸಾಧ್ಯವಿಲ್ಲ ಎಂದು ಅವರು ಹೇಳಿದರು.