ಮನೆಯ ಅಂದ ಬರೀ ಬಣ್ಣಗಳಿಂದ ಎನ್ನುವುದು ಸುಳ್ಳು. ಇತರೆ ವಸ್ತುಗಳಿಂದಲೂ ಅದು ತನ್ನ ಸೌಂದರ್ಯವನ್ನು ಹೆಚ್ಚಿಸುತ್ತದೆ. ಅದರಲ್ಲಿ ಪರದೆಗಳ ಪಾತ್ರವೂ ಅಷ್ಟೇ ಪ್ರಮುಖವಾಗಿವೆ.
ಮನೆ ಹಳೆಯದಾದರೇನು... ಹೊಸದಾದರೇನು? ಪರದೆ ಕೆ ಆಚೆ ಈಚೆ ಎಲ್ಲವೂ ಮನೆಯ ಅಂದವನ್ನು ಹೆಚ್ಚಿಸುತ್ತದೆ. ಮನೆ ಚೆಂದವಿದ್ದರೆ ಸಾಲದು, ಅದಕ್ಕೆ ಹೊಂದುವ ಪರದೆಗಳೂ ಬೇಕು. ಅಗತ್ಯವಿರುವ ಭಾಗಗಳನ್ನು ಪರದೆಯಿಂದ ಅಲಂಕರಿಸುವುದು ಕೂಡ ಮನೆಯ ಅಂದಚೆಂದವನ್ನು ಇನ್ನಷ್ಟು ಹೆಚ್ಚಿಸುತ್ತದೆ. ಹೊಸ ಪ್ಯಾಟರ್ನ್ ಪರದೆಗಳು ಇಂದು ಮನೆಯ ಸೌಂದರ್ಯವನ್ನೇ ಬದಲಿಸುತ್ತಿವೆ.
ಕರ್ಟೈನ್‌ಗಳು ಸಾದಾ-ಸೀದಾ ಅತಿ ಬೆಳಕನ್ನು ಮರೆಮಾಚಲು ಬಳಸುತ್ತಿದ್ದ ಯೋಚನೆಗೀಗ ಹೊಸ ಆವಿಷ್ಕಾರ ಈ ಕುಚ್ಚು ಕುಚ್ಚು ಪರದೆಗಳು! ಕುಚ್ಚಿನ ಅಪರಾವತಾರದಲ್ಲಿ ಪರದೆಗಳು ಇಂದು ಮಾರುಕಟ್ಟೆಗೆ ಲಗ್ಗೆ ಇಟ್ಟಿವೆ. ಜಮಾನಕ್ಕೆ ತಕ್ಕುದಾಗಿ ಇವುಗಳ ವಿನ್ಯಾಸಗಳಲ್ಲೂ ಹೊಸ ಮಾದರಿಗಳು ಲಭ್ಯ. ಇವು ಇದ್ದರೂ ಇರದಂತೆ, ಕಂಡರೂ ಕಾಣದಂತೆ, ಹಾಕಿರುವ ಜಾಗದಲ್ಲಿ ಹೊಸ ಲುಕ್ ನೀಡುತ್ತವೆ. ಇವುಗಳ ಆಯ್ಕೆಯಲ್ಲಿ (ಸ್ಟ್ರೇಟೆಡ್ ಲೆಂಥ್) ಮೇಲಿಂದ ಕೆಳಗಿನವರೆಗೂ ಸಾದಾ ಇದ್ದು, ಕೊನೆಯಲ್ಲಿ ಕುಚ್ಚು ಇರುವುದು ಮತ್ತು ಮೇಲೆ- ಕೆಳಗೆ ಎರಡೂ ಬದಿಯಲ್ಲೂ ಕುಚ್ಚು ಇರುವಂಥವು ಲಭ್ಯ. ಆಯ್ಕೆ ಮಾತ್ರ ಮನೆಯ ರೀತಿ-ನೀತಿಗೆ ತಕ್ಕಂತೆ ಆಯ್ಕೆದಾರರಿಗೆ ಬಿಟ್ಟದ್ದು.
ಕರ್ಟೈನ್ ಅಲಂಕಾರ
ಹಳೆಯ ಗೋಡೆ, ಕಿಟಕಿ- ಗಾಜುಗಳನ್ನು ಮುಚ್ಚಲು ಲಾಂಗ್ ಲೆಂಥಿಂಗ್ ಕರ್ಟೈನ್‌ಗಳು ಸೂಕ್ತ. ಇದು ಮನೆಯ ಪೇಂಟಿಂಗ್‌ಗೆ ಹೊಂದುವಂತಿದ್ದರೆ ಮತ್ತಷ್ಟು ಚೆಂದ.
ಡಾರ್ಕ್ ವ್ಯಾನಿಷ್ ಬಣ್ಣಗಳಿಗೆ ಮೆರೂನ್, ಡಾರ್ಕ್ ಸಿಮೆಂಟ್ ಕಲರ್‌ಗಳು ಹೆಚ್ಚಾಗಿ ಹೊಂದುತ್ತವೆ.
ಬಿಳಿ ಗೋಡೆಗೆ ಹೆಚ್ಚಾಗಿ ಮೆರೂನ್ ಮತ್ತು ಡಾರ್ಕ್ ಕಲರ್‌ಗಳು ಹೆಚ್ಚಾಗಿ ಹೊಂದಿಕೆಯಾಗುತ್ತವೆ.
ಪ್ರಕಿರಣ ಬೆಳಕನ್ನು ತಡೆಯಲಾದರೆ, ಲೈಟ್ ಕಲರ್‌ಗಳ ಆಯ್ಕೆ ಒಳ್ಳೆಯದು.
ಮನೆಗೆ ಚೆಂದಕ್ಕೆ ಹೊಸ ರೂಪ ನೀಡಲು ಗ್ರಾಂಡ್ ಟಚ್ ಇರುವ ಡಿಸೈನ್, ಫ್ಯಾಬ್ರಿಕ್ ಪ್ರಿಂಟೆಂಡ್ ಪರದೆಗಳು ಹೆಚ್ಚು ಸೂಕ್ತ. ಅಲ್ಲದೆ ರಿಚ್ ಲುಕ್ ನೀಡಲು ಗ್ರ್ಯಾಂಡ್ ಪ್ರಿಂಟೆಡ್‌ನಲ್ಲಿ ಫ್ಲವರ್, ಡಬಲ್ ಸ್ಟ್ರೆಚ್ಡ್ ಮತ್ತು ರಿಚ್ ಎನಿಸಿದರೆ ಇವುಗಳ ಸೆಲೆಕ್ಷನ್ ಫ್ಯಾಬ್ರಿಕ್ ಪ್ರಿಂಟಿಂಗ್‌ನಲ್ಲಿ ಡಾಟ್ಸ್, ಸ್ಟ್ರೇಟೆಡ್ ಕಟ್ಸ್ ಮುಂತಾದ ವಿನ್ಯಾಸಗಳು ಚೆನ್ನಾಗಿ ಒಪ್ಪುತ್ತವೆ.
ಡೈನಿಂಗ್ ಹಾಲ್‌ಗೆ ಹೆಚ್ಚು ಲೈಟ್ ಅಲ್ಲದ ಅಷ್ಟೇ ಡಾರ್ಕ್ ಕೂಡ ಅನಿಸದ ಕಲರ್‌ಗಳು, ಗೋಲ್ಡ್- ಬ್ರೌನಿಶ್ ಬಣ್ಣಗಳು ಹೆಚ್ಚು ಸೂಕ್ತ.
ವಾಶ್‌ರೂಂ, ಲಿವಿಂಗ್ ರೂಂಗಳಿಗೆ ಪ್ಲೇನ್ ಸೆಲೆಕ್ಷನ್ ಹೆಚ್ಚು ಸೂಕ್ತ.
ಮಕ್ಕಳ ಕೋಣೆಗಳಿಗಂತೂ ಹಲವು ಚಿತ್ರಗಳುಳ್ಳ, ಪ್ರಿಂಟೆಡ್ ಡಬಲ್ ಕೋಟೆಡ್, ಲೈಟ್ ಕಲರ್‌ಗಳು ಹೊಂದುತ್ತವೆ.
-ಭಾಗ್ಯ ಗೌಡ