ಒಡಿಶಾದ ಭುವನೇಶ್ವರದ ಸೋನಾಲಿಶಾ ಮೊಹಾಂತಾ ತಮ್ಮ ಅಸಾಧಾರಣ ಸಾಮರ್ಥ್ಯದಿಂದ ಎಲ್ಲರನ್ನೂ ಅಚ್ಚರಿಗೊಳಿಸಿದ್ದಾರೆ.
ಕಣ್ಣಿಗೆ ಬಟ್ಟೆ ಕಟ್ಟಿಕೊಂಡು ಓದಿದ ಸೋನಾಲಿಶಾ NEET-UG ಪರೀಕ್ಷೆಯಲ್ಲಿ ಅದ್ಭುತ ಸಾಧನೆ ಮಾಡಿ 616 ಅಂಕ ಗಳಿಸಿದ್ದಾಳೆ.
ಅವರ ಸಾಧನೆಯು ಅವರ ಕಠಿಣ ಪರಿಶ್ರಮವನ್ನು ಮಾತ್ರವಲ್ಲದೆ ಅವರ ಅಸಾಧಾರಣ ಸಂವೇದನಾ ಸಾಮರ್ಥ್ಯವನ್ನು ಸಹ ತೋರಿಸುತ್ತದೆ.
ಸವಾಲುಗಳ ನಡುವೆಯೂ ತಮ್ಮ ಕನಸುಗಳನ್ನು ಸಾಧಿಸುವ ಉತ್ಸಾಹ ಹೊಂದಿರುವ ವಿದ್ಯಾರ್ಥಿಗಳಿಗೆ ಸೋನಾಲಿಶಾ ಅವರ ಕಥೆ ಸ್ಫೂರ್ತಿಯಾಗಿದೆ.
ತಮ್ಮ ಸಾಧನೆ ಬಗ್ಗೆ ಸೋನಾಲಿಶಾ ಮೊಹಂತಾ ಮತ್ತು ಅವರ ತಂದೆ ಸಹದೇವ್ ಮೊಹಂತಾ ಮಾಧ್ಯಮಗಳೊಂದಿಗೆ ಮಾತನಾಡಿದರು. ವಿಡಿಯೋ ಇಲ್ಲಿದೆ ನೋಡಿ.