ಮಹಿಳೆ-ಮನೆ-ಬದುಕು

ರಕ್ತ ಚರಿತೆ

ಇತ್ತೀಚಿನ ದಿನಗಳಲ್ಲಿ ಮಹಿಳೆ ಹಾಗೂ ಮಕ್ಕಳಲ್ಲಿ ಹೆಚ್ಚಾಗಿ ಕಾಣಿಸಿಕೊಳ್ಳುತ್ತಿರುವ ಮುಖ್ಯ ತೊಂದರೆ ರಕ್ತಹೀನತೆ. ನಿಶ್ಯಕ್ತಿ, ಬಳಲಿಕೆ ಇತ್ಯಾದಿ ಕಾರಣಗಳಿಂದ ದಿನನಿತ್ಯ ಆಸ್ಪತ್ರೆಗೆ ದಾಖಲಾಗುತ್ತಿರುವವರನ್ನು ನಾವು ಕಾಣುತ್ತೇವೆ. ನಮ್ಮ ದೇಶದಲ್ಲಿ ಸರ್ವೇಸಾಮಾನ್ಯವಾಗಿ ಕಂಡುಬರುವ ರಕ್ತಹೀನತೆಗೆ ಕಬ್ಬಿಣದ ಅಂಶ ಹಾಗೂ ವಿಟಮಿನ್‌ಗಳ ಕೊರತೆ ಮುಖ್ಯ ಕಾರಣ. ಇಂಥವರು ತಜ್ಞ ವೈದ್ಯರಿಂದ ಚಿಕಿತ್ಸೆಯನ್ನು ಪಡೆದುಕೊಳ್ಳಬೇಕು. ಇಂತಹ ಸಂದರ್ಭದಲ್ಲಿ ರಕ್ತಹೀನತೆಯಂಥ ಪರಿಸ್ಥಿತಿಯನ್ನು ಹೇಗೆ ನಿಭಾಯಿಸಬೇಕೆಂದು ತಿಳಿದುಕೊಳ್ಳುವುದೂ ಅಷ್ಟೇ ಅವಶ್ಯಕ.
ಶೇಖರಿಸಿದ ಆಹಾರಗಳನ್ನು ಬಳಸುವುದು ಇಂದು ಹೆಚ್ಚಾಗಿದೆ. ಆಹಾರಗಳನ್ನು ಬಹಳ ದಿನಗಳವರೆಗೆ ಶೇಖರಿಸಿದಾಗ ಅವುಗಳ ಗುಣಮಟ್ಟ ಕಡಿಮೆಯಾಗುತ್ತದೆ. ಆಹಾರದಲ್ಲಿನ ಜೀವಸತ್ವ ನಷ್ಟವಾಗುತ್ತದೆ. ಇದರ ಸೇವನೆ ಕೂಡ ರಕ್ತಹೀನತೆಗೆ ಕಾರಣವಾಗುತ್ತದೆ.
ರಕ್ತಹೀನತೆಯನ್ನು ನಿರ್ಲಕ್ಷಿಸದೆ ಸೂಕ್ತ ಚಿಕಿತ್ಸೆಯಿಂದ, ಪ್ರತಿದಿನ ಕಬ್ಬಿಣ ಹಾಗೂ ವಿಟಮಿನ್‌ಯುಕ್ತ ಆಹಾರ ಸೇವಿಸುವ ಮೂಲಕ ಈ ತೊಂದರೆಯನ್ನು ನಿವಾರಿಸಿಕೊಳ್ಳಬಹುದು.

ಕಾರಣಗಳೇನು?

  •     ಸಮತೋಲನ ಆಹಾರದ ಕೊರತೆ.
  •     ಕಾಯಿಲೆಗಳು.
  •     ಜಂತುಹುಳುವಿನ ಬಾಧೆ...(ಇದು ಹೆಚ್ಚಾಗಿ ಮಕ್ಕಳಲ್ಲಿ ಕಂಡುಬರುತ್ತದೆ.)
  •     ಮಹಿಳೆಯರಲ್ಲಿ ಉಂಟಾಗುವ ಅತಿಯಾದ ಮುಟ್ಟಿನ ಸ್ರಾವ. ಬಿಳಿ ಸ್ರಾವ, ದೀರ್ಘಕಾಲ ಗರ್ಭನಿರೋಧಕ ಸಾಧನಗಳ ಅಳವಡಿಕೆ.
  •     ಅತಿಯಾದ ಕ್ಷಾರ, ಆಮ್ಲ, ಲವಣ ಪದಾರ್ಥಗಳ ಸೇವನೆ.
  •     ಅತಿಯಾದ ವ್ಯಾಯಾಮ.
  •     ಮನಸ್ಸಿನ ದುಗುಡ, ಚಿಂತೆ, ಒತ್ತಡದಲ್ಲಿ ಕೆಲಸ ಮಾಡುವುದು.
ಲಕ್ಷಣಗಳು
  •     ಮನಸ್ಸು ಹಾಗೂ ಶರೀರ ದುರ್ಬಲವಾಗುವುದು.
  •     ತಲೆಸುತ್ತು ಹಾಗೂ ಉಸಿರಾಟದ ತೊಂದರೆ.
  •     ಆಲಸ್ಯ, ಊಟ ಸೇರದಿರುವುದು.
  •     ಕೈ ಕಾಲು, ಸಂದುಗಳಲ್ಲಿ ನೋವು.
  •     ಅತಿಯಾದ ಬಾಯಾರಿಕೆ.
  •     ಅತಿಯಾಗಿ ಜೊಲ್ಲು ಸುರಿಯುವುದು.
1. ಪಂಚಕರ್ಮ ಚಿಕಿತ್ಸೆ
2. ಶಮನ ಚಿಕಿತ್ಸೆ
3. ಪಥ್ಯ-ಅಪಥ್ಯ
ಆಯುರ್ವೇದ ಮತ್ತು ರಕ್ತಹೀನತೆ
ರಕ್ತಹೀನತೆಗೆ ಸರಳವಾದ ಮನೆಮದ್ದು
  •     ಮೆಂತೆಪುಡಿ ಹಾಗೂ ಕರಿಬೇವಿನ ಪುಡಿಯನ್ನು ಖಾಲಿಹೊಟ್ಟೆಯಲ್ಲಿ ಸೇವಿಸಬೇಕು.
  •     ನುಗ್ಗೆಸೊಪ್ಪನ್ನು ಆಹಾರದಲ್ಲಿ ಸೇವಿಸಬೇಕು.
  •     ಬಾಳೆದಿಂಡಿನ ರಸವನ್ನು ಜೇನುತುಪ್ಪದೊಂದಿಗೆ ಸೇವಿಸುವುದರಿಂದ ರಕ್ತಹೀನತೆ ನಿವಾರಣೆಯಾಗುತ್ತದೆ.
  •     ನೆಲ್ಲಿಕಾಯಿ ಪುಡಿ ಹಾಗೂ ಜೀರಿಗೆ ಪುಡಿಯನ್ನು ಮಜ್ಜಿಗೆ ಜತೆ ಊಟಕ್ಕೆ ಮೊದಲು ಸೇವಿಸುವುದರಿಂದ ರಕ್ತಹೀನತೆ ಕಡಿಮೆಯಾಗುವುದು.
  •     ಆಡುಸೋಗೆ ಸೊಪ್ಪಿನ ರಸದ ಜತೆ ಜೇನುತುಪ್ಪ ಸೇರಿಸಿ ಸೇವಿಸಬೇಕು.
  •     ಒಣದ್ರಾಕ್ಷಿ ಹಾಗೂ ಖರ್ಜೂರ ಸೇವನೆ.
  •     ಬಸಳೆಸೊಪ್ಪಿನ ಉಪಯೋಗದಿಂದ ರಕ್ತಹೀನತೆ ನಿವಾರಣೆಯಾಗುವುದು.
  •     ಬೂದುಕುಂಬಳಕಾಯಿ ರಸದ ಜತೆ ಜೀರಿಗೆಪುಡಿ ಸೇವನೆ.
  •     ದಾಳಿಂಬೆ ಸರವನ್ನು ಧನಿಯಾ-ಪಿಪ್ಪಲಿ-ಶುಂಠಿ ಜತೆ ಸೇವಿಸುವುದರಿಂದಲೂ ರಕ್ತಹೀನತೆ ನಿವಾರಣೆಯಾಗುವುದು.
- ಡಾ. ರಮ್ಯಾ ಭಟ್ (9880221808)

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

ವಿಶ್ವಸಂಸ್ಥೆಯ ಭದ್ರತಾ ಮಂಡಳಿಯಲ್ಲಿ ಭಾರತ, ಆಫ್ರಿಕಾಗೆ ಸೂಕ್ತ ಪ್ರಾತಿನಿಧ್ಯ ಸಿಗಲೇಬೇಕು: ಜೈಶಂಕರ್ ಆಗ್ರಹ

ಪ್ರತಿಭಟನೆಗಳ ನಡುವೆಯೇ ಚು. ಆಯೋಗ ಮಹತ್ವದ ನಡೆ, ಹೊಸ ಉಪಾಯುಕ್ತರ ನೇಮಕ, 27 ಅಧಿಕಾರಿಗಳಿಗೆ ಹೊಸ ಹೊಣೆ!

ಮಣಿಪುರದಲ್ಲಿ ಮತ್ತೆ ಭುಗಿಲೆದ್ದ ಹಿಂಸಾಚಾರ: 30 ಮನೆ-ಅಂಗಡಿಗಳಿಗೆ ಬೆಂಕಿ, ಕನಿಷ್ಠ 5 ಸಾವು!

ಸರ್ಕಾರ ಕೇವಲ ಪ್ರೇಕ್ಷಕನಾಗಿ ಉಳಿಯಲು ಸಾಧ್ಯವಿಲ್ಲ: ದೆಹಲಿ ದಮನಕಾರಿ ಕ್ರಮ ಬೆಂಬಲಿಸಿದ ಸಚಿವ ಪ್ರಹ್ಲಾದ್ ಜೋಶಿ

'24 ಗಂಟೆಯೊಳಗೆ ಬಂಧಿತರ ಬಿಡುಗಡೆ ಮಾಡದಿದ್ದರೆ ನಾನೂ ಪ್ರತಿಭಟನೆ ಮಾಡುತ್ತೇನೆ': ಸೋನಮ್ ವಾಂಗ್‌ಚುಕ್ ಎಚ್ಚರಿಕೆ