ತಿರುಮಲ ದೇಗುಲದ ಕಲಬೆರಕೆ ಲಡ್ಡು ಪ್ರಸಾದ ವಿವಾದ ಬೆನ್ನಲ್ಲೇ ಅಯೋಧ್ಯೆ ರಾಮಮಂದಿರಕ್ಕೂ ಕೊಬ್ಬು ಮಿಶ್ರಿತ ಲಡ್ಡು ಪೂರೈಕೆಯಾಗಿತ್ತು ಎಂಬ ವಾದ ಕೇಳಿಬಂದಿದೆ. ರಾಮಮಂದಿರ ಉದ್ಘಾಟನಾ ಕಾರ್ಯಕ್ರಮಕ್ಕೆ ತಿರುಮಲದಿಂದ ಟಿಟಿಡಿ ಸುಮಾರು 1 ಲಕ್ಷ ಲಡ್ಡುಗಳನ್ನು ರವಾನೆ ಮಾಡಿತ್ತು. ಈ ಲಡ್ಡುಗಳೂ ಕೂಡ ಕಲಬೆರಕೆ ಲಡ್ಡುಗಳಾಗಿತ್ತೇ ಎಂಬ ಅನುಮಾನ ಮೂಡುತ್ತಿದೆ.