ಪಹಲ್ಗಾಮ್ ಭಯೋತ್ಪಾದಕ ದಾಳಿಯ ನಂತರದ ಘಟನೆಗಳ ಕುರಿತು ಶಶಿ ತರೂರ್ ಅವರ ಹೇಳಿಕೆಗಳಿಗೆ ಕಾಂಗ್ರೆಸ್ ನಾಯಕ ಉದಿತ್ ರಾಜ್ ತೀಕ್ಷ್ಣವಾಗಿ ಪ್ರತಿಕ್ರಿಯಿಸಿದ್ದು, ಅವರ ರಾಜಕೀಯ ನಿಷ್ಠೆಯನ್ನು ಪ್ರಶ್ನಿಸಿದ್ದಾರೆ.
"ನಾನು ಶಶಿ ತರೂರ್ ಅವರನ್ನು ಕೇಳಲು ಬಯಸುತ್ತೇನೆ, ಅವರು ಕಾಂಗ್ರೆಸ್ ಪಕ್ಷದಲ್ಲಿದ್ದಾರೆಯೇ ಅಥವಾ ಬಿಜೆಪಿಯಲ್ಲಿದ್ದಾರೆಯೇ? ಅವರು ಸೂಪರ್-ಬಿಜೆಪಿ ವ್ಯಕ್ತಿಯಾಗಲು ಪ್ರಯತ್ನಿಸುತ್ತಿದ್ದಾರೆಯೇ?
ಸರ್ಕಾರ ಪಿಒಕೆಯನ್ನು ಯಾವಾಗ ತನ್ನ ವಶಕ್ಕೆ ತೆಗೆದುಕೊಳ್ಳುತ್ತಿದೆ ಎಂದು ಶಶಿ ತರೂರ್ ಬಿಜೆಪಿಯನ್ನು ಕೇಳಬೇಕು.
ಶಶಿ ತರೂರ್ ಬಿಜೆಪಿಯ ವಕ್ತಾರರಾಗಿದ್ದಾರೆಯೇ?" ಎಂದು ಉದಿತ್ ರಾಜ್ ವಾಗ್ದಾಳಿ ನಡೆಸಿದ್ದಾರೆ.
ಯಾವುದೇ ದೇಶವು ಎಂದಿಗೂ ಶೇ. 100 ರಷ್ಟು ಗುಪ್ತಚರ ಮಾಹಿತಿ ಹೊಂದಲು ಸಾಧ್ಯವಿಲ್ಲ" ಎಂದು ಶಶಿ ತರೂರ್ ಭಾನುವಾರ ಹೇಳಿದ್ದರು. ವಿಡಿಯೋ ಇಲ್ಲಿದೆ ನೋಡಿ.