ಧರ್ಮಸ್ಥಳ ಬಳಿಯ ಬಂಗ್ಲಾಗುಡ್ಡೆ ಅರಣ್ಯ ಪ್ರದೇಶದಲ್ಲಿ ಇತ್ತೀಚೆಗೆ ಅಸ್ಥಿಪಂಜರ ಅವಶೇಷಗಳು ಪತ್ತೆಯಾದ ನಂತರ ವಿಶೇಷ ತನಿಖಾ ತಂಡ ಮಂಗಳವಾರ ಕಾರ್ಯಾಚರಣೆಯನ್ನು ತೀವ್ರಗೊಳಿಸಿದೆ.
ಸೋಮವಾರ ನಡೆದ ಉತ್ಖನನ ವೇಳೆ ಸುಮಾರು 100 ಮೂಳೆಗಳು ಮತ್ತು ತಲೆಬುರುಡೆ ಪತ್ತೆಯಾಗಿದೆ.
ಆರನೇ ದಿನದಲ್ಲಿ ದೂರುದಾರ ತೋರಿಸಿದ 11ನೇ ಸ್ಥಳದಿಂದ ಸುಮಾರು 100 ಮೀಟರ್ ಅಂತರದಲ್ಲಿ ಈ ಮಾನವ ಅವಶೇಷಗಳು ಪತ್ತೆಯಾಗಿವೆ ಎಂದು ಎಸ್ ಐಟಿ ಮೂಲಗಳು ಹೇಳಿವೆ.
ಸ್ಥಳದ ಸುತ್ತಲಿನ ನಿಗೂಢತೆಯ ತನಿಖೆ ಮುಂದುವರೆದಂತೆ ಪ್ರದೇಶದ ಸುತ್ತಲೂ ಭದ್ರತೆಯನ್ನು ಹೆಚ್ಚಿಸಲಾಗಿದೆ. ವಿಡಿಯೋ ಇಲ್ಲಿದೆ ನೋಡಿ.