ಶಿವಣ್ಣನ ಸರ್ಜರಿ ಸಕ್ಸಸ್: ವೈದ್ಯರು ನಮ್ಮ ಪಾಲಿನ ದೇವರು ಎಂದ 'ಗೀತಕ್ಕ'!
ಚಿಕಿತ್ಸೆಗಾಗಿ ಅಮೆರಿಕಕ್ಕೆ ತೆರಳಿದ್ದ ಹ್ಯಾಟ್ರಿಕ್ ಹೀರೋ ಶಿವರಾಜ್ ಕುಮಾರ್ ಅವರ ಶಸ್ತ್ರಚಿಕಿತ್ಸೆ ಯಶಸ್ವಿಯಾಗಿದ್ದು, ಈ ಬಗ್ಗೆ ಮಾಹಿತಿ ನೀಡಿರುವ ಗೀತಾ ಶಿವರಾಜ್ ಕುಮಾರ್ ಅವರು, 'ವೈದ್ಯರು ನಮ್ಮ ಪಾಲಿನ ದೇವರು.. ನಿಮ್ಮ ಪ್ರೀತಿ ವಿಶ್ವಾಸಕ್ಕೆ ಚಿರಋಣಿ ಎಂದು ಹೇಳಿದ್ದಾರೆ.