ಅಸ್ಸಾಂ ಮುಖ್ಯಮಂತ್ರಿ ಹಿಮಂತ ಬಿಸ್ವಾ ಶರ್ಮಾ ತಮ್ಮನ್ನು ತಾವು 'ರಾಜ' ಅಂದ್ಕೊಂಡಿದ್ದರೂ, ಭ್ರಷ್ಟಾಚಾರಕ್ಕಾಗಿ ಅವರನ್ನು ಜೈಲಿಗೆ ಹಾಕಲಾಗುವುದು ಎಂದು ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ಬುಧವಾರ ಹೇಳಿದ್ದರು.
ಈ ಹೇಳಿಕೆಗೆ ತೀಕ್ಷ್ಣವಾಗಿ ತಿರುಗೇಟು ನೀಡಿರುವ ಅಸ್ಸಾಂ ಸಿಎಂ ಹಿಮಂತ ಶರ್ಮಾ ಬಿಸ್ವಾ ಸಾಕ್ಷ್ಯಧಾರ ಸಿಕ್ಕರೆ ರಾಹುಲ್ ಗಾಂಧಿಯನ್ನೇ ಜೈಲಿಗಟ್ಟುತ್ತೇನೆ ಎಂದಿದ್ದಾರೆ.
ನನಗಿಂತ ಮೊದಲು ರಾಹುಲ್ ಜೈಲಿಗೆ ಹೋಗುವುದಿಲ್ಲ ಎನ್ನುವುದಕ್ಕೆ ಏನು ಗ್ಯಾರಂಟಿ ಎಂದು ಹಿಮಂತ ಪ್ರಶ್ನಿಸಿದ್ದಾರೆ. ವಿಡಿಯೋ ಇಲ್ಲಿದೆ ನೋಡಿ.